ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ಮೂಲಭೂತ ಹಕ್ಕು ಕೇಳಿದ ವೀರಶೈವ ಲಿಂಗಾಯತರ ಮೇಲೆ ಲಾಠಿ ಚಾರ್ಜ್‌ಮಾಡಿಸಿದ ಲಿಂಗಾಯತ ವಿರೋಧಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಂದು ಬೃಹತ್‌ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಅಲ್ಪಸಂಖ್ಯಾತರ ಮೆರವಣಿಗೆಗೆ ಪೊಲೀಸ್‌ಭದ್ರತೆ ನೀಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅದೇ ವೀರಶೈವ ಲಿಂಗಾಯತರ ಮೇಲೆ ಲಾಠಿ ಬೀಸಿ ಹೋರಾಟಗಾರರನ್ನು ಹತ್ತಿಕ್ಕುವ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಕಾಂಗ್ರೆಸ್‌ಸರ್ಕಾರದ ತುಘಲಕ್‌ದರ್ಬಾರ್‌ವಿರುದ್ಧ ಬಸವ ಕಲ್ಯಾಣದಲ್ಲಿ ರಣಕಹಳೆ ಮೊಳಗಲಿದೆ ಎಂದು ಬಿಜೆಪಿ ಎಚ್ಚರಿಸಿದ್ದಾರೆ.