Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Traveling Tips

ಬೆಂಗಳೂರಿನಿಂದ 4 ಪ್ರಮುಖ ಪ್ರವಾಸಿ ಪ್ಯಾಕೇಜ್‍ಗಳು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು - ಗಗನಚುಕ್ಕಿ (ಐರಾವತ ಬಸ್ ಪ್ರವಾಸ):
ಪ್ರವಾಸಿಗರು ಬೆಂಗಳೂರಿನಿಂದ ಹೊರಟು ಶಿವನಸಮುದ್ರದ ಗಗನಚುಕ್ಕಿ ಜಲಪಾತ
, ತಲಕಾಡು, ಸೋಮನಾಥಪುರ ಮತ್ತು ಮುಡುಕುತೊರೆ ತಾಣಗಳನ್ನು ವೀಕ್ಷಿಸಬಹುದು. ಈ 340 ಕಿ.ಮೀ ಪ್ರಯಾಣದ ಪ್ಯಾಕೇಜ್‍ಗೆ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಈ ಪ್ರವಾಸವು ಜುಲೈ 05, 2025 ರಿಂದ ಲಭ್ಯವಿರಲಿದೆ.

ಬೆಂಗಳೂರು - ಗಗನಚುಕ್ಕಿ (ಐರಾವತ ಕ್ಲಬ್ ಕ್ಲಾಸ್):
ಇದೇ ಪ್ರವಾಸಿ ತಾಣಗಳಿಗೆ ಅಂದರೆ ಗಗನಚುಕ್ಕಿ
, ತಲಕಾಡು ಮತ್ತು ಸೋಮನಾಥಪುರಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕವೂ ಪ್ರಯಾಣಿಸಬಹುದು. ಜುಲೈ 20, 2024 ರಿಂದ ಈ ಸೇವೆ ಲಭ್ಯವಿದ್ದು, ಇದರ ದರ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಆಗಿರುತ್ತದೆ.

ಬೆಂಗಳೂರು - ಚಿತ್ರದುರ್ಗ ಪ್ರವಾಸ:
ಐತಿಹಾಸಿಕ ತಾಣಗಳ ವೀಕ್ಷಣೆಗಾಗಿ ಬೆಂಗಳೂರಿನಿಂದ ಹೊರಟು ವಾಣಿವಿಲಾಸ ಸಾಗರ
, ಹಿರಿಯೂರು ಮತ್ತು ಚಿತ್ರದುರ್ಗದ ಕೋಟೆಯನ್ನು ವೀಕ್ಷಿಸುವ ಅವಕಾಶವಿದೆ. 270 ಕಿ.ಮೀ ದೂರದ ಈ ಪ್ರವಾಸವು ಜೂನ್ 28, 2025 ರಿಂದ ಪ್ರಾರಂಭವಾಗಲಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಪ್ರಯಾಣ ದರವಿರುತ್ತದೆ.

ಬೆಂಗಳೂರು - ಬೇಲೂರು/ಹಳೇಬೀಡು ಪ್ರವಾಸ:
ಶಿಲ್ಪಕಲೆಗಳ ವೀಕ್ಷಣೆಗಾಗಿ ಶ್ರವಣಬೆಳಗೊಳ
, ಬೇಲೂರು ಮತ್ತು ಹಳೇಬೀಡು ತಾಣಗಳ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. 350 ಕಿ.ಮೀ ವ್ಯಾಪ್ತಿಯ ಈ ಪ್ರವಾಸವು ಮೇ 31, 2025 ರಿಂದ ಲಭ್ಯವಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್ ಪ್ರಯಾಣಕ್ಕೆ ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.

ಆಸಕ್ತ ಪ್ರಯಾಣಿಕರು ನಿಗಮದ ಅಧಿಕೃತ ವೆಬ್‍ಸೈಟ್‍ಗಳಾದ www.ksrtc.in  ಮತ್ತು www.ksrtc.karnataka.gov.in  ಮೂಲಕ ಮುಂಗಡ ಟಿಕೆಟ್‍ಗಳನ್ನು ಕಾಯ್ದಿರಿಸಬಹುದು.

ಹೆಚ್ಚಿನ ಮಾಹಿತಿ ಮತ್ತು ವಿಚಾರಣೆಗಾಗಿ ದೂರವಾಣಿ ಸಂಖ್ಯೆ 080-26252625, ಮೊಬೈಲ್ ಸಂಖ್ಯೆ 7760990100 / 7760990560 / 7760990287 ಗಳನ್ನು ಸಂಪರ್ಕಿಸಬಹುದು.

ಸಾರ್ವಜನಿಕರು ಮತ್ತು ಪ್ರವಾಸಿಗರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಾನೇ ಕ್ರೂರಿ, ನಾನೇ ಪ್ರೇಮಿ": ಆತ್ಮಾವಲೋಕನದ ಸಂದೇಶ ನೀಡಿದ ಡಾ.ಬಸವ ಕುಮಾರ ಸ್ವಾಮೀಜಿ ಭಾವನಾತ್ಮಕ ಮಾತುಗಳು!ಬುಡಬುಡಕಿ ಬಂದನಾರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಭಯಸಾರಿಗೆ ಡಿಪೋ ಹಾಗೂ ವಸತಿ ಗೃಹಗಳ ಉದ್ಘಾಟನೆಗೆ ಒತ್ತಾಯಿಸಿ ಸಚಿವ ರಘುಮೂರ್ತಿಯವರಿಗೆ ಮನವಿ ವಾಸವಿ ಕಾಲೋನಿಯ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಭಕ್ತರಿಂದ ವಿಶೇಷ ಭಜನೆಹರಿಯಬ್ಬೆ ನಾಗಭೂಷಣ ಡಿ. ಅವರಿಗೆ 'ಕರ್ನಾಟಕ ಸೋಷಿಯಲ್ ಸರ್ವಿಸ್ ಅವಾರ್ಡ್' ಗೌರವಬಯಲುಸೀಮೆಯ ಜೀವನಾಡಿ: ಚಿತ್ರದುರ್ಗ ಜಿಲ್ಲೆಗೆ ಹರಿದುಬಂದ ಭದ್ರೆ - ಸಂಭ್ರಮವೋ ಸಂಭ್ರಮ!ಗಂಗಾ ಕಲ್ಯಾಣ: 13 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಿಸಿದ ಸಚಿವ ಟಿ.ರಘುಮೂರ್ತಿದಾವಣಗೆರೆಯಲ್ಲಿ ಇಂದು ರಾಜ್ಯಮಟ್ಟದ 'ವಿದ್ಯಾರತ್ನ' ಪ್ರಶಸ್ತಿ ಪ್ರದಾನ: 18 ಜನ ಶಿಕ್ಷಕರ ಆಯ್ಕೆತಾಲೂಕಿನ ಹುಲಿಕುಂಟೆಯಲ್ಲಿ ಹೊಸ ಕೆಎಸ್‌ಆರ್‌ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ: ಸಚಿವ ಡಾ. ಜಿ. ಪರಮೇಶ್ವರ್