Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭ್ರಷ್ಟ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ 38.10 ಕೋಟಿ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 12 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 48 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು 38.10 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ಸಂದರ್ಭದಲ್ಲಿ ಪತ್ತೆಹಚ್ಚಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಬೆಂಗಳೂರು ಗ್ರಾಮಾಂತರ-1, ಚಿತ್ರದುರ್ಗ-1, ದಾವಣಗೆರೆ-2, ಹಾವೇರಿ-2, ಬೀದರ್-1, ಉಡುಪಿ-1, ಬಾಗಲಕೋಟೆ-1, ಹಾಸನ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ 1 ಸೇರಿದಂತೆ ಒಟ್ಟು 12 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಧಿಕ ಆದಾಯ ಹೊಂದಿರುವ ಕುರಿತು ಮತ್ತು ಹೆಚ್ಚು ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಪ್ರಕರಣಗಳ ದೂರು ದಾಖಲಾಗಿವೆ.


ಮಂಗಳವಾರ ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 48 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ಶೋಧನಾ ಕಾರ್ಯ ಕೈಗೊಂಡಿದ್ದರು. 12 ಸರ್ಕಾರಿ ಅಧಿಕಾರಿಗಳ ಮೇಲಿನ ಶೋಧನಾ ಸಮಯದಲ್ಲಿ ಕಂಡು ಬಂದಿರುವ ಅಸಮತೋಲನ ಆಸ್ತಿ ವಿವರ.( ಲೋಕಾಯುಕ್ತ ಪೊಲೀಸರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಇರುವಂತೆ):


ಮಂಜುನಾಥ ಜಿ., ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು ಒಟ್ಟು ಆಸ್ತಿಯ ಮೌಲ್ಯ 3.24 ಕೋಟಿ ರೂ.
4
ಸ್ಥಳಗಳಲ್ಲಿ ಶೋಧ, 1 ನಿವೇಶನ, 1 ವಾಸದ ಮನೆ, 1 ಪ್ಲಾಟ್, 10,53,240 ರೂ. ನಗದು, 31,75,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, 29,50,000 ರೂ. ಬೆಲೆ ಬಾಳುವ ವಾಹನಗಳು, 67,35,000 ರೂ. ಇತರ ಮತು ಗೃಹೋಪಯೋಗಿ ವಸ್ತುಗಳು.

ವಿ. ಸುಮಂಗಲ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಹೊಸಕೆರೆಹಳ್ಳಿ, ಬೆಂಗಳೂರು (ಹಾಲಿ ಅಮಾನತು).
ಒಟ್ಟು ಆಸ್ತಿಯ ಮೌಲ್ಯ 7.32 ಕೋಟಿ ರೂ., 6 ಸ್ಥಳಗಳಲ್ಲಿ ಶೋಧ,
4
ನಿವೇಶನಗಳು, 5 ವಾಸದ ಮನೆಗಳು, 19 ಎಕರೆ ಕೃಷಿ ಜಮೀನು, 1,00,50,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, 22,00,000 ರೂ. ಬೆಲೆ ಬಾಳುವ ವಾಹನಗಳು, 96,73,000 ರೂ. ಬೆಲೆಬಾಳುವ ಷೇರು ಮತ್ತು ಮ್ಯೂಚುವಲ್ ಫಂಡ್, 4,85,200 ಬೆಲೆ ಬಾಳುವ ಗೋಲ್ಡ್‌ ಬಾಂಡ್.


ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ, ಬೆಂಗಳೂರು.
ಒಟ್ಟು ಆಸ್ತಿಯ ಮೌಲ್ಯ 4.66 ಕೋಟಿ ರೂ. 5 ಸ್ಥಳಗಳಲ್ಲಿ ಶೋಧ<
2
ನಿವೇಶನಗಳು, 2 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು 51,61,960 ರೂ. ಬೆಲೆ ಬಾಳುವ ಚಿನ್ನಾಭರಣಗಳು, 24,21,752 ರೂ. ಬೆಲೆ ಬಾಳುವ ವಾಹನಗಳು, 24,83,600 ರೂ. ಇತರ ಮತು ಗೃಹೋಪಯೋಗಿ ವಸ್ತುಗಳು.

ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಒಟ್ಟು ಆಸ್ತಿಯ ಮೌಲ್ಯ
5.14 ಕೋಟಿ ರೂ., 3 ಸ್ಥಳಗಳಲ್ಲಿ ಶೋಧ.
4 ನಿವೇಶನಗಳು, 3 ವಾಸದ ಮನೆಗಳು, 15 ಎಕರೆ 8 ಗುಂಟೆ ಕೃಷಿ ಜಮೀನು, 26,100 ರೂ. ನಗದು, 60,39,233 ಬೆಲೆ ಬಾಳುವ ಚಿನ್ನಾಭರಣಗಳು, 18,50,000 ಬೆಲೆಬಾಳುವ ವಾಹನಗಳು, 33,00,409 ರೂ. ಬೆಲೆಬಾಳುವ ಇತರ ವಸ್ತುಗಳು.

ಜಗದೀಶ್​ ನಾಯ್ಕ ಕೆ. ಹೆಚ್, ಸಹಾಯಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ದಾವಣಗೆರೆ. ಒಟ್ಟು ಆಸ್ತಿಯ ಮೌಲ್ಯ 2.4 ಕೋಟಿ ರೂ. 5 ಸ್ಥಳಗಳಲ್ಲಿ ಶೋಧ.
5 ನಿವೇಶನಗಳು, 3 ವಾಸದ ಮನೆ, 17 ಎಕರೆ ಕೃಷಿ ಜಮೀನು, 1,82,625 ರೂ. ಬೆಲೆ ಬಾಳುವ ಚಿನ್ನಾಭರಣಗಳು, 27,00,000 ರೂ. ಬೆಲೆಬಾಳುವ ವಾಹನಗಳು, 20,00,000 ರೂ. ಇತರ ವಸ್ತುಗಳು.


ಬಿ.ಎಸ್. ನಡುವಿನ ಮನೆ, ಕಿರಿಯ ಸಹಾಯಕ (ಪ್ರಸ್ತುತ ಹಿರಿಯ ಸಹಾಯಕ), ಕರ್ನಾಟಕ ಆಹಾನ ಮತ್ತು ನಾಗರೀಕ ಸರಬರಾಜು ನಿಗಮ, ದಾವಣಗೆರೆ ಜಿಲ್ಲೆ. ಒಟ್ಟು ಆಸ್ತಿಯ ಮೌಲ್ಯ 2.30 ಕೋಟಿ ರೂ., 7 ಸ್ಥಳಗಳಲ್ಲಿ ಶೋಧ, 1 ನಿವೇಶನ, 4 ವಾಸದ ಮನೆಗಳು, 20 ಎಕರೆ ಕೃಷಿ ಜಮೀನು, 60,554 ರೂ. ನಗದು, 16,25,130 ರೂ. ಬೆಲೆ ಬಾಳುವ ಚಿನ್ನಾಭರಣಗಳು, 42,90,000 ಬೆಲೆಬಾಳುವ ವಾಹನಗಳು.


ಬಸವೇಶ ಶಿವಪ್ಪ ಶಿಡೇನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲೂಕು ಪಂಚಾಯಿತಿ, ಹಾವೇರಿ ಜಿಲ್ಲೆ.
ಒಟ್ಟು ಆಸ್ತಿಯ ಮೌಲ್ಯ
1.67 ಕೋಟಿ ರೂ., 2 ಸ್ಥಳಗಳಲ್ಲಿ ಶೋಧ.
6 ನಿವೇಶನಗಳು, 1 ವಾಸದ ಮನೆ, 4,450 ರೂ. ನಗದು, 48,97,279 ರೂ. ಬೆಲೆ ಬಾಳುವ ಚಿನ್ನಾಭರಣಗಳು, 13,00,000 ರೂ. ಬೆಲೆಬಾಳುವ ವಾಹನಗಳು,40,10,000 ರೂ. ಇತರ ವಸ್ತುಗಳು.


ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕರು, ತಾಲೂಕು ಕಚೇರಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ.
ಒಟ್ಟು ಆಸ್ತಿಯ ಮೌಲ್ಯ
2.25 ಕೋಟಿ ರೂ., 3 ಸ್ಥಳಗಳಲ್ಲಿ ಶೋಧ
2 ನಿವೇಶನಗಳು, 2 ವಾಸದ ಮನೆಗಳು, 11 ಎಕರೆ 20 ಗುಂಟೆ ಕೃಷೀ ಜಮೀನು, 1,45,650 ರೂ. ನಗದು, 26,02,812 ರೂ. ಬೆಲೆ ಬಾಳುವ ಚಿನ್ನಾಭರಣಗಳು, 15,00,000 ಬೆಲೆಬಾಳುವ ವಾಹನಗಳು, 57,42,000 ರೂ. ಇತರ ವಸ್ತುಗಳು.


ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್, ಬೀದರ್ ಜಿಲ್ಲೆ.
ಒಟ್ಟು ಆಸ್ತಿಯ ಮೌಲ್ಯ
3.39 ಕೋಟಿ ರೂ., 4 ಸ್ಥಳಗಳಲ್ಲಿ ಶೋಧ.
2 ನಿವೇಶನಗಳು, 1 ವಾಸದ ಮನೆ, 33 ಎಕರೆ ಕೃಷಿ ಜಮೀನು, 83,09,000 ರೂ. ನಗದು, 5,02,500 ಬೆಲೆ ಬಾಳುವ ಚಿನ್ನಾಭರಣಗಳು, 43,77,000 ರೂ. ಬೆಲೆ ಬಾಳುವ ವಾಹನಗಳು, 24,60,000 ರೂ. ಇತರ ವಸ್ತುಗಳು.


ಲಕ್ಷ್ಮೀನಾರಾಯಣ ಪಿ ನಾಯಕ್, ಆರ್.ಟಿ.ಓ, ಉಡುಪಿ.
ಒಟ್ಟು ಆಸ್ತಿಯ ಮೌಲ್ಯ
2.21ಕೋಟಿ ರೂ., 5 ಸ್ಥಳಗಳಲ್ಲಿ ಶೋಧ.
3 ನಿವೇಶನಗಳು, 2 ವಾಸದ ಮನೆಗಳು, 1,15,000 ರೂ. ನಗದು, 5,10,000 ರೂ. ಬೆಲೆ ಬಾಳುವ ಚಿನ್ನಾಭರಣಗಳು, 1,67,39,234 ಇತರ (ಫೋನ್, ಎನ್.ಆರ್.ಐ ಬ್ಯಾಂಕ್ ಬ್ಯಾಲೆನ್‌ಸ್‌, ಎಫ್‌ಡಿ ಹಾಗೂ ಬ್ರೋಕರ್ ಆಫೀಸ್).


ಚೇತನ್, ಕಿರಿಯ ಅಭಿಯಂತರ, ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ.
ಒಟ್ಟು ಆಸ್ತಿಯ ಮೌಲ್ಯ
1.67 ಕೋಟಿ ರೂ., 2 ಸ್ಥಳಗಳಲ್ಲಿ ಶೋಧ.
4 ನಿವೇಶನಗಳು, 1 ವಾಸದ ಮನೆ, 36,200 ರೂ. ನಗದು, 24,81,360 ರೂ. ಬೆಲೆ ಬಾಳುವ ಚಿನ್ನಾಭರಣಗಳು, 20,00,000 ರೂ. ಬೆಲೆಬಾಳುವ ವಾಹನಗಳು, 2,11,214 ರೂ. ಬ್ಯಾಂಕ್ ಬ್ಯಾಲೆನ್ಸ್‌.

ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ.
ಒಟ್ಟು ಆಸ್ತಿಯ ಮೌಲ್ಯ
2.17 ಕೋಟಿ ರೂ., 4 ಸ್ಥಳಗಳಲ್ಲಿ ಶೋಧ.
3 ನಿವೇಶನಗಳು, 1 ವಾಸದ ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು, 15,09,490 ರೂ. ನಗದು, 15,31,848 ರೂ. ಬೆಲೆ ಬಾಳುವ ಚಿನ್ನಾಭರಣಗಳು, 64,53,000 ರೂ. ಬೆಲೆಬಾಳುವ ವಾಹನಗಳು, 10,00,000 ರೂ. ಇತರ ವಸ್ತುಗಳು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ