ಕಾರ್ಮಿಕ ಇಲಾಖೆಯಲ್ಲಿ 75 ಕೋಟಿ ಭ್ರಷ್ಟಾಚಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣದ ಗಬ್ಬು ವಾಸನೆ ಬಯಲಿಗೆ ಬಂದಿದೆ. ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡುವ ಆಯುರ್ವೇದ ಔಷಧಗಳನ್ನು ಒಳಗೊಂಡ ನ್ಯೂಟ್ರಿಷನ್ ಕಿಟ್ನೀಡುವಲ್ಲಿ 75 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ವಿವಿಧ ಔಷಧ, ಮಾತ್ರೆಗಳು ಮಾರುಕಟ್ಟೆಯಲ್ಲಿ ಸುಮಾರು 953 ಆಗುತ್ತದೆ. ಆದರೆ ಸರ್ಕಾರ ಕಿಟ್‌ಗೆ  2600 ನಂತೆ ಬಿಲ್‌ನಲ್ಲಿ ತೋರಿಸಿದೆ. ಕಿಟ್‌ನಲ್ಲಿ ನೀಡಿರುವ ಔಷಧಗಳು ಹೋಲ್ ಸೇಲ್ ದರದಲ್ಲಿ 600-900ಕ್ಕೆ ಸಿಗುತ್ತದೆ. ಆದರೆ ಟೆಂಡ‌ರ್ ಪಡೆದಿರುವವರು 2600 ನಿಗದಿಗೊಳಿಸಿ ಬಿಲ್ ಮಾಡಿದ್ದಾರೆ.

ಟೆಂಡ‌ರ್ ಅನ್ನು ಒಬ್ಬರೇ ನೀಡಿರುವಾಗ ಪ್ರತಿ ಜಿಲ್ಲೆಗೆ ಟೆಂಡ‌ರ್ ವಿಭಜನೆ ಯಾಕೆ ಮಾಡಲಾಗಿದೆ ಎಂಬುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಉತ್ತರಿಸಬೇಕಿದೆ ಎಂದು ಬಿಜೆಪಿ ಆಗ್ರಹ ಮಾಡಿದೆ.
ಮಾನ್ಯ ಸಿದ್ದರಾಮಯ್ಯ ಅವರೇ
, ಹೆಲ್ತ್‌ಚೆಕ್‌ಅಪ್‌ಹೆಸರಲ್ಲಿ, ನ್ಯೂಟ್ರಿಷನ್ ಕಿಟ್ ಹೆಸರಿನಲ್ಲಿ ಕೋಟಿ ಕೋಟಿ ನುಂಗುತ್ತಿರುವ ಭ್ರಷ್ಟ ಸಚಿವ ಸಂತೋಷ್ ಲಾಡ್ ಅವರ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿ ಆಗ್ರಹ ಮಾಡಿದೆ.

 

- Advertisement -  - Advertisement - 
Share This Article
error: Content is protected !!
";