Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಹಿರಿಯ ವಕೀಲ ವೆಂಕಟೇಶ ದೊಡ್ಡೇರಿ ಅವರ ಬಿರುಸಿನ ಪ್ರಚಾರ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಹೈಕೋರ್ಟ್ ಹಿರಿಯ ವಕೀಲರಾದ ವೆಂಕಟೇಶ ದೊಡ್ಡೇರಿ ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾತನಾಡಿದರು. 


ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಸದಸ್ಯ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿರುವ ಬೆಂಗಳೂರ ಹೈಕೋರ್ಟ್ ಹಿರಿಯ ವಕೀಲ ವೆಂಕಟೇಶ್ ದೊಡ್ಡೇರಿ ಅವರು ಶಿರಹಟ್ಟಿ ಮುಂಡರಗಿ ವಕೀಲರ ಸಂಘಗಳಿಗೆ ಭೇಟಿ ನೀಡಿ ಯುವ ಹಾಗೂ ಹಿರಿಯ ವಕೀಲರ  ನನಗೆ ಪ್ರಥಮ ಪ್ರಾತಿನಿಧ್ಯದ ಮತವನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.    ಬಹಳಷ್ಟು ಹಿರಿಯ ಹಾಗೂ ಯುವ ವಕೀಲರು ಅಭೂತಪೂರ್ವ ಬೆಂಬಲ ನೀಡಿದರು.

ವಕೀಲರ ಪರವಾಗಿ ಯಾವಾಗಲೂ ಹೋರಾಟ ಮಾಡುತ್ತಾ, ವಕೀಲರ ಧ್ವನಿಯಾಗಿ ಕೆಲಸ ಮಾಡಿದ್ದು ಅಲ್ಲದೇ ಎಸ್ಸಿ ಎಸ್ಟಿ ಆಯೋಗದ ಮಾಜಿ ಸದಸ್ಯನಾಗಿಯು ಸಹ ಕೆಲಸ ಮಾಡಿದ ಅನುಭವ ಇದ್ದು ಹಾಗಾಗಿ ಮುಂದಿನ ದಿನಗಳಲ್ಲಿ ನನ್ನ ಜಯಶೀಲರನ್ನಾಗಿ ಮಾಡಿದರೆ ಯುವ ವಕೀಲರ ಧ್ವನಿಯಾಗಿ, ವಕೀಲರ ಕಲ್ಯಾಣನ್ನಾಗಿ ಸದಾ ನಿಮ್ಮ ಜೊತೆಗೂಡಿ ಕೆಲಸ ಮಾಡುತ್ತೇನೆ ಹಾಗಾಗಿ ಈ ಬಾರಿ ನನಗೆ ಪ್ರಥಮ ಪ್ರಾತಿನಿಧ್ಯದ ಮತ ಚಲಾಯಿಸುವ ಮೂಲಕ ನನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಂವಿಧಾನದಲ್ಲಿ ಎಲ್ಲಾ ವರ್ಗದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಲಾಗಿದೆ. ಅವುಗಳನ್ನು ಕಾಪಾಡಬೇಕಿರುವುದು ವಕೀಲರ ಜವಾಬ್ದಾರಿಯಾಗಿದ್ದು, ಸಮಾಜದ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯದಾನ ಮಾಡಿದಾಗ ಮಾತ್ರ ನ್ಯಾಯಾಂಗ ವ್ಯವಸ್ಥೆಗೆ ಘನತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ವಕೀಲರು, ನ್ಯಾಯಮೂರ್ತಿಗಳು ತಮ್ಮ ವೃತ್ತಿಪರತೆಯನ್ನು ಮೆರೆಯಬೇಕು ಅಲ್ಲದೇ ಪ್ರತಿಯೊಬ್ಬರೂ ಮೂಲ ಅಗತ್ಯಗಳಾದ ಆಹಾರ, ವಸತಿ, ಅಗತ್ಯಕ್ಕೆ ತಕ್ಕ ಸೌಲಭ್ಯ ಹೊಂದುವಂತೆ ಸಂವಿಧಾನ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು, ತಾನಿಚ್ಛಿಸಿದ ಹುದ್ದೆ, ಧರ್ಮ ಮತ್ತು ವೈಯಕ್ತಿಕ ಜೀವನ ರೂಪಿಸಿಕೊಳ್ಳುವ ವ್ಯವಸ್ಥೆ ನೀಡಿದೆ. ಸರ್ವರ ಕಲ್ಯಾಣ, ಜನಾಂಗೀಯ ಕಲ್ಯಾಣವನ್ನು ಸಂವಿಧಾನ ಬಯಸುತ್ತದೆ ಅದೇ ತತ್ವದಡಿಯಲ್ಲಿ ನಾನು ಜೀವನವನ್ನು ಮತ್ತು ವಕೀಲ ವೃತ್ತಿಯನ್ನು  ನಡೆಸಿಕೊಂಡು ಬಂದಿದ್ದು ಹಾಗಾಗಿ ತಾವುಗಳು ನನಗೆ ಬೆಂಬಲ ಮತ್ತು ಶಕ್ತಿಯಾಗಿ ನಿಲ್ಲುವುದರ ಜೊತೆಗೆ ನನ್ನ ಧ್ವನಿಯಾಗಬೇಕು ಎಂದು ತಮ್ಮ ವಿನಂತಿ ಎಂದು ಎಲ್ಲಾ ವಕೀಲರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷರಾದ ಬಿ ವಿ ನೇಕಾರ, ಶಿರಹಟ್ಟಿ ವಕೀಲರ ಸಂಘದ ಅಧ್ಯಕ್ಷರಾದ ಸಂಗಮೇಶ ಗೊಬ್ಬರಗೊಂಪಿ, ಎನ್ ಐ ಬೆಲ್ಲದ, ಪ್ರಕಾಶ ವಾಲಿ, ಎನ್ ಐ ಗದಗ , ಮಹೇಶ ಹಾರೂಗೇರಿ, ರಹೀಮಸಾಬ್ ನಧಾಪ್, ಮೈಲಾರಪ್ಪ ಡಿ ಎಚ್ ನಿಂಗಪ್ಪ ಹೊಳಲಾಪುರ , ಚಂದ್ರು ಲಮಾಣಿ ಬೇವಿನಮರದ  ಹಾಗೂ ಇತರ ಹಲವಾರು ವಕೀಲರು ಅವರ ಜೊತೆಗಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು