ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಡಿನೊಂದಿಗೆ ಮುಗಿಲ ಮಲ್ಲಿಗೆ ಚಿತ್ರದ ಚಿತ್ರೀಕರಣ ಮುಕ್ತಾಯ…
ಮುಗಿಲಮಲ್ಲಿಗೆ ಚಿತ್ರದಲ್ಲಿ ಲವ್ ಲೈಫ್ ಹಾಡು.. ಶನೇಶ್ವರನ ಮುಂದೆ ಶೂಟಿಂಗ್ ಗೆ ಕುಂಬಳಕಾಯಿ..
ರಾಜೀವ್ ಕೃಷ್ಣ ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಬಂಗಾರಪೇಟೆಯ ಶ್ರೀ ಶಿವ ಶನೇಶ್ವರ ದೇವಾಲಯದಲ್ಲಿ ಕಪಿಲ್ ಅವರ ನೃತ್ಯ ಸಂಯೋಜನೆಯ “ಲವ್ ಅನ್ನೋದ್ ಇಲ್ದಿದ್ರೆ ಲೈಫ್ ತುಂಬಾ ಸಿಂಪಲ್ಲು” ಎಂಬ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯಲಾಯಿತು.
ಸದ್ಯದಲ್ಲೇ ಚಿತ್ರದ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪ್ರಾರಂಬಿಸಲಾಗುವುದು ಎಂದು ನಿರ್ದೇಶಕ ರಾಜೀವ್ ಕೃಷ್ಣಗಾಂಧಿ ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಹೊಸಕೋಟೆ ಸುತ್ತಮುತ್ತಲಿನ ಕಂಬಳಿಪುರ ಕಾಟೇರಮ್ಮ,ಭಕ್ತರಹಳ್ಳಿ, ಗಟ್ಟಿಗನಬ್ಬೆ, ಕೊಳತೂರು ಎಂ ಸತ್ಯವಾರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ ಎ ನ್ ಆರ್ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ಮುಗಿಲ ಮಲ್ಲಿಗೆ ಚಿತ್ರದಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್, ಮತ್ತು ಸಹನ ಚಂದ್ರಶೇಖರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ, ಥ್ರಿಲ್ಲರ್ ಮಂಜು, ಹಿರಿಯ ನಟಿ ಭವ್ಯ ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್, ಕಿಲ್ಲರ್ ವೆಂಕಟೇಶ್. ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ಕಾವ್ಯ ಪ್ರಕಾಶ್, ಧೀನ, ಶಂಕರ್, ರಾಜೇಶ್, ರವಿ, ಕಿರಣ್ ಗಟ್ಟಿಗನಬ್ಬೆ,
ಮೋನಿಕಾ ಕಿರಣ್ ಕುಮಾರ್, ಎಂ. ವಿ. ಸಮಯ್. ಸಿದ್ದಯ್ಯ ಎಸ್ ಹೀರೇಮಠ್, ಬೃಂದ, ಕಿಶೋರ್ ಕುಂಬ್ಳೆ. ಶಿವು ಕಾಸರಗೋಡು, ಸತ್ಯವಾರ ನಾಗೇಶ್, ಸಿ.ಟಿ.ಜಯರಾಮ, ವಸಂತ ನಾಯಕ್ ಮುಂತಾದವರು ನಟಿಸಿದ್ದಾರೆ. ಅನಿರುದ್ದ ಶಾಸ್ತ್ರಿ ಅವರ ಸಂಗೀತ, ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ, ಮೋಹನ್ ಕುಮಾರ್ ಅವರ ಪ್ರಸಾಧನ, ಪ್ರವೀಣ್ ಭದ್ರಾವತಿ , ವಿ.ಮುರುಗನ್ ಅವರ ಸಹ ನಿರ್ದೇಶನ, ವಿನಯ್ ಜಿ.ಆಲೂರು ಅವರ ಸಂಕಲನ ಮುಗಿಲ ಮಲ್ಲಿಗೆ ಚಿತ್ರಕ್ಕಿದೆ. ಮುಗಿಲ ಮಲ್ಲಿಗೆ ಚಿತ್ರದಲ್ಲಿ ಸನತ್, ಸಹನ ಚಂದ್ರಶೇಖರ್ ನಿರ್ಮಾಪಕ ಎ.ನಾಗರಾಜ ರೆಡ್ಡಿ.