Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಣೇಹಳ್ಳಿಯಲ್ಲಿ 20 ದಿನಗಳ ಯುವಜನ ಶೈಕ್ಷಣಿಕ ರಂಗ ಶಿಬಿರ: ಅರ್ಜಿ ಆಹ್ವಾನ

Advertisement

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಣೇಹಳ್ಳಿ  ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ
, ಶ್ರೀ ಶಿವಕುಮಾರ ಕಲಾ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ  2026ರ ಮೇ 17 ರಿಂದ ಜೂನ್ 5 ರವರೆಗೆ  "ಯುವಜನ ಶೈಕ್ಷಣಿಕ ರಂಗ ಶಿಬಿರ"  ಹೊಸ ತಲೆಮಾರಿಗೆ 20 ದಿನಗಳ ವಸತಿ ಸಹಿತ ರಂಗ ಶಿಕ್ಷಣವನ್ನು ಆಯೋಜಿಸಲಾಗಿದೆ.

ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕಳೆದ 18 ವರ್ಷಗಳಿಂದ ರಂಗಶಿಕ್ಷಣ ನೀಡುತ್ತಾ ಬಂದಿರುವ ಈ ಸಂಸ್ಥೆಯು, ರಂಗಾಸಕ್ತ ಯುವಜನತೆಗಾಗಿ ಈ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.
ತರಬೇತಿ ವಿಷಯಗಳು: ನಟನೆ
, ಸಂವಹನ ಕೌಶಲ್ಯ, ರಂಗ ವಿನ್ಯಾಸದ ಪ್ರಾಯೋಗಿಕ ಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ತಿಳುವಳಿಕೆ. ವಿಶೇಷತೆ: ನುರಿತ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರಿಂದ ತರಬೇತಿ ಹಾಗೂ ಖ್ಯಾತ ನಿರ್ದೇಶಕರಿಂದ ನಾಟಕ ಪ್ರಯೋಗ.
ಸೌಲಭ್ಯ: ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.

ಪ್ರವೇಶಾತಿ ನಿಯಮಗಳು: ವಯೋಮಿತಿ: 18 ರಿಂದ 32 ವರ್ಷದೊಳಗಿರಬೇಕು. ವಿದ್ಯಾರ್ಹತೆ: ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.

ಆದ್ಯತೆ: ರಂಗಭೂಮಿ ಅನುಭವವಿರುವ ಕಲಾವಿದರು ಹಾಗೂ ಪದವಿ/ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಪ್ರವೇಶ ಶುಲ್ಕ: 500 (ಐನೂರು ರೂಪಾಯಿಗಳು ಮಾತ್ರ).
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಅರ್ಜಿಗಳನ್ನು ಆನ್‌ಲೈನ್ ಮೂಲಕ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲು ಮೇ 15, 2026 ಕೊನೆಯ ದಿನಾಂಕವಾಗಿದೆ.
ವಿಳಾಸ: ಪ್ರಾಂಶುಪಾಲರು
, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ - 577515.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ: 9880872740, 9448398144, 9480282791 , 9902100881

 ವೆಬ್‌ಸೈಟ್* : https://theatreschoolsanehalli.in

ಹೊಸಬರಿಗೆ ರಂಗಭೂಮಿಯ ಪ್ರವೇಶಕ್ಕೆ ಹಾಗೂ ಅನುಭವವಿರುವವರಿಗೆ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಇದು ಉತ್ತಮ ಅವಕಾಶ.  

ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ.ಟಿ.ಎಚ್.ಲವಕುಮಾರ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ- academy.nataka@gmail.ಕಾಂ  ಇವರನ್ನು ಸಂಪರ್ಕಿಸಬಹುದು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಪ್ರಯುಕ್ತ ವೈಭವೋಪೇತವಾಗಿ ನಡೆದ ಮೆರವಣಿಗೆ  ಜಿಟಿಟಿಸಿ ಡಿಪ್ಲೋಮಾ ಕೋರ್ಸ್‍ಗಳಿಂದ ಉಜ್ವಲ ಭವಿಷ್ಯ-ಪಿ.ರಘುವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು ಮೇ 15 ಕೊನೆಯ ದಿನಅರಿವು ಶೈಕ್ಷಣಿಕ ಸಾಲ ಯೋಜನೆ: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಕ್ರಿಯಾಶೀಲ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರಗಳು ಸಹಕಾರಿ- ಕಲ್ಯಾಣಾಧಿಕಾರಿ ಜೆ.ವೈಶಾಲಿಕರವಸೂಲಿಗಾರರ ಹುದ್ದೆಯ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಅವಕಾಶಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆವಿಶ್ವ ಅಮ್ಮಂದಿರ ದಿನಾಚರಣೆ-ಅಮ್ಮಾ ಕವಿತೆಕಾಂಗ್ರೆಸ್‌ಗೆ 'ಮೊಟ್ಟೆ' ಏಟಿನ ಭವಿಷ್ಯ ನುಡಿದ ಬಿಜೆಪಿ ನಾಯಕ!ಪತ್ನಿ-ಮಕ್ಕಳನ್ನು ಕರೆದೊಯ್ಯಲು ಹೋದ ಅಳಿಯನಿಗೆ ಬೆಂಕಿ ಹಚ್ಚಿದ ಅತ್ತೆ ಮನೆಯವರು!