Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

500 ಕೋಟಿ ವೆಚ್ಚದಲ್ಲಿ 400 ಕೆವಿ ವಿದ್ಯುತ್ ಸರಬರಾಜು ಕೇಂದ್ರ ನಿರ್ಮಾಣ -ಸಚಿವ ಡಿ.ಸುಧಾಕರ್

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯ 21 ವಿದ್ಯುತ್ ವಿತರಣ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡವಿದೆ. ಇವುಗಳಿಗೆ ನಿರ್ವಹಣೆಗೆ ಉಪ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸುವಂತೆ ಸಾರ್ವಜನಿಕರಿಂದ ಬೇಡಿಕೆಯಿದೆ. ಪ್ರಸಕ್ತ ವರ್ಷವೇ ಅನುದಾನ ಒದಗಿಸಿ ಉಪ ವಿದ್ಯುತ್ ವಿತರಣೆ ಕೇಂದ್ರಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದರಿಂದ ರೈತರಿಗೆ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಲಭಿಸಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಚಿತ್ರದುರ್ಗ ತಾಲ್ಲೂಕು ಯಳಗೋಡು ಗ್ರಾಮಪಂಚಾಯತಿ ವ್ಯಾಪ್ತಿಯ ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರದ ಆವರಣದಲ್ಲಿ ಸೋಮವಾರ ನೂತನ 220/66/11ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂಧನ ಇಲಾಖೆಯಲ್ಲಿ ಹಲವು ಸುಧಾರಣೆ ತರಲಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಿಗೆ ಯಾವುದೇ ಅಡಚಣೆ ಇಲ್ಲದೇ ವಿದ್ಯುತ್ ನೀಡಲಾಗುತ್ತಿದೆ. ಅಜ್ಜಪ್ಪನಹಳ್ಳಿ ನೂತನ ವಿದ್ಯುತ್ ಉಪ ವಿತರಣಾ ಕೇಂದ್ರದ ನಿರ್ಮಾಣ ಶ್ಲಾಘನೀಯವಾಗಿದೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳು ನಿಗದಿ ಮಾಡಲಾಗಿದೆ. ಆದರೂ ಗುತ್ತಿಗೆದಾದರು ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು ದೇಶದಲ್ಲೇ ಮೊದಲ ಬಾರಿಗೆ,ಇಡೀ ರಾಜ್ಯಕ್ಕೆ ಉಚಿತ ವಿದ್ಯುತ್ ಘೋಷಣೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಗ್ಯಾರಂಟಿ ಯೋಜನೆಯಡಿ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ನೀಡಿದ್ದಾರೆ. ಗ್ಯಾರಂಟಿ ಯೋಜನೆ ಬಿಡುವವರೆಗೂ ಉದ್ದಾರ ಆಗುವುದಿಲ್ಲ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಸಾಕಷ್ಟು ಅನುಕೂಲವಾಗಿವೆ. ಹಳ್ಳಿಗಳಲ್ಲಿ ಬಡರೈತ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ರೂ.10 ಕೋಟಿ ಅನುದಾನವನ್ನು ಯುವನಿಧಿ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ನಿರುದ್ಯೋಗಿ ಪದವೀಧರರು ಸರ್ಕಾರ ನೀಡುತ್ತಿರುವ ರೂ.3000 ಸ್ಪರ್ಧಾತ್ಮಕ ಪರೀಕ್ಷೆ ಶುಲ್ಕ ತುಂಬಲು ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗ್ಯಾರಂಟಿ ಕಾರ್ಯಕ್ರಮಗಳು ಬಡವರ ಮನೆ ಬಾಗಿಲಿಗೆ ಮುಟ್ಟಿವೆ ಎಂದು ಸಚಿವ ಡಿ.ಸುಧಾಕರ್ ಸಂದರ್ಭದಲ್ಲಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ.ಎಂ.ಚಂದ್ರಪ್ಪ, ಸಿರಿಗೆರೆ ಶ್ರೀಗಳ ಆರ್ಶೀವಾದದಿಂದ ರೂ.660 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಭಾಗದ ಕೆರೆಗಳಿಗೆ ನೀರು ತುಂಬ ಯೋಜನೆ ಜಾರಿ ಮಾಡಲಾಗಿದೆ. ಯೋಜನೆ ಅನುಷ್ಠಾನದಿಂದ 46 ಕೆರೆಗಳು ಭರ್ತಿಯಾಗಿವೆ.

ಇದರಿಂದ ಅಂತರ್ಜಲಮಟ್ಟ ಹೆಚ್ಚಿದೆ. ರೈತರ ಬೋರ್ವೆಲ್ ಮರುಪೂರಣವಾಗಿವೆ. ಪಂಪ್ ಸೆಟ್ಗಳಿಂದ ಜಮೀನಿಗೆ ನೀರು ಹಾಯಿಸಲು ವಿದ್ಯುತ್ ಅಭಾವ ಉಂಟಾಗಿತ್ತು. ಇದನ್ನು ನೀಗಿಸುವ ಸಲುವಾಗಿ ರೂ.250 ಕೋಟಿ ವೆಚ್ಚದಲ್ಲಿ ಕಾಕಬಾಳು ಹಾಗೂ ಕೊಡಿಹಳ್ಳಿ ವಿದ್ಯುತ್ ವಿತರಣಾ ಉಪಕೇಂದ್ರ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ರೈತರು ಸಮ್ಮತಿಸಿದ ಕಾರಣ ಯೋಜನೆ ಜಾರಿಯಲ್ಲಿ ವಿಳಂಬ ಉಂಟಾಗಿದೆ. ಸದ್ಯ ಅಜ್ಜಪ್ಪನಹಳ್ಳಿಯಲ್ಲಿ ಉಪಕೇಂದ್ರ ನಿರ್ಮಿಸುವುದರಿಂದ 80 ಹಳ್ಳಿಗಳ ರೈತರ ಜಮೀನಿಗೆ ನಿರಂತರ ವಿದ್ಯುತ್ ಲಭಿಸುವುದು ಎಂದು ಹೇಳಿದರು.

ರೈತರಿಗೆ ಸರಿಯಾಗಿ ನೀರು ಹಾಗೂ ವಿದ್ಯುತ್ ನೀಡಿದರೆ, ಸಾಲ ನೀಡುವುದು ಸಾಲ ಮನ್ನಾ ಮಾಡುವುದು ಬೇಕಾಗಿಲ್ಲ. ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟು ಸಮರ್ಥರಾಗುತ್ತಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 13.5 ಎಕರೆ ರೇಷ್ಮೆ ಇಲಾಖೆಗೆ ಸೇರಿದ ಜಮೀನನ್ನು ಇಂಧನ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಇಲ್ಲಿ ರೂ.500 ಕೋಟಿ ವೆಚ್ಚದಲ್ಲಿ 400 ಕೆ.ವಿ. ವಿದ್ಯುತ್ ಸರಬರಾಜು ಕೇಂದ್ರ ನಿರ್ಮಾಣ ಮಾಡಲಾಗುವುದು. ಇದರಿಂದ ಹೊಳ್ಳಕೆರೆ ತಾಲ್ಲೂಕಿನ 350 ಹಳ್ಳಿಗಳಿಗೆ ನಿರಂತರ ವಿದ್ಯುತ್ ಲಭಿಸಲಿದೆ. ಅಜ್ಜಪ್ಪನಹಳ್ಳಿ ವಿದ್ಯುತ್ ಕೇಂದ್ರ ನಿರ್ಮಾಣ ಹೊಣೆಹೊತ್ತ ಗುತ್ತಿಗೆದಾರರು ಮುಂದಿನ ವರ್ಷದ ಗಣರಾಜ್ಯೋತ್ಸವದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ರೈತರ ಹೊಲದಲ್ಲಿ ವಿದ್ಯುತ್ ಲೈನ್ಗಳು ಹಾದುಹೋಗುವ ಸಂಭವಿದೆ. ಇದಕ್ಕೆ ರೈತರು ಸಹರಿಸಬೇಕು ಇದರಿಂದ ಪ್ರಯೋಜನ ಆಗಲಿದೆ ಎಂದರು.

ಅಧೀಕ್ಷಕ ಇಂಜಿನಿಯರ್ ರೇವಣಸಿದ್ದಪ್ಪ.ಜಿ.ಎಂ. ಪ್ರಸ್ತಾವಿಕವಾಗಿ ಮಾತನಾಡಿ, ರೂ.108 ಕೋಟಿ ವೆಚ್ಚದಲ್ಲಿ 220/66/11ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಿಸಲಾಗುವುದು. 27.5 ಕಿ.ಮೀ ಉದ್ದ ಜೋಡಿ ವಿದ್ಯುತ್ ಲೈನ್ ಮತ್ತು ಆರು ಹೊಸ ಮಾರ್ಗಗಳನ್ನು ಸಹ ನಿರ್ಮಾಣ ಮಾಡಲಾಗುವುದು. ಇದರಿಂದ ಭರಮಸಗಾರ, ಸಿರಿಗೆರೆ, ಬಿದರಿಕೆರೆ, ಸೊಕ್ಕೆ, ಮಾಡನಾಯಕನಹಳ್ಳಿ ಸೇರಿದಂತೆ ಇತರೆ ವಿದ್ಯುತ್ ಕೇಂದ್ರಗಳ ಸಾಮಥ್ರ್ಯ ಹೆಚ್ಚಾಗಲಿದೆ. ಸಾರ್ವಜನಿಕರಿಗೆ ತಡೆ ರಹಿತ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಸೇವೆ ದೊರೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯಾಚರಣೆ ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಬಿ.ಎನ್, ಅಧೀಕ್ಷಕ ಇಂಜಿನಿಯರ್ ರೇವಣಸಿದ್ದಪ್ಪ.ಜಿ.ಎಂ., ಯಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ನಿರ್ಮಲಮ್ಮ ತಿಪ್ಪೇಸ್ವಾಮಿ..ಕೆ, ಸದಸ್ಯರಾದ ಬಸಮ್ಮ ಮಹಾಂತೇಶ್, ಬಸವರಾಜಪ್ಪ, ಪಾರ್ವತಮ್ಮ, ಎನ್.ಎಂ.ಶಾಂತಕುಮಾರ್, ಹನುಮಂತಪ್ಪ.ಹೆಚ್, ರೂಪಾ ರೇವಣ್ಣ, ರುದ್ರೇಶ್.ಕೆ.ಎಸ್., ರಹಮತ್ಉಲ್ಲಾ, ಮಹಮದ್ ಮುಬಾರಕ್, ಕವಿತಾ.ಸಿ.ಟಿ ಲೋಕೇಶ್, ಎಸ್.ಪಾಲಯ್ಯ, ಯಳಗೋಡು ಪಿ.ಡಿ. ಪ್ರಹ್ಲಾದ್, ಮಾಜಿ ಜಿ.ಪಂ.ಸದಸ್ಯ ಡಿ.ವಿ.ಶರಣಪ್ಪ, ಸ್ಥಳೀಯ ಮುಖಂಡ ಕೋಗುಂಡೆ ಮಂಜಣ್ಣ, ಶೈಲೇಶ್, .ವಿ.ಪ್ರ.ನಿ.ನಿ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಪದ್ಮಶ್ರೀ, ಲಕ್ಷ್ಮಿ, ತಿಮ್ಮರಾಯಪ್ಪ, ಸಚಿನ್ ಚಕ್ರವರ್ತಿ, ಆರ್.ರಮೇಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. .ವಿ.ಪ್ರ.ನಿ.ನಿ ಚಿತ್ರದುರ್ಗ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಮುನ್ನಿಸಾ ತಂಡದವರು ಪ್ರಾರ್ಥಿಸಿದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ