ಮನಸ್ಸಿನ ದುಗುಡ ದೂರಮಾಡಲು ಕ್ರೀಡೆ ಸಹಕಾರಿ : ವಿಜಯ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಸದಸ್ಯಕಾರ್ಯದರ್ಶಿ ವಿಜಯ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸರ್ಕಾರಿ ನೌಕರರು ಪ್ರತಿನಿತ್ಯವೂ ತಮ್ಮ ಇಲಾಖೆಯ ಕೆಲಸ ಕಾರ್ಯದ ಒತ್ತಡದಲ್ಲಿರುತ್ತಾರೆ. ಎಲ್ಲರಿಗೂ ಒಂದು ರೀತಿ ಆತಂಕ ವಾರದತುಂಬ ಇರುತ್ತದೆ. ಇದರಿಂದ ಹೊರಬರಲು ಎಲ್ಲರೊಂದಿಗೆ ಬೆರೆತು ತಮ್ಮ ಕ್ರಿಯಾಶೀತೆಯನ್ನು ಹೆಚ್ಚಿಸಿಕೊಳ್ಳಲು ಇಂತಹ ಕ್ರೀಡಾಕೂಟಗಳು ಅಗತ್ಯ. ಕ್ರೀಡೆಯಲ್ಲಿ ಎಲ್ಲರೂ ಉತ್ಸಾಹದಿಂದ ಭಾಗಿಯಾಗುವ ಮೂಲಕ ತಮ್ಮ ವಾರದ ಕೆಲಸ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಪ್ರತಿ ಆರುತಿಂಗಳಿಗೊಮ್ಮೆಯಾದರೂ ಇಂತಹ ಕ್ರೀಡಾಕೂಟಗಳನ್ನು ನಡೆಸಿ ನೌಕರ ವರ್ಗದ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕೆಂದರು.

- Advertisement - 

ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸಮೀರ್ ಪಿ.ನಂದ್ಯಾಲ್ ಮಾತನಾಡಿ, ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಎಲ್ಲರಲ್ಲೂ ಹೊಸ ಆತ್ಮವಿಶ್ವಾಸ ಮೂಡುತ್ತದೆ. ನ್ಯಾಯಾಂಗ, ಪೊಲೀಸ್, ಶಿಕ್ಷಣ, ಅರಣ್ಯ, ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತಮ್ಮದೇಯಾದ ತಂಡ ರಚಿಸಿಕೊಂಡು ಕ್ರೀಡಾಸ್ಪೂರ್ತಿಯಿಂದ ಆಟವಾಡಿ ಗೆಲುವುಸಾಧಿಸುವ ಆತ್ಮವಿಶ್ವಾಸ ಹೊಂದಿದ್ಧಾರೆ. ವಿದ್ಯಾರ್ಥಿದೆಸೆಯಲ್ಲಿದ್ದಾಗ ನಾವೆಲ್ಲರೂ ಇಂತಹ ಆಟದಲ್ಲಿ ಪಾಲ್ಗೊಂಡಿದ್ದೇವು. ಆದರೆ, ಅಧಿಕಾರಿಗಳಾಗಿಯೂ ಭಾಗವಹಿಸುವುದು ಸಂತಸತಂದಿದೆ ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ, ಅಪರ ಸಿವಿಲ್‌ನ್ಯಾಯಾಧೀಶ ಬಿ.ಆರ್.ಪುನೀತ್, ಡಿವೈಎಸ್ಪಿ ಬಿ.ಟಿ.ರಾಜಣ್ಣ, ವೃತ್ತ ನಿರೀಕ್ಷಕ ಕೆ.ಕುಮಾರ್, ಹನುಮಂತಪ್ಪಸಿರೆಹಳ್ಳಿ, ಪಿಎಸ್‌ಐಗಳಾದ ಜೆ.ಶಿವರಾಜ್, ಈರೇಶ್, ಧರೆಪ್ಪಬಾಳಪ್ಪದೊಡ್ಡಮನಿ, ಮಾರುತಿ, ಧನಂಜಯ, ಶಿವರಾಜ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಕಾರ್ಯದರ್ಶಿ ಸಿದ್ದರಾಜು, ಡಾ.ಕಾಶಿ ಮುಂತಾದವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

- Advertisement - 

 

Share This Article
error: Content is protected !!
";