ಮರಗಳ ತೆರವಿಗೆ ವಿರೋಧಿಸದೆ ಕಾಮಗಾರಿಗೆ ಅನುವು ಮಾಡಿ ಕೊಡಿ

khushihost

ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ :
ನನ್ನ ಹಿಂದಿನ ಶಾಸಕತನದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಗಳ ಅನುದಾನ ತಂದಿದ್ದೇನೆ. ಅದರಲ್ಲೂ ತೀರ್ಥ ತೀರ್ಥಹಳ್ಳಿ – ಮೇಗರವಳ್ಳಿ – ಆಗುಂಬೆ ರಸ್ತೆ ಅಗಲೀಕರಣದ ಕಾಮಗಾರಿ ಈಗ ಮೇಗರವಳ್ಳಿಯಿಂದ ಆಗುಂಬೆಯ ವರೆಗೆ ಅರ್ಧ ಭಾಗ ಕಾಮಗಾರಿ ನಡೆದಿದೆ. ಮುಂದುವರಿದ ಕಾಮಗಾರಿಗಾಗಿ ರಸ್ತೆ ಪಕ್ಕದ ಮರಗಳ ತೆರವು ಆಗಬೇಕಾಗಿದೆ. ಹಾಗಾಗಿ ಮರಗಳ ತೆರವಿನ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸದೆ ಮುಂದಿನ ಕಾಮಗಾರಿಗೆ ಅನುವು ಮಾಡಿ ಕೊಡಿ ಎಂದು ಶಾಸಕ ಆರಗ ಜ್ಞಾನೇಂದ್ರ ರವರು ತಿಳಿಸಿದರು.

ಮೇಗರವಳ್ಳಿ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ಮೇಗರವಳ್ಳಿಯಿಂದ ಆಗುಂಬೆಯವರೆಗೆ ರಸ್ತೆಗಳ ಎರಡು ಭಾಗದ ೩೭೫ ಮರಗಳ ತೆರವಿನ ಬಗ್ಗೆ ಸಾರ್ವಜ ನಿಕರು ಹಾಗೂ ಪರಿಸರವಾದಿಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ ಅವರು ಮಾತನಾಡಿದರು.

೯೬ ಕೋಟಿ ರೂ ವೆಚ್ಚದ ಕಾಮಗಾರಿಯಲ್ಲಿ ಅರ್ಧಭಾಗ ಕಾಮಗಾರಿ ಮುಗಿದಿದ್ದು ಇನ್ನು ಇನ್ನುಳಿದ ಕಾಮಗಾರಿ ನಡೆಯಲು ಎಲ್ಲರ ಸಹಕಾರ ಅತ್ಯಗತ್ಯ. ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸುವುದು ರಸ್ತೆ ಅಭಿವೃದ್ಧಿಯಾದ ನಂತರ ಹೊಸದಾಗಿ ಗಿಡ ನೆಟ್ಟು ಅರಣ್ಯ ಬೆಳೆಸುವುದು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ತಿಳಿಸಿದರು.

ಪರಿಸರವಾದಿಗಳು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನಂತರ ಕಾಮಗಾರಿ ಮುಂದುವರಿಸಿ ಎಂದು ತಿಳಿದು ತಿಳಿಸಿದಾಗ ಶಾಸಕರು ಪರಿಸರವಾದಿಗಳಿಗೆ ಯಾವ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸಬೇಡಿ. ನಿಮ್ಮ ಎಲ್ಲಾ ಪರಿಸರ ಬಗೆಯ ಕಾಳಜಿ ನನಗೂ ಅರ್ಥವಾಗುತ್ತದೆ. ಆದರೆ ಅಭಿವೃದ್ಧಿಯಾಗಲೇಬೇಕು. ನಿಮ್ಮ ಕಾನೂನಾತ್ಮಕ ಹೋರಾಟದಲ್ಲಿ ನಾನು ಕೂಡಾ ಭಾಗಿಯಾಗುತ್ತೇನೆ. ನನಗೂ ಕೂಡಾ ಪರಿಸರದ ಬಗ್ಗೆ ಅರಿವಿದೆ. ಇತ್ತೀಚಿನ ವರ್ಷಗಳಲ್ಲಿ ತೀರ್ಥಹಳ್ಳಿ – ಮೇಗರವಳ್ಳಿ – ಆಗುಂಬೆ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿ ಹಲವಾರು ಜನ ಮೃತಪಟ್ಟಿದ್ದು ಹಲವರು ಅಂಗವಿಕಲರಾಗಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆ ವಿಸ್ತರಣೆ ಆಗಲೇಬೇಕು ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.

ಮೇಗರವಳ್ಳಿ ನಾಲೂರು ಆಗುಂಬೆ ಗ್ರಾಮ ಪಂಚಾಯ್ತಿಯ ಹೆದ್ದಾರಿ ಪಕ್ಕದ ಫಲಾನುಭವಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಸಭೆಯಲ್ಲಿ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್, ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್‌ರಾಜ್, ನ್ಯಾಷನಲ್ ಸಂಸ್ಥೆ ಗುತ್ತಿಗೆದಾರ ಅಬ್ದುಲ್ ರೆಹಮಾನ್ ಉಪಸ್ತಿತರಿದ್ದರು.

- Advertisement -  - Advertisement - 
Share This Article
error: Content is protected !!
";