Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಡಿಎಸ್‌ಗೆ ಅಖಂಡ ಶ್ರೀನಿವಾಸ ಮೂರ್ತಿ ಸೇರ್ಪಡೆ: "ಆಣೆ-ಪ್ರಮಾಣ ಪರಿಹಾರವಲ್ಲ" ಎಂದ ಹೆಚ್.ಡಿ. ಕುಮಾರಸ್ವಾಮಿ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪುಲಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಭಾನುವಾರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಮರುಸೇರ್ಪಡೆಯಾಗಿದ್ದಾರೆ. ಪುಲಕೇಶಿನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿ ಅವರು ಅಖಂಡ ಅವರಿಗೆ ಜೆಡಿಎಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

2013ರಲ್ಲಿ ಜೆಡಿಎಸ್ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದ ಅಖಂಡ ಶ್ರೀನಿವಾಸ ಮೂರ್ತಿ, ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ತಮ್ಮ ಮಾತೃ ಪಕ್ಷಕ್ಕೆ ಮರಳಿದ್ದಾರೆ.

ಕ್ರಾಸ್ ವೋಟಿಂಗ್ ವಿವಾದ: "ಎಲ್ಲದಕ್ಕೂ ಕಾಲವೇ ನಿರ್ಣಯ ಮಾಡುತ್ತದೆ":
ಇದೇ ವೇಳೆ ಇತ್ತೀಚಿನ ಚುನಾವಣೆಯ ಅಡ್ಡ ಮತದಾನ ಹಾಗೂ ಬಿಜೆಪಿ ಶಾಸಕರ ಧರ್ಮಸ್ಥಳದ ಆಣೆ-ಪ್ರಮಾಣ ಜಟಾಪಟಿಯ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಆಣೆ-ಪ್ರಮಾಣ ಪರಿಹಾರವಲ್ಲ: "ನಮ್ಮ ಮೈತ್ರಿ ಪಕ್ಷದ ಸ್ನೇಹಿತರು (ಬಿಜೆಪಿ) ಧರ್ಮಸ್ಥಳದಲ್ಲಿ ಶಾಸಕರಿಂದ ಆಣೆ-ಪ್ರಮಾಣ ಮಾಡಿಸಲು ಮುಂದಾಗಿದ್ದಾರೆ. ಅದು ಅವರ ಪಕ್ಷದ ನಂಬಿಕೆ. ಆದರೆ ನಮ್ಮ ಪಕ್ಷದಲ್ಲಿ ಆಣೆ-ಪ್ರಮಾಣವೇ ಎಲ್ಲದಕ್ಕೂ ಪರಿಹಾರವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ."

ನಿಜವಾದ ಕ್ರಾಸ್ ವೋಟರ್ಸ್ ಹೊರಬರಲಿ: "ನಮ್ಮ ಪಕ್ಷದ ಸಭೆಗೆ ಎಲ್ಲಾ 17 ಶಾಸಕರೂ ಬಂದಿದ್ದರು ಮತ್ತು ತಾವೇ ಮತ ಹಾಕಿರುವುದಾಗಿ ಹೇಳಿದ್ದಾರೆ. ಯಾರು ಅಡ್ಡ ಮತ ಹಾಕಿದ್ದಾರೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಅದನ್ನು ಕಾಲಕ್ಕೆ ಬಿಡುವುದೇ ಸೂಕ್ತ."

"ಅಖಂಡ ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಿಗಲಿಲ್ಲ":
ಅಖಂಡ ಶ್ರೀನಿವಾಸ ಮೂರ್ತಿ ಅವರ ನಿಷ್ಠೆಯನ್ನು ಶ್ಲಾಘಿಸಿದ ಹೆಚ್‌ಡಿಕೆ, "ಅಖಂಡ ಅವರು ಯಾರ ಮೇಲೂ ದ್ವೇಷ ಸಾಧಿಸದ ನಾಯಕ. ಅವರ ಮನೆಯ ಮೇಲೆ ದಾಳಿ ನಡೆದಾಗಲೂ ಅವರು ದ್ವೇಷದ ರಾಜಕಾರಣ ಮಾಡಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಅವರಿಗೆ ಸೂಕ್ತ ಗೌರವ ಸಿಗಲಿಲ್ಲ, ಅವರ ವಿರುದ್ಧ ಷಡ್ಯಂತ್ರ ನಡೆಯಿತು" ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಅಭಿವೃದ್ಧಿ ಕುರಿತು ಹೆಚ್‌ಡಿಕೆ ಆತಂಕ:
"
ಬೆಂಗಳೂರು ವಿಶ್ವಪ್ರಸಿದ್ಧ ನಗರವಾದರೂ ಇಂದಿಗೂ ಪುಲಕೇಶಿನಗರದಂತಹ ಪ್ರದೇಶಗಳು ಕುಡಿಯುವ ನೀರು, ಕಸದ ಸಮಸ್ಯೆ ಎದುರಿಸುತ್ತಿವೆ. ನಮ್ಮ ಅವಧಿಯಲ್ಲಿ ಮೆಟ್ರೋ ಯೋಜನೆಗೆ ಅನುಮೋದನೆ ನೀಡಿ, ರಸ್ತೆ ಅಗಲೀಕರಣ ಮಾಡಿದ್ದೆವು. ಆದರೆ ಇಂದಿನ ಆಡಳಿತದಲ್ಲಿ ಬೆಂಗಳೂರು ಹಿನ್ನಡೆ ಅನುಭವಿಸುತ್ತಿದ್ದು, ದೇಶಾದ್ಯಂತ ನಕಾರಾತ್ಮಕ ಚರ್ಚೆ ಆಗುತ್ತಿರುವುದು ನೋವಿನ ಸಂಗತಿ."

"2028ರಲ್ಲಿ ಕುಮಾರಣ್ಣ ಸಿಎಂ ಆಗ್ತಾರೆ":ಅಖಂಡ ಶ್ರೀನಿವಾಸ್ ಮೂರ್ತಿ ಭವಿಷ್ಯ ಜೆಡಿಎಸ್ ಸೇರಿದ ಬಳಿಕ ಮಾತನಾಡಿದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, "ನನಗೆ ರಾಜಕೀಯವಾಗಿ ಶಕ್ತಿ ತುಂಬಿದ್ದೇ ಕುಮಾರಣ್ಣ. ದೇವೇಗೌಡರು, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಆಶೀರ್ವಾದ ನನ್ನ ಮೇಲಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯ ಬಳಿಕ ಕುಮಾರಣ್ಣ ಅವರೇ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಅಖಂಡ ಶ್ರೀನಿವಾಸ ಮೂರ್ತಿ ಅವರ ಸೇರ್ಪಡೆಯಿಂದ ಬೆಂಗಳೂರು ಭಾಗದಲ್ಲಿ ಜೆಡಿಎಸ್ ಜನಾಧಾರ ಮತ್ತಷ್ಟು ಗಟ್ಟಿಯಾಗಲಿದ್ದು, ಮುಂಬರುವ ದಿನಗಳಲ್ಲಿ ಪಕ್ಷವು ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಆಶಯವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST