Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2168ನೇ ಅನ್ನದಾಸೋಹ, ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಲಿಕಾ ಪರಿಕರಗಳ ವಿತರಣೆ ಹಾಗೂ 2168 ನೇ ದಿನದ ಪ್ರಯುಕ್ತ ನಿರ್ಗತಿಕ ಕಡು ಬಡವರಿಗೆ
, ವಯೋವೃದ್ಧರಿಗೆ  ಆಹಾರ ವಿತರಣೆ ,ವಸ್ತ್ರ ವಿತರಣೆ ಮಾಡುವ ಮೂಲಕ ದಾನಿಗಳು ತಮ್ಮ ವಿಶೇಷದಿನವನ್ನು ಆಚರಿಸಿದರು .

ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ನಿರಂತರವಾಗಿ ಸಾಗುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪನವರ ಸ್ಮರಣಾರ್ಥವಾಗಿ ಆಹಾರವಿತರಣೆ ಮಾಡಿದರೆ ಮತೋರ್ವ ದಾನಿ ಬಾಶೆಟ್ಟಿಹಳ್ಳಿ ಮನೋಹರ (ಮನು) ರವರು ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಿ ತಮ್ಮ ಸಂಭ್ರಮವನ್ನು ಆಚರಿಸಿಕೊಂಡರು.

ಈ ವೇಳೆ ದಾನಿ ಬಾಶೆಟ್ಟಿಹಳ್ಳಿ ಮನು ಮಾತನಾಡಿ ದುಂಡು ವೆಚ್ಚ ಮಾಡಿ ವಿಶೇಷ ದಿನಗಳನ್ನು ಆಚರಿಸುವುದಕ್ಕಿಂತ ಈ ರೀತಿ ಅಗತ್ಯವಿರುವ ಜನರ ನಡುವೆ ನಮ್ಮ ಸಂಭ್ರಮಾಚರಣೆ ಮಾಡುವುದು ಅರ್ಥಪೂರ್ಣವಾಗಿದೆ .ಮಲ್ಲೇಶ್  ರವರ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ವಿತರಣೆ ಮಾಡಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ  ಮುಂದೆಯೂ ನಮ್ಮ ವಿಶೇಷದಿನಗಳನ್ನು ಇಲ್ಲೇ ಆಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ದಾನಿ ರಾಜು ಮಾತನಾಡಿ ನಮ್ಮ ತಂದೆಯವರಾದ ದಿವಂಗತ  ರಾಮಚಂದ್ರಪ್ಪ ನವರ ಸ್ಮರಣಾರ್ಥವಾಗಿ ಹಸಿದವರಿಗೆ ಆಹಾರ ವಿತರಣೆ ಮಾಡಲಾಗಿದ್ದು ಕುಟುಂಬ ಸಮೇತರಾಗಿ ಬಂದು ಜನರಿಗೆ ಆಹಾರ ವಿತರಣೆ ಮಾಡುವುದು ವಿಶೇಷವಾಗಿದೆ .ನೂರಾರು ನಿರ್ಗತಿಕ ಕಡು ಬಡವರು ಇಲ್ಲಿ  ಆಹಾರ ಬಯಸಿ ಬರುವುದು ಇಲ್ಲಿನ ನೈಜತೆಗೆ ಉದಾಹರಣೆ ಮಲ್ಲೇಶ್ ಸಾರಥ್ಯದಲ್ಲಿ ನಡೆಯುತ್ತಿರುವ ಈ ಕಾರ್ಯವು ನಿತ್ಯ ನಿರಂತರ ಸಾಗಲಿ ಎಂದರು .

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ನಿತ್ಯ ನೂರಾರು ಜನರಿಗೆ ದಾನಿಗಳ ನೆರವಿನಿಂದ ಆಹಾರ ವಿತರಣೆ ಮಾಡುತ್ತಿದ್ದು ದಾನಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಕೈಯಾರೆ ಆಹಾರ ವಿತರಣೆ ಮಾಡುವುದು ಇಲ್ಲಿನ ವಿಶೇಷ ಅಲ್ಲದೆ ಈ ಅನ್ನದಾಸೋಹವು ಕೇವಲ ಅನ್ನದಾನಕ್ಕೆ ಸೀಮಿತವಾಗದೆ ಶಿಕ್ಷಣ , ಕಲೆ , ಸಂಸ್ಕೃತಿ ಇತರೆ ವಿಭಾಗಗಳಿಗೆ ವಿಸ್ತರಿಸಿದ್ದು  ದಾನಿಗಳ ಅವಶ್ಯಕತೆ ಹೆಚ್ಚಿದೆ ನಿಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವಂತೆ ಮನವಿ ಮಾಡಿದರು . 

ಈ ವೇಳೆ  ಮನೋಹರ್  ಬಾಶೆಟ್ಟಿ ಹಳ್ಳಿ , ಯಶೋಧಮ್ಮ ,ರಾಜು , ಮಂಜುಳಾ , ಶೀಲಾ , ಭಾಸ್ಕರ್ ಭಾರತಿ , ಸೋಮಶೇಖರ್  ,ಜಯಲಕ್ಷ್ಮಿ ಸೇರಿದಂತೆ ಹಲವರು ಹಾಜರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ