Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಹಲ್ಯ ಬಾಯಿ ಹೋಳ್ಕರ್ ಜ್ಯೋತಿ ರಥ ಯಾತ್ರೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪಕ್ಷ ಬಲವರ್ಧನೆಗೊಳಿಸುವ ಮೂಲಕ
   ಜನರ ಮನೆ, ಮನಸ್ಸು, ಮತಗಳನ್ನು  ಪರಿವರ್ತನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ  ಜಯಗಳಿಸಲು  ಇಂದಿನಿಂದ ತಯಾರಿ ಮಾಡಲಾಗುತ್ತಿದೆ  ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹಯ್ಯ  ತಿಳಿಸಿದರು.

 ನಗರದ ಪ್ರವಾಸಿ ಮಂದಿರದಲ್ಲಿ ನಡೆದ  ಜಿಲ್ಲಾ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು ಜಿಲ್ಲಾ  ಕಾರ್ಯಕರ್ತರ ಕಾರ್ಯಗಾರ ನಡೆಸಿದ್ದೇವೆ, ಈ ಕಾರ್ಯಕ್ರಮದಲ್ಲಿ ನಾಲ್ಕು ತಾಲೂಕಿನ  ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದಾರೆ, ಇಂದು 17 ಹೋಬಳಿಗಳ 101 ಗ್ರಾಮ ಪಂಚಾಯಿತಿಯ ಕಾರ್ಯಕರ್ತರಿಗೆ ಪಕ್ಷದ ಮಾರ್ಗಸೂಚಿಗಳನ್ನು ನೀಡಲಾಗಿದೆ . ಜೂನ್ 22ರಂದು  ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ಕಾರ್ಯಗಾರ ಏರ್ಪಡಿಸಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ  ತರಬೇತಿ ನೀಡಲಾಗುವುದು  ಎಂದರು.

 ಪ್ರಸ್ತುತ ತಾಲೂಕು ಕಚೇರಿ  ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ  ಸಾರ್ವಜನಿಕರಿಗೆ ಸೇವಾ ಸೌಲಭ್ಯಗಳು ಸೂಕ್ತ ರೀತಿ ದೊರೆಯುತ್ತಿಲ್ಲ , ಅಧಿಕಾರಿಗಳು ರಾಜಕಾರಣಿಗಳ ಜೊತೆ ಕೈಜೋಡಿಸಿ  ಸಾರ್ವಜನಿಕರ ಸೇವೆ ಮಾಡುವುದನ್ನು ಮರೆತಿದ್ದಾರೆ ಅಧಿಕಾರಿಗಳ ಈ ವರ್ತನೆಯನ್ನು  ಬಹುಜನ ಸಮಾಜ ಪಕ್ಷವು ಸಾರ್ವಜನಿಕವಾಗಿ ಖಂಡಿಸುತ್ತದೆ ಎಂದರು.

 ಬಿ ಎಸ್ ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ ಮಾತನಾಡಿ  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದಲ್ಲಿ ಶೋಷಿತ ಸಮುದಾಯಗಳಿಗೆ  ತಲುಪುತ್ತಿಲ್ಲ, ವೇದಿಕೆ ಮೇಲೆ ಭಾಷಣ ಮಾಡುವ ರಾಜಕೀಯ ನಾಯಕರು  ಶೋಷಿತ ಸಮುದಾಯಗಳನ್ನು ಮರೆಯುವುದು ವಿಪರ್ಯಾಸವೇ ಸರಿ. ಸಮಾಜದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ, ಮತಗಳನ್ನು ಪಡೆಯುವಾಗ ಕೊಡುವ ಭರವಸೆಗಳನ್ನು  ರಾಜಕಾರಣಿಗಳು ಬೇಗನೆ ಮರೆಯುತ್ತಾರೆ ಮತಗಳ ಬೆಲೆ ಏನೆಂಬುದು ಅವರಿಗೆ ಅರಿವಿಲ್ಲ  ಮತದಾನದ ವಿಶೇಷತೆ ಮತ್ತು ಅದರ ಶಕ್ತಿ ಕುರಿತಾಗಿ  ಬಹುಜನ ಸಮಾಜ ಪಕ್ಷವು  ಪ್ರತಿ ಗ್ರಾಮಕ್ಕೂ ಭೇಟಿ ನೀಡಿ  ಪ್ರತಿ ಮತದಾರರಿಗೂ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಿದೆ ಎಂದರು.

 ಅಕ್ಕ ಮಾಯಾವತಿಯವರ ಆಶಯದಂತೆ  ಸದಾ ಶೋಷಿತರ ಬಲವಾಗಿ ನಿಂತಿರುವ ಬಹುಜನ ಸಮಾಜ ಪಕ್ಷವು ದಲಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಸದಾ ಧ್ವನಿಯಾಗಲಿದೆ.ಅಲ್ಲದೇ  ಸ್ಥಳಿಯವಾಗಿ ಯುವ ಸಮುದಾಯ ನಮ್ಮ ಕಾರ್ಯಗಾರಗಳಲ್ಲಿ ಭಾಗವಹಿಸಿ  ಮಾಹಿತಿ ಪಡೆದು ತಮ್ಮ ಗ್ರಾಮಗಳಲ್ಲಿ  ಅರಿವು ಮೂಡಿಸುವ  ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು .

 ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಸಿ ಹನುಮಂತ ರಾಯಪ್ಪ, ರಾಜ್ಯ ಕಾರ್ಯದರ್ಶಿ ಬಂಗಾರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷರಾದ ಬಾಲರಾಮಚಂದ್ರ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾದ ಪಿಳ್ಳಪ್ಪ, ನೆಲಮಂಗಲ ತಾಲೂಕು ಅಧ್ಯಕ್ಷ ಮೂರ್ತಿ, ದೇವನಹಳ್ಳಿ ತಾಲೂಕು ಅಧ್ಯಕ್ಷ ಎಂ ಡಿ ರಾಮಾಂಜಿನಪ್ಪ, ದೊಡ್ಡಬಳ್ಳಾಪುರ ತಾಲೂಕು ಉಸ್ತುವಾರಿ  ಆರ್ ಸೋಮಶೇಖರ್, ಹೊಸಕೋಟೆ ತಾಲೂಕು ಉಸ್ತುವಾರಿ ನಾರಾಯಣ ಸ್ವಾಮಿ , ದೇವನಹಳ್ಳಿ ತಾಲೂಕು ಉಸ್ತುವಾರಿ ನಂಜಪ್ಪ, ನೆಲಮಂಗಲ ತಾಲೂಕು ಉಸ್ತುವಾರಿ ಗಂಗಾಧರಪ್ಪ, ಮಹಿಳಾ ಕಾರ್ಯದರ್ಶಿಗಳಾದ ನೆಲಮಂಗಲ ಸೌಭಾಗ್ಯ, ತೂಬಗೆರೆ ನಾಗಮಣಿ, ವಿಜಯಲಕ್ಷ್ಮಿ, ಹೇಮಾವತಿ, ಸುವರ್ಣಮ್ಮ ದೊಡ್ಡಬಳ್ಳಾಪುರ ಸೇರಿದಂತೆ ಹಲವರು ಹಾಜರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ