ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ನೇತೃತ್ವದಲ್ಲಿ ಮುಸ್ಲಿಂ ಜನಪ್ರತಿನಿಧಿಗಳ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ
ನಿಗಮ - ಮಂಡಳಿ ಹಾಗೂ ಪರಿಷತ್ ನಾಮಕರಣ ಸೇರಿದಂತೆ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆ ಮುಸ್ಲಿಂ ನಾಯಕರು, ಸಚಿವರು ಮನವಿ ಸಲ್ಲಿಸಿದರು.
ಸಚಿವರಾದ ರಹೀಮ್ ಖಾನ್, ಮಾಜಿ ಸಚಿವರಾದ ತನ್ವಿರ್ ಸೇಠ್, ಬಿಡಿಎ ಅಧ್ಯಕ್ಷರಾದ ಎನ್.ಎ.ಹ್ಯಾರಿಸ್, ಶಾಸಕರಾದ ಹರ್ಷದ್ ರಿಜ್ವಾನ್, ಮುಖಂಡರಾದ ಮನ್ಸೂರ್ ಅಲಿ ಖಾನ್ ಉಪಸ್ಥಿತರಿದ್ದರು.


