ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಭಾರತೀಯ ವೀರಯೋಧರು ಗಡಿಯನ್ನು ರಕ್ಷಿಸುತ್ತಿದ್ದಾರೆ. ದೇಶಭಕ್ತರಾಗಿರಿ ನಾವು ನಮ್ಮ ದೇಶವನ್ನು ಆನ್‌ಲೈನ್‌ನಲ್ಲಿ ರಕ್ಷಿಸೋಣ ! ಎಂದು ಜೆಡಿಎಸ್ ತಿಳಿಸಿದೆ.
ಪ್ರಮುಖವಾಗಿ ಆನ್‌ಲೈನ್‌ನಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿ—ಬಲೆಗೆ ಬೀಳಬೇಡಿ ಅಥವಾ ತಪ್ಪು ಮಾಹಿತಿಗೆ ಬಲಿಯಾಗಬೇಡಿ ಎಂದು ಜೆಡಿಎಸ್ ಎಚ್ಚರಿಸಿದೆ.
ಸೈಬರ್ ಭದ್ರತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ದೇಶಭಕ್ತರಾಗಿರಿ ಜಾಗರೂಕರಾಗಿರಿ ಸುರಕ್ಷಿತವಾಗಿರಿ ಎಂದು ಜೆಡಿಎಸ್ ಮನವಿ ಮಾಡಿದೆ.