Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗಾನ ಕೋಗಿಲೆ ಎಸ್. ಜಾನಕಿಗೆ ನುಡಿ ನಮನ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಚಿತ್ರರಂಗ ಖ್ಯಾತ ಗಾಯಕಿ
   ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

 ನಗರದ ಕನ್ನಡ ಜಾಗೃತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು ಮತ್ತು ಸುಸ್ವರ ಟ್ರಸ್ಟ್ ಸಹಯೋಗದಲ್ಲಿ  ನಡೆದ ನುಡಿ ನಮನ‌ ಕಾರ್ಯಕ್ರಮದಲ್ಲಿ  ಮಾತನಾಡಿದ ಎಸ್.ಜಾನಕಿ‌ ಅಭಿಮಾನಿಗಳು ಮತ್ತು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು,   ಎಸ್.ಜಾನಕಿ‌ ಅವರು‌ ಭಾರತೀಯ ಚಿತ್ರರಂಗದ ಹೆಮ್ಮೆಯ ಗಾಯಕಿ.  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ  17 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ  ಹಾಡುಗಳನ್ನು ಹಾಡಿ ಬಹುಭಾಷಾ ಗಾಯಕಿಯಾಗಿ ದಾಖಲೆ ಬರೆದಿದ್ದಾರೆ ಎಂದರು.

Advertisement

ಎಸ್.ಜಾನಕಿ‌ ಅವರು ಹಾಡಿರುವ ಭಕ್ತಿಗೀತೆ, ಭಾವಗೀತೆ, ಜಾನಪದ ಮತ್ತು ಚಿತ್ರಗೀತೆಗಳು‌ ಕೇಳುಗರ ಮನಗೆದ್ದಿವೆ. ಪ್ರೀತಿ, ವಿರಹ, ಸಂತೋಷ, ದುಃಖ, ಕೋಪ ಹೀಗೆ ಎಲ್ಲಾ ಭಾವನೆಗಳನ್ನೂ ತಮ್ಮ ಧ್ವನಿಯಲ್ಲೇ ಅತ್ಯಂತ ಸುಂದರವಾಗಿ ಜೀವಂತಗೊಳಿಸುತ್ತಿದ್ದರು. ಜಾನಕಿಯವರ ಧ್ವನಿಯ ಬಹುದೊಡ್ಡ ವೈಶಿಷ್ಟ್ಯವೆಂದರೆ ಅವರು ಚಿಕ್ಕ ಮಕ್ಕಳ ಧ್ವನಿಯನ್ನು ಅನುಕರಿಸಿ ಹಾಡುತ್ತಿದ್ದ ರೀತಿ. ಅನೇಕ ಚಿತ್ರಗಳಲ್ಲಿ ಅವರು ಹಾಡಿದ ತುಂಟಾಟದ ಮತ್ತು ಮಕ್ಕಳ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ ಎಂದರು. 

ಗಮನ ಸೆಳೆದ ಗಾನ ನಮನ :
 ಎಸ್.ಜಾನಕಿ ನುಡಿ ನಮನ‌ ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕಿನ ಕಲಾವಿದರುಗಳು‌ ನಡೆಸಿಕೊಟ್ಟ ಎಸ್.ಜಾನಕಿ ಹಾಡಿರುವ ಮಧುರ ಚಲನಚಿತ್ರಗಳ ಗಾಯನ ಪ್ರೇಕ್ಷಕರ ಗಮನ‌ ಸೆಳೆಯಿತು. 

ಕಲಾವಿದರಾದ ನಾಗರತ್ನ ಮಹಾಬಲೇಶ್ವರ್, ರಾಮಕೃಷ್ಣ, ರವಿರಾಜ್ಚಂದ್ರಶೇಖರ್, ಸಿ.ನಟರಾಜ್, ಮಲ್ಲೇಶ್, ನಾಗರತ್ನ, ಪುಷ್ಪ, ಜಯಮ್ಮ ಮತ್ತು ಸುಸ್ವರ ಬಳಗದ ಕಲಾವಿದರು ಎಸ್.ಜಾನಕಿ ಅವರ ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಕಲಾ ರಸಿಕರಿಗೆ ಜಾನಕಿ ಅವರ ಗಾನರಸದೌತಣ ಬಡಿಸಿದರು. 

ಈ ಕಾರ್ಯಕ್ರಮದಲ್ಲಿ ಕನ್ನಡಪರ  ಹಿರಿಯ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವ್ ನಾಯಕ್, ಕನ್ನಡ ಜಾಗೃತ ಪರಿಷತ್ತು  ಟ್ರಸ್ಟಿಗಳಾದ ಡಾ.ಎ.ಓ.ಆವಲಮೂರ್ತಿ, ಎಸ್.ಮಹಾಬಲೇಶ್ವರ್ಕಾರ್ಯದರ್ಶಿ ಡಿ.ಪಿ.ಆಂಜನೇಯದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ‌ ಅಧ್ಯಕ್ಷ ಡಿ.ಶ್ರೀಕಾಂತ್, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್ಕನ್ನಡಪರ ಸಂಘಟನೆಗಳ ಮುಖಂಡರುಗಳಾದ  ಡಿ.ವೆಂಕಟೇಶ್, ನಾಗರಾಜ್, ಬಿ.ಜಿ.ಅಮರನಾಥ್, ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಸುಸ್ವರ ಟ್ರಸ್ಟ್  ಪದಾಧಿಕಾರಿಗಳು ಮತ್ತು ಎಸ್.ಜಾನಕಿ ಅಭಿಮಾನಿಗಳು ಭಾಗವಹಿಸಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು