ಇಂದಿನಿಂದ ವಾಹನಗಳ ಖರೀದಿ ಮೇಲೆ ಹೆಚ್ಚುವರಿ ತೆರಿಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸ ವಾಹನಗಳನ್ನು ಖರೀದಿ ಮಾಡುವವರಿಗೆ ಮೇ 1ರಿಂದ ಸರ್ಕಾರದ ಹೊಸ ತೆರಿಗೆ ನೀತಿ ಅನ್ವಯವಾಗಲಿದೆ.
ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್​ ಸಿಕ್ಕಿದ್ದು
, ಮೇ-1 ರಿಂದ ಜಾರಿಗೆ ಬರಲಿದ್ದು ಹೆಚ್ಚುವರಿ ಹೊರೆ ಬೀಳಲಿದೆ.
ತೆರಿಗೆ ಹೆಚ್ಚಳದಿಂದಾಗಿ ಲಘು ಗೂಡ್ಸ್​ ವಾಹನಗಳು ದುಬಾರಿಯಾಗಲಿದ್ದು
, ಹೊಸದಾಗಿ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವವರಿಗೆ ತೆರಿಗೆ ಹೊರೆಯಾಗಲಿದೆ.

ಶೇ. 5ರಷ್ಟು ತೆರಿಗೆ-
ರಾಜ್ಯಪಾಲರು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧೇಯಕಕ್ಕೆ ಅಂಕಿತ ಹಾಕಿದ ಹಿನ್ನೆಲೆ ತೆರಿಗೆ ಶಾಕ್​ ಉಂಟಾಗಿದ್ದು
, ಇಂದಿನಿಂದ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ ಆಗಲಿದೆ. 10 ಲಕ್ಷದೊಳಗಿನ ಟ್ಯಾಕ್ಸಿ, ಲಘು ಗೂಡ್ಸ್​ ವಾಹನಗಳ ಜೀವಿತಾವಧಿ ತೆರಿಗೆ ಶೇಕಡಾ 5ರಷ್ಟು ಏರಿಕೆ ಆಗಲಿದೆ.

ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್​​​ ವಾಹನಗಳ ತೆರಿಗೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆ ಇವಿಗೆ ಶೇ.10ರಷ್ಟು ತೆರಿಗೆ ಏರಿಕೆ ಆಗಲಿದೆ. ಈವರೆಗೆ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ತೆರಿಗೆ ಇರಲಿಲ್ಲ. ಆದರೆ ಇಂದಿನಿಂದ ಈ ಎಲ್ಲಾ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆ ಆಗಲಿದೆ.

ಈ ಹಿಂದೆ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್​ಗೆ ಮೂರು ತಿಂಗಳಿಗೊಮ್ಮೆ 100 ರೂ.ನಂತೆ, 4 ಸೀಟ್ ವಾಹನಕ್ಕೆ 400 ರೂ ಪಾವತಿ ಮಾಡಬೇಕಿತ್ತು. ಆದರೆ ನೂತನ ತಿದ್ದುಪಡಿ ವಿಧೇಯಕದಲ್ಲಿ ಅದನ್ನು ಬದಲಿಸಿ, 10 ಲಕ್ಷ ದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಜೀವಿತಾವಧಿ ಶೇ 5 ರಷ್ಟು ತೆರಿಗೆ ವಿಧಿಸಲಾಗಿದೆ.

10 ಲಕ್ಷ ರೂ ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ 50 ಸಾವಿರ ರೂ ಜೀವಿತಾವಧಿ ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ 10% ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು. ಅಂದರೆ 25 ಲಕ್ಷ ರೂ. ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದರೆ 2.5 ಲಕ್ಷ ರೂ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ.

ಈ ಹಿಂದೆ 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಕಟ್ಟಡ ಸಾಮಾಗ್ರಿಗಳ ಶಿಫ್ಟಿಂಗ್ ವಾಹನಗಳ ಮೇಲೆ ಈ ಹಿಂದೆ 6% ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗಿತ್ತು. ನೂತನ ಆದೇಶದಲ್ಲಿ 8% ರಷ್ಟು ಜೀವಿತಾವಧಿ ವಿಧಿಸಲಾಗಿದೆ.

ಜೆಡಿಎಸ್ ಅಸಮಾಧಾನ- ನಿರಂತರವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ವಾಣಿಜ್ಯ ವಾಹನಗಳ ಮೇಲೆ ಶೇ 5 ರಷ್ಟು, 10 ರಷ್ಟು ತೆರಿಗೆ ಹೆಚ್ಚಳ ಮಾಡಿರುವುದನ್ನ ವಿರೋಧಿಸಿ ಸಾಕಪ್ಪ ಸಾಕು, ಕಾಂಗ್ರೆಸ್‌ಸರ್ಕಾರ ಎಂದು ಜೆಡಿಎಸ್ ಟ್ವೀಟ್ ಮಾಡಿ ಕಿಡಿ ಕಾರಿದೆ.

ರಾಜ್ಯದಲ್ಲಿ ಇನ್ಮುಂದೆ ವಾಣಿಜ್ಯ ವಾಹನಗಳ ಖರೀದಿ ಮೇಲೆ ಹೊಸದಾಗಿ ಜೀವಿತಾವಧಿ ತೆರಿಗೆ ಶೇ.5% ಹಾಗೂ ವಾಣಿಜ್ಯ ಎಲೆಕ್ಟ್ರಿಕ್‌ವಾಹನಗಳ ಮೇಲೆ ಶೇ.10% ತೆರಿಗೆಯನ್ನು ಸರ್ಕಾರ ವಸೂಲಿ ಮಾಡಲಿದೆ.

ಬೆಲೆ ಏರಿಸಿ ಜನರ ಜೀವ ಹಿಂಡುತ್ತಿರುವ ಜನಪೀಡಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ದೂರಿದೆ.

 

Share This Article
error: Content is protected !!
";