ಮಹಾನ್ ನಾಯಕರ ಬದುಕಿನ ಮೌಲ್ಯಗಳು ಸಮಾಜಕ್ಕೆ ಆಧಾರ: ಪ್ರೊ.ಎಸ್.ಆರ್.ನಿರಂಜನ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಬದಲಾವಣೆ ಆರಂಭವಾಗಿವೆ. ಪ್ರಸ್ತುತ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ರವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಸರ್ಕಾರ ನೆರವಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವೈಸ್‌ಚಾನ್ಸಿಲರ್ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು.

ಅವರು, ಕಾರ್ಯನಿಮಿತ್ತ ಚಳ್ಳಕೆರೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ(ವೈಟಿಎಸ್)ರವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್‌ಐಸಿ ದುಗ್ಗಾವರರಂಗಸ್ವಾಮಿ ಬಳಗ ಅವರನ್ನು ಸನ್ಮಾನಿಸಿ, ಅಭಿನಂದಿಸಿತು.

ಯಾವುದೇ ಕ್ಷೇತ್ರದಲ್ಲಾಗಲಿ ನಾವು ಬದಲಾವಣೆಕಡೆ ಗಮನಹರಿಸಿದಾಗ ಮಾತ್ರ ನಮ್ಮ ಕೆಲಸ ಸಾರ್ಥಕವಾಗುತ್ತದೆ. ಯಾವುದೇ ಸಂದರ್ಭದಲ್ಲಾದರೂ ನಾವು ದಕ್ಷತೆ, ಪ್ರಾಮಾಣಕತೆಯಿಂದ ನಮ್ಮ ಕರ್ತವ್ಯ ಮಾಡಬೇಕಿದೆ.

ಸ್ವಾಮಿವಿವೇಕಾನಂದ, ರಾಮಕೃಷ್ಣಪರಮಹಂಸರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಲ್ಲದೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಮೌಲ್ಯಗಳನ್ನು ನಾವು  ಬದುಕಿನಲ್ಲಿ ರೂಢಿಸಿಕೊಂಡಾಗ ಮಾತ್ರ ಸಾರ್ಥಕ ಜೀವನವನ್ನು ಕಾಣಬಹುದು. ಸಮಾಜದಲ್ಲಿ ನಾವೆಲ್ಲರೂ ಸಮಾನತೆಯಿಂದ ಬಾಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಓಬಳೇಶ್ ಮಾತನಾಡಿ, ಪ್ರೊ.ಎಸ್.ಆರ್.ನಿರಂಜನ್ ಅಪಾರ ಜ್ಞಾನಸಂಪತ್ತನ್ನು ಹೊಂದಿದ್ದಾರೆ. ಶಿಕ್ಷಣದ ಬಗ್ಗೆ ಅವರಿಗೆ ಇರುವ ಸೇವಾ ಮನೋಭಾವನೆ ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಆಳಾವಾದ ಅಭ್ಯಾಸ ಮಾಡಿದ್ದು, ಅವರ ಚಿಂತನೆಗಳನ್ನು ಸಾಕಾರಗೊಳಿಸುವ ಕಾರ್ಯನಡೆಯಬೇಕಿದೆ. 

ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಿ.ಎಂ.ಅಶೋಕ್, ಎಲ್‌ಐಸಿ ದುಗ್ಗಾವರರಂಗಸ್ವಾಮಿ, ಸಿ.ಎಂ.ವಿಶ್ವನಾಥ, ಡಾ.ಎನ್.ಬಿ.ಗಟ್ಟಿ, ಡಾ.ರೇವಣ್ಣ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಗಂಗಾಧರ, ಕೆ.ಬೋರಯ್ಯ, ಗೋವಿಂದಪ್ಪ, ಬಡಗಿಪಾಪಣ್ಣ, ಶಾಂತವೀರಪ್ಪ, ಟಿ.ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";