Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ರೌಡಿಶೀಟರ್‌ಗಳ ಪರೇಡ್ ನಡೆಸಿದ ಎಸ್ಪಿ

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ನಗರದ ಡಿಆರ್ ಮೈದಾನದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿದರು.
ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ
150ಕ್ಕೂ ಹೆಚ್ಚು ರೌಡಿಶೀಟರ್​ಗಳು ಪರೇಡ್​ನಲ್ಲಿದ್ದರು.

ರೌಡಿಶೀಟರ್​ಗಳು ಯಾವುದೇ ಕಾರಣಕ್ಕೂ ಜಿಲ್ಲೆಯ ಅಪರಾಧ ಕೃತ್ಯಗಳಲ್ಲಿ, ಅನಗತ್ಯ ವ್ಯವಹಾರಗಳಲ್ಲಿ ಭಾಗಿಯಾಗಬಾರದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಕೆಟ್ಟ ಅವತಾರಗಳಲ್ಲಿದ್ದ ರೌಡಿಶೀಟರ್​ಗಳಿಗೆ ಕೂದಲು ಕಟ್​ ಮಾಡಿಸಿಕೊಳ್ಳುವಂತೆ ಎಸ್ಪಿ ಖಡಕ್ ಸೂಚನೆ ನೀಡಿದರು.‌


ಕಾಂಗ್ರೆಸ್ ಪಕ್ಷದ 28ನೇ ವಾರ್ಡ್ ನಗರ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ಳು ಸೀನಾ ಕೂಡ ಈ ಪರೇಡ್​ನಲ್ಲಿ ಭಾಗವಹಿಸಿದ್ದರು. ನಿಮ್ಮ ಮೇಲೆ ಕೊಲೆ ಕೇಸ್ ಇದೆ. ಬುಳ್ ನಾಗ ವಿಚಾರವಾಗಿ ಹಲವು ಕೇಸ್​ಗಳಿವೆ. ಮತ್ತೆ ರೌಡಿಗಳನ್ನು ಕೂಡಿಸಿಕೊಂಡು ಏನಾದರೂ ಮಾಡಿದ್ರೆ ಮತ್ತೆ ಕೇಸ್ ಹಾಕುತ್ತೇವೆ ಎಂದು ನೇರವಾಗಿ ಕಾರ್ಪೋರೇಟರ್ ಸೇರಿದಂತೆ ಇತರೆ ರೌಡಿಗಳಿಗೆ ಎಸ್ಪಿ ಎಚ್ಚರಿಕೆ ನೀಡಿ ಬೆವರಿಳಿಸಿದರು.
ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿ
, ಇಲ್ಲವಾದಲ್ಲಿ ಜೀವನಪೂರ್ತಿ ರೌಡಿಶೀಟರ್ ಕೇಸ್ ನಿಮ್ಮ ಮೇಲಿರುತ್ತದೆ. ಸಮಾಜಸೇವೆ ಮಾಡುವ ನೆಪದಲ್ಲಿ ಜನರನ್ನು ಹೆದರಿಸಿದರೆ ರೌಡಿಶೀಟರ್ ಕೇಸ್ ಹಾಕುತ್ತೇವೆ ಎಂದು ಉಮಾ ಪ್ರಶಾಂತ್ ಎಚ್ಚರಿಸಿದರು.‌

ರೌಡಿಶೀಟರ್​ಗಳ ಮೇಲೆ ನಿಗಾ ಇರಿಸಲು ಈ ಪರೇಡ್ ಮಾಡಿದ್ದೇವೆ. ಒಟ್ಟು 150 ರೌಡಿಶೀಟರ್​ಗಳು ಭಾಗಿಯಾಗಿದ್ದರು. ಅಪರಾಧದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದೇವೆ. ಕೆಲವರು ಈ ಕೆಲಸಗಳನ್ನು ಬಿಟ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂತಹವರ ಕೇಸ್​ಗಳನ್ನು ಮುಚ್ಚುತ್ತೇವೆ. ಯಾರು ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದಾರೋ, ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದೇವೆ. ಅಲ್ಲದೇ ಮತೀಯ ಗಲಭೆಗಳಲ್ಲಿ ಭಾಗಿಯಾದವರೂ ಕೂಡ ಪರೇಡ್​ಗೆ ಹಾಜರಾಗಿದ್ದರು. ನೈತಿಕ ಪೊಲೀಸ್​ಗಿರಿ ಮಾಡದಂತೆ ನಿಗಾ ವಹಿಸಿದ್ದೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು