ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾದಿಗ ಸಮಾಜವು ವ್ಯಾಪಕ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಮಾದಿಗ ಸಮಾಜದ ಮುಖಂಡ ಶ್ರೀನಿವಾಸ್ ತಿಳಿಸಿದ್ದಾರೆ.
ಮಾದಿಗ ಮೀಸಲಾತಿ ಹೋರಾಟಸಮಿತಿಯ ಮುಖಂಡರು ಮಾದಿಗ ನೌಕರರ ಸಂಘದ ಪದಾಧಿಕಾರಿಗಳು ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಗಣತಿ ಸಮಯದಲ್ಲಿ ಜಾತಿ ಕಲಂನಲ್ಲಿ ಕೋಡ್ 61 ಮಾದಿಗ ಎಂದು ನಮೂದಿಸಲು ಜಾಗೃತಿ ಮೂಡಿಸಲು ಧ್ವನಿವರ್ಧಕ ದೊಂದಿಗೆ ಅಟೋ ರಿಕ್ಷಾದಲ್ಲಿ ಪ್ರಚಾರ ಕ್ಕೆ ಚಾಲನೆ ನೀಡಿದರು.