ಶ್ರೀರಾಮಕೃಷ್ಣರ ಮೊದಲ ಶಿಷ್ಯ ಸ್ವಾಮಿ ಅದ್ಭುತಾನಂದರು: ಮಾತಾಜೀ ತ್ಯಾಗಮಯೀ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀರಾಮಕೃಷ್ಣರ ಹದಿನಾರು ಮಂದಿ ನೇರ ಸಂನ್ಯಾಸಿ ಶಿಷ್ಯರಲ್ಲಿ ಮೊದಲಿಗರಾದ ಸ್ವಾಮಿ ಅದ್ಭುತಾನಂದರು ವಿಧೇಯ ಶಿಷ್ಯರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. 

ನಗರದ ಕುವೆಂಪುನಗರದ ನಿವಾಸಿ ಶಾರದಮ್ಮ ಚೆನ್ನವೀರಸ್ವಾಮಿ ಅವರ ನಿವಾಸದಲ್ಲಿ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಸ್ವಾಮಿ ಅದ್ಭುತಾನಂದ”ರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಸ್ವಾಮಿ ಅದ್ಭುತಾನಂದರ ಜೀವನ-ವ್ಯಕ್ತಿತ್ವ ಹಾಗೂ ಸಂದೇಶಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು‌.

- Advertisement - 

ಸರಳ ವ್ಯಕ್ತಿತ್ವದ ಅಕ್ಷರಾಭ್ಯಾಸವಿಲ್ಲದಿದ್ದರೂ ಅತ್ಯಂತ ಆಳವಾದ ಅದ್ಭುತವಾದ ಜ್ಞಾನವನ್ನು ಹೊಂದಿದ್ದ ಸ್ವಾಮಿ ಅದ್ಭುತಾನಂದರು ತಮ್ಮ ಹೆಸರಿಗೆ ಅನ್ವರ್ಥರಾಗಿದ್ದರು. ಈ ಹೆಸರನ್ನು ಅವರಿಗೆ ಸ್ವಾಮಿ ವಿವೇಕಾನಂದರು ನೀಡುತ್ತಾರೆ. ಅವರ ಬೋಧನೆಗಳನ್ನು ನಾವು “ಅದ್ಭುತವಾಣಿ”ಎಂಬ ಪುಸ್ತಕದಲ್ಲಿ ಕಾಣುತ್ತೇವೆ ಎಂದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.                        

- Advertisement - 

                         ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾರದಮ್ಮ ಚೆನ್ನವೀರಸ್ವಾಮಿ, ನಾಗವೇಣಿ ತಿಪ್ಪೇಸ್ವಾಮಿ, ಪ್ರವಲ್ಲಿಕಾ,ಎಚ್ ಲಕ್ಷ್ಮೀದೇವಮ್ಮ, ಸರಸ್ವತಿ,ಗೀತಾ ವೆಂಕಟೇಶ್ ರೆಡ್ಡಿ,ಜಿ ಯಶೋಧಾ ಪ್ರಕಾಶ್, ಅನ್ವಿಕಾ,ಕವಿತಾ, ಮಂಜುಳಾ ಉಮೇಶ್, ಯತೀಶ್ ಎಂ ಸಿದ್ದಾಪುರ, ಲೋಕಮಾನ್ಯ,ಆರ್, ಗೋವಿಂದಶೆಟ್ಟಿ, ತಿಪ್ಪಮ್ಮ, ಸರಸ್ವತಿ ನಾಗರಾಜ್, ಸೌಮ್ಯ ಪ್ರಸಾದ್,ವಿಶಾಲಮ್ಮ, ಮಂಜುಳಾ, ಶೃತಿ, ವಿಜಯಮ್ಮ,ಸುಧಾಮಣಿ, ಗೀತಾಲಕ್ಷ್ಮೀ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

 

 

 

 

Share This Article
error: Content is protected !!
";