ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ, ಡಾ.ಮನಮೋಹನ್ ಸಿಂಗ್ ನಗರ ವಿವಿಯ ಆಶ್ರಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಮನ ಮನೆಗೆ ಸಂವಿಧಾನ ಎಂಬ ವಿಶೇಷ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ವಿವಿಯ ಕುಲಪತಿ ಪ್ರೊ. ಎಂ.ಆರ್ ಗಂಗಾಧರ್ ಅವರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ರಾಷ್ಟ್ರ ನಿರ್ಮಾಣದ ಹರಿಕಾರ ಬಾಬಾಸಾಹೇಬರು, ಎಲ್ಲಾ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಇದೆ. ಅಂಬೇಡ್ಕರ್ ರವರ ಚಿಂತನೆಗಳು ಸರ್ವಕಾಲಿಕ ಪ್ರಸ್ತುತವಾಗಿದ್ದು, ಹಾಗೆ ವಿವಾಹ ಕಾಯಿದೆಗಳಲ್ಲಿ ಸಹ ಇವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡರೆ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ನೀಡಿದಂತೆ ಎಂದು ತಿಳಿಸಿದರು.
ಬೆಂಗಳೂರು ನಗರ ವಿವಿಯ ಕುಲಪತಿ ಪ್ರೊ. ಬಿ. ರಮೇಶ್ ಅವರು ಮಾತನಾಡಿ, 'ಅಂಬೇಡ್ಕರ್ ಅವರು ಮಹಿಳಾ ಶಿಕ್ಷಣಕ್ಕೆ ನೀಡಿದ ಆದ್ಯತೆ ರಾಷ್ಟ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣವಾಗಿದೆ. ಪ್ರತಿಯೊಬ್ಬರೂ ಕೂಡ ಭಾರತೀಯರು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಇಂತಹ ವಿಚಾರ ಸಂಕಿರಣಗಳು ಆಶಯ ಈಡೇರುವುದು ಎಂಬ ಅಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್ ಅವರು ಇದೇ ವೇಳೆಯಲ್ಲಿ ಮಾತನಾಡಿದರು. ಪ್ರಾಸ್ತಾವಿಕ ನುಡಿಯನ್ನು ಡಾ. ಅರ್ಜುನ್ ಗೋಪಾಲಯ್ಯ, ಡಾ.ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆಯಲಿ ಪ್ರಾಧ್ಯಾಪಕ ಪ್ರೊ. ಬಿ.ಎಲ್. ಮುರಳೀಧರ್, ಕರ್ನಾಟಕ ನ್ಯೂಸ್ ಬೀಟ್ ನ ಸಂಪಾದಕರು ಹಾಗೂ ಮುಖ್ಯಸ್ಥ ನಾಗರಾಜ್ ಅರೆಹೊಳೆ, ಸಿಂಡಿಕೇಟ್ ಸದಸ್ಯ ಡಾ. ಎಚ್. ಕೃಷ್ಣರಾಮ್, ಸಮತಾ ಸೈನಿಕ ದಳದ ಕಾರ್ಯಧ್ಯಕ್ಷ ಡಾ. ಗೋವಿಂದಯ್ಯ ಜಿ, ನಿವೃತ್ತ ಗ್ರಂಥಪಾಲಕ ಶ್ರೀ ನರೇಂದ್ರ, ದಲಿತ ಚಳುವಳಿ ನಾಯಕ ಡಾ.ಎಂ.ನಾಗೇಶ್, ದಲಿತ ಟೈಗರ್ಸ್ ಅರುಣ್, ಮಹಿಳಾ ಅಧ್ಯಕ್ಷರು ಕಮಲಮ್ಮ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರು ಪ್ರೊ.ಅಶೋಕ್, ಸಿಂಡಿಕೇಟ್ ಸದಸ್ಯ ಡಾ. ವೆಂಕಟಾಚಲ ವಿ.ಎಸ್, ಸಾಹಿತಿ ಸತ್ಯಮೂರ್ತಿ, ಎಸ್ ಕೆಂಚಯ್ಯ, ಶಿವರಾಯ್ ಸಿಂದಗಿ, ನವೀನ್, ಮುನಿರಾಜು, ಯಂಕೋಬ ಜೂರಟಗಿ, ಬೆಂಗಳೂರು ವಿವಿ ಪದಾಧಿಕಾರಿಗಳು ಮತ್ತು ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಸರ್ವ ಸದಸ್ಯರು ಮತ್ತಿತರರು ಈ ವಿಚಾರ ಸಂಕಿರಣದಲ್ಲಿ ಮತ್ತಿತರರು ಉಪಸ್ಥಿತರಿದ್ದರು.
“ದೇಶದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸುವುದು ಇಂತಹ ವಿಚಾರ ಸಂಕಿರಣಗಳ ಕಾರ್ಯಕ್ರಮದ ಮುಖ್ಯವಾಗಬೇಕು”.
ಪ್ರೊ. ಬಿ. ರಮೇಶ್, ಕುಲಪತಿಗಳು, ಡಾ. ಮನಮೋಹನ್ ಸಿಂಗ್ ನಗರ ವಿಶ್ವವಿದ್ಯಾಲಯ, ಬೆಂಗಳೂರು.
“ಸಹಸ್ರಾರು ವರ್ಷಗಳಿಂದ ಕೇವಲ ನಾಲ್ಕು ಗೋಡೆಯೊಳಗೆ ಸೀಮಿತವಾಗಿದ್ದ ಮಹಿಳೆಗೆ ಇಂದು ಮತದಾನ, ಶಿಕ್ಷಣ, ಆಸ್ತಿ ಎಲ್ಲ ರೀತಿಯ ಹಕ್ಕು, ಮಹಿಳೆಯರಿಗೆ ಉನ್ನತ ಹುದ್ದೆ ಅಲಂಕರಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಇರುವುದಕ್ಕೆ ಪ್ರಮುಖ ಕಾರಣವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ”. ಪ್ರೊ. ಎಂ.ಆರ್ ಗಂಗಾಧರ್, ಕುಲಪತಿಗಳು, ಚಾಮರಾಜನಗರ ವಿವಿ.


