ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಸಂಘದ ಅಧ್ಯಕ್ಷ ಬಿ ಓ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ ಸಿ ಹೊರಕೇರಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಆಲಿಕಲ್ಲು ಮತ್ತು ಬಿರುಗಾಳಿ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆಗಳಾದ ಅಡಿಕೆ , ತೆಂಗು, ಬಾಳೆ, ಪಪ್ಪಾಯಿ, ದಾಳಿಂಬೆ ಇತ್ಯಾದಿ ಮರಗಳು ಬಿರುಗಾಳಿಗೆ ಸಿಲುಕಿ ರೈತರ ತೋಟಗಾರಿಕೆ ಬೆಳೆಗಳು ನೆಲ ಕಚ್ಚಿದ್ದು ಅಡಿಕೆ ದಾಳಿಂಬೆ, ಪಪ್ಪಾಯಿ ಇತರೆ ಬೆಳೆಗಳು ಆಲಿಕಲ್ಲು ಮತ್ತು ಬಿರುಗಾಳಿ ಮಳೆಗೆ ಬೆಳೆದಿರುವ ಬೆಳೆಗಳು ಹಾನಿಯಾಗಿದ್ದು ಲಕ್ಷಾಂತರ ರೂಪಾಯಿಗಳ ರೈತರಿಗೆ ನಷ್ಟವಾಗಿದೆ ಎಂದರು.
ಸರ್ಕಾರ ಹಳೇ ಮಾರ್ಗಸೂಚಿಗಳನ್ನು ಬದಲಾಯಿಸಿ ಎಷ್ಟು ಮರಗಳಿಂದ ಬೆಳೆ ಹಾನಿ ಆಗಿರುತ್ತದೆಯೋ, ಎಷ್ಟು ಮರಗಳು ಅಷ್ಟು ಮರ, ಗಿಡಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ವಿದ್ಯುತ್ ಖಾಸಗಿಕರಣ ಗೊಳ್ಳುತ್ತಿದ್ದು ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿರುತ್ತದೆ ಸರ್ಕಾರ ಕೂಡಲೇ ರೈತರಿಗೆ ಹಳೆ ಪದ್ದತಿಯಂತೆ ಅಕ್ರಮ ಸಕ್ರಮ ಯೋಜನೆ ಮುಖಾಂತರ ರೈತರ ಪಂಪ್ ಸಟ್ ಗಳಿಗೆ ವಿದ್ಯುತ್ ಸರಬರಾಜು ಮತ್ತು ಪರಿವರ್ತಕ ಅಳವಡಿಸಬೇಕೆಂದರು ಕೆಲವೇ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಉಗ್ರಾ ಹೋರಾಟ, ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ .
ಯುವ ಘಟಕದ ಅಧ್ಯಕ್ಷ ಚೇತನ್ ಯಳನಡು ಮಾತನಾಡಿ ಬೆಳೆ ಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಾಗಲಿ ಸೂಕ್ತ ಸಮಯಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುತ್ತಾರೆ. ಕಳೆದ ವರ್ಷ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವಿತರಿಸಿದ್ದ ತರಕಾರಿ ಬಿತ್ತನೆ ಬೀಜಗಳು, ತೊಗರಿ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಯಿಕಟ್ಟದೆ ರೈತರು ಬೆಳೆ ನಷ್ಟ ಅನುಭವಿಸಿ ಕಂಗಲಾಗಿದ್ದಾರೆ ಎಂದು ಅವರು ಕಿಡಿ ಕಾರಿದರು.
ಈ ವರ್ಷ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಒತ್ತಾಯಿಸಿದರು. ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮಿಕಾಂತ್ ಮಾತನಾಡಿ ರಾಸಾಯನಿಕ ಗೊಬ್ಬರ ವಿತರಿಸುವ ಅಂಗಡಿಗಳಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜ ಔಷಧಿ ಗಳಿಗೆ ಹೆಚ್ಚಿನ ದರ ಪಡೆಯುತ್ತಿದ್ದು ಕೃಷಿ ಇಲಾಖೆ ನಾಮಫಲಕದಲ್ಲಿ ಮತ್ತು ಗೊಬ್ಬರ ವ್ಯಾಪಾರಿಗಳ ಅಂಗಡಿ ಮುಂಭಾಗ ಗೊಬ್ಬರ ಔಷಧಿ ಬಿತ್ತನೆ ಬೀಜಗಳ ಬೆಲೆ ಫಲಕಗಳನ್ನು ಅಳವಡಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಿ ಓ ಶಿವಕುಮಾರ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ದ ರೈತರಿಗೆ ಕೃಷಿ ತೋಟಗಾರಿಕೆ ಇಲಾಖೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಟ್ರಾಕ್ಟರ್, ಮಿನಿ ಟ್ರಾಕ್ಟರ್, ಟಿಲ್ಲರ್, ಯಂತ್ರೋಪಕರಣಗಳ ಪರಿಕರಗಳು ಸರ್ಕಾರದಿಂದ ಸರಬರಾಜು ಆಗುತ್ತಿಲ್ಲ. ಕೂಡಲೇ ಸರ್ಕಾರ ಪರಿಕರಗಳನ್ನು ಇಲಾಖೆಗಳಿಗೆ ಸರಬರಾಜು ಮಾಡಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸುವಂತೆ ಒತ್ತಾಯಿಸಿದರು.
ಸರ್ಕಾರದ ಯೋಜನೆಗಳನ್ನು ಪಡೆಯಲು ತಾಲೂಕಿನಾದ್ಯಂತ ರೈತ ಸಂಘಟನೆಗಳನ್ನು ಬಲಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಂ ಆರ್ ಪುಟ್ಟಸ್ವಾಮಿ, ಬಿ ಡಿ ಶ್ರೀನಿವಾಸ್, ಗೌಸ್ ಪೀರ್, ಚಿಕ್ಕ ತಿಮ್ಮಯ್ಯ , ಮುಕುಂದಪ್ಪ, ಮರದಮುತ್ತು , ಎಚ್ ಎನ್ ಮೂರ್ತಪ್ಪ , ಬೋಚಾಪುರ ರಮೇಶ್ , ಅನುಸೂಯಮ್ಮ , ನಿತ್ಯಶ್ರೀ, ಉಮಾಪತಿ, ಮಲ್ಲೇಣ ನಾಗರಾಜು, ಹನುಮಂತಪ್ಪ, ಸಿದ್ದಯ್ಯ, ಜಗನ್ನಾಥ್, ಬ್ಯಾಡರಹಳ್ಳಿ ಶ್ರೀನಿವಾಸ್, ಸಿ ಎನ್ ಮಾಳಿಗೆ ಲೋಕೇಶ್, ಟಿ ಮುನಿಸ್ವಾಮಿ, ಐನಹಳ್ಳಿ ರವೀಶ್ , ಕುಂದಲಗುರ ಜಗನ್ನಾಥ್ ಇದ್ದರು.