Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಟಿಎಪಿಎಂಸಿಎಸ್ ಚುನಾವಣೆ: ಕಾಂಗ್ರೆಸ್ ಬೆಂಬಲಿತರ ಮೇಲುಗೈ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಎಂಸಿಎಸ್) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಶೇ.
93.98ರಷ್ಟು ಮತದಾನ ನಡೆದಿದೆ. 'ಬಿ' ತರಗತಿಯಿಂದ ಒಟ್ಟು 5,571 ಮತದಾರರ ಪೈಕಿ 5,238 ಮತಗಳು ಚಲಾವಣೆಯಾಗಿವೆ. 

ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತಚಲಾವಣೆ ಮಾಡಿದರು. ಸಂಜೆ 4 ಗಂಟೆ ನಂತರ ಮತಗಳ ಎಣಿಕೆ ಪ್ರಾರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಗೊಂದಲುಗಳು ಉಂಟಾಗಿಲ್ಲ. ಮತ ಚಲಾವಣೆಗೆ ಕಾದು ನಿಲ್ಲುವುದನ್ನು ತಪ್ಪಿಸಲು 12 ಕೊಠಡಿಗಳ ಮತಚಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.

ಚುನಾವಣೆಯಲ್ಲಿ  'ಬಿ' ತರಗತಿಯಿಂದ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಐದು ಅಭ್ಯರ್ಥಿಗಳು ಜಯಗಳಿಸಿದ್ದಾರೆ ಹಾಗೂ ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. 

''ತರಗತಿ ಫಲಿತಾಂಶಕ್ಕೆ ತಡೆ:
ತಾಲ್ಲೂಕಿನ  ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಎಂಸಿಎಸ್)   ನಿರ್ದೆಶಕ ಸ್ಥಾನಕ್ಕೆ ಎ ತರಗತಿಯಿಂದ 9 ಮಂದಿ ಸ್ಪರ್ಧಿಸಿದ್ದರು. 2 ವಿಎಸ್‌ಎಸ್‌ಎನ್‌ಗಳ ಪ್ರತಿನಿಧಿಗಳು ಹೈಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತಚಾಲಾಯಿಸಿದ್ದು. ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನೆಡೆಯಲಿದ್ದುನ್ಯಾಯಾಲಯದ ತೀರ್ಪಿನ ನಂತರ ಫಲಿತಾಂಶ ಪ್ರಕಟವಾಗಲಿದೆ. 

'' ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತ-
ಅಪ್ಪಣ್ಣಪ್ಪ (7), ಕೆ ಎಂ ಅಂಬರೀಷ್(10), ಬಿ ಎಸ್ ಕೆಂಪೇಗೌಡ (9),ಎಂ ಗೋವಿಂದರಾಜು ( 13), ಎನ್ ಜಗನ್ನಾಥ್ ( 14), ಜೆ.ವೈ.ಮಲ್ಲಪ್ಪ( 7), ಎಂ ವೆಂಕಟೇಶ್(14), ಬಿ.ಎನ್ ಶ್ರೀನಿವಾಸ್ ಮೂರ್ತಿ(11), ಡಿ.ಸಿದ್ದರಾಮಯ್ಯ(15). 

'ಬಿತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತ-
ಪುರುಷೋತ್ತಮ(2,602), ವಿಶ್ವಾಸ್‌ ಹನುಮಂತೇಗೌಡ (2,184),ಎಂ.ಆನಂದ(2338), ಎ.ರಾಮಾಂಜಿನಪ್ಪ(1876), ಲಕ್ಷ್ಮೀನಾಗೇಶ್(2,176), ಚಂದ್ರಕಲಾ ಮಂಜುನಾಥ್(1,872), ವಿ.ಎಸ್.ರಮೇಶ್(2,544), ಜಿ.ಕೆಂಪೇಗೌಡ (2,295). 

ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ನೆಡೆಯಿತು  ಮತ ಚಲಾವಣೆಗೆ ಸುಗಮವಾಗಲು 12 ಕೊಠಡಿಗಳಲ್ಲಿ ಮತ ಚಲಾವಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್‌ಗಳನ್ನು ಹಾಕಿಕೊಂಡು ಮತಯಾಚನೆ ನಡೆಸಿದ್ದು ವಿಶೇಷವಾಗಿತ್ತು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು