ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಶೆಯ ಅಮಲಿನಲ್ಲಿ ಬೇಲಿ ಪೊದೆಯೊಳಗೆ ಸಿಲುಕಿದ ವ್ಯಕ್ತಿ ಅಲ್ಲೇ ಶವವಾಗಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯ ರಾಜೇಶ್ವರಿ ಟೆಂಟ್ ಹಿಂಭಾಗದಲ್ಲಿ ಘಟನೆ ನಡೆದಿದ್ದು, ಶವವಾದ ಯುವಕ 17 ವರ್ಷದ ಜಾಫರ್ ಎಂದು ತಿಳಿದು ಬಂದಿದೆ.ಮೃತ ಯುವಕ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇಂದು ರಾಜೇಶ್ವರಿ ಟೆಂಟ್ ಹಿಂಭಾಗದಲ್ಲಿನ ಮನೆಯೊಂದಕ್ಕೆ ಫೈಂಟ್ ಹೊಡೆಯುತ್ತಿದ್ದ ವೇಳೆ ಬೇಲಿ ಪೊದೆಯೊಳಗೆ ತಲೆಯೊಂದು ಪತ್ತೆಯಾಗಿದೆ. ಸ್ಥಳೀಯರು ಬಂದು ಪರಿಶೀಲನೆ ಮಾಡಿದ್ದಾಗ ಯುವಕನ ಶವ ಪತ್ತೆಯಾಗಿದೆ.
ಸ್ಥಳೀಯರ ಪ್ರಕಾರ ಗಾಂಜಾ ಹೊಡೆಯಲು ಯುವಕರ ಗ್ಯಾಂಗ್ ಬೇಲಿ ಪೊದೆಯೊಳಗೆ ಸೇರುತ್ತಿದ್ದರು. ಮೃತ ಜಾಫರ್ ಸಹ ಈ ಕಾರಣಕ್ಕೆ ಪೊದೆಯೊಳಗೆ ಹೋಗಿದ್ದಾನೆ. ನಶೆಯ ಅಮಲಿನಲ್ಲಿ ಅಲ್ಲಿಯೇ ಕುಸಿದು ಬಿದ್ದು ಹಾವು ಕಚ್ಚಿ ಸಾವನ್ನಪ್ಪಿರುವ ಸಂಶಯ ಇದೆ ಎಂದರು.
ಶವದ ಅರ್ಧ ಭಾಗವನ್ನ ನಾಯಿಗಳು ಕಚ್ಚಿ ತಿಂದಿರುವಂತೆ ಕಾಣುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆಯ ನಂತರ ಬಾಲಕನ ಸಾವಿನ ಕಾರಣ ಬೆಳಕಿಗೆ ಬರಲಿದೆ.


