ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಕುಚ್ಚಪ್ಪನ ಪೇಟೆ ಮಾರುತಿ ವ್ಯಾಯಾಮ ಶಾಲೆ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 9 ರಂದು ರಾಜ್ಯ ಮಟ್ಟದ ದೇಹ ದಾರ್ಡ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಷ್ಟಿ ಎಂ. ಬಿ. ಗುರುದೇವ್ ಹೇಳಿದರು.
ನಗರದ ಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ 1951ರಲ್ಲಿ ಸಣ್ಣದಾಗಿ ಪ್ರಾರಂಭವಾದ ವ್ಯಾಯಾಮ ಶಾಲೆ ಇಂದು 75ವಸಂತಗಳನ್ನು ಕಂಡಿದೆ. ಈ ವ್ಯಾಯಾಮ ಶಾಲೆಗೆ ನೇಕಾರರು, ಕೂಲಿಕಾರ್ಮಿಕರು ಹೆಚ್ಚಾಗಿ ಬಂದು ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿರುವುದು ಹೆಮ್ಮೆಯ ಸಂಗತಿ. ಅಂದು ಹತ್ತಾರು ರೂಗಳ ಪರಿಕರಗಳಿಂದ ಪ್ರಾರಂಭವಾಗಿ ಇಂದು ಐವತ್ತು ಲಕ್ಷದಿಂದ ಒಂದು ಕೋಟಿ ರೂಗಳ ವ್ಯಾಯಾಮ ಪರಿಕರಗಳನ್ನು ಹೊಂದಿ ಸುಸಜ್ಜಿತ ವ್ಯಾಯಾಮ ಶಾಲೆಯಾಗಿದೆ. ಮುಖ್ಯವಾಗಿ ಬೇರೆ ವ್ಯಾಯಾಮ ಶಾಲೆಗಳಿಗೆ ಹೋಲಿಸಿದರೆ ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ವ್ಯಾಯಾಮ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿದರು.
ಟ್ರಸ್ಟ್ ನ ಕಾರ್ಯದರ್ಶಿ ಶಿವಶಂಕರ್ (ಮನಾಶ )ಹಾಗೂ ಡಿ. ಬಿ. ಶ್ರೀನಾಥ್ ಮಾತನಾಡಿ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಗಳು ಆಗಸ್ಟ್ 9 ರಂದು ಬೆಳಿಗ್ಯೆ 11ಗಂಟೆಗೆ ನಗರದ ಕೆ. ಎಂ. ಹೆಚ್. ಕನ್ವೆಂನ್ಷನ್ ಹಾಲ್ ನಲ್ಲಿ ನಡೆಯಲಿದ್ದು ರಾಜ್ಯದ ಸುಮಾರು ನೂರಕ್ಕೂ ಹೆಚ್ಚು ದೇಹ ದಾರ್ಡ್ಯ ಪಟುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ತೀರ್ಪುಗಾರರು ಸ್ಪರ್ಧೆಗಳನ್ನು ನಿರ್ವಹಿಸಲಿದ್ದಾರೆ. ಸ್ಪರ್ಧಾ ವಿಜೇತರಿಗೆ ಮಿಸ್ಟರ್ ಮಾರುತಿ ವ್ಯಾಯಾಮ ಶಾಲೆ 2026,ಮೋಸ್ಟ್ ಮಸ್ಕ್ಯೂಲರ್, ಬೆಸ್ಟ್ ಫೋಸರ್, ನಗದು ಬಹುಮಾನ, ಟ್ರೊಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ. ಎಂ. ಹನುಮಂತರಾಯಪ್ಪ, ಪುಷ್ಪಾನ್ಡಜ ಮಹರ್ಷಿ ಪೀಠಧ್ಯಕ್ಷರಾದ ದಿವ್ಯ ಜ್ಞಾನಾನಂದ ಗಿರಿ ಸ್ವಾಮಿಗಳು, ಶಾಸಕ ಧೀರಜ್ ಮುನಿರಾಜು, ಉದ್ಯಮಿ ಉದಯರವಿ ಮುಂತಾದವರು ಅತಿಥಿ ಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಖಜಾಂಚಿ ಬಿ. ಪಿ. ಪ್ರಿಯಾಂಕಾ, ಟ್ರಷ್ಟಿ ಗಳಾದ ಎ. ವಿ. ರಘು, ಬಾಲಸುಬ್ರಮಣ್ಯ, ಮೋಹನ್ ಚಂದ್ರ, ಬಾಲರಾಜು, ಶಾಲಾ ಮೇಲ್ವಿಚಾರಕ ಡಿ. ಕೆ. ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.



