Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ದಿನಸಿ ತುಂಬಿ ಪಾರ್ಕ್ ಮಾಡಿದ್ದ ಅಶೋಕ ಲೇ ಲ್ಯಾಂಡ್ ಗಾಡಿ ಕಳವು

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ಕೋಡಿಗೆಹಳ್ಳಿ ನಿವಾಸಿ ಚೇತನ್ ಕುಮಾರ್ ರವರ ಅಶೋಕ ಲೈ ಲ್ಯಾಂಡ್ ಗಾಡಿಯನ್ನು ಪಾರ್ಕ್ ಮಾಡಿದ ಸ್ಥಳದಿಂದ ಕಳವು ಮಾಡಲಾಗಿದೆ. ಗಾಡಿಯಲ್ಲಿ 5 ಲಕ್ಷ ಮೌಲ್ಯದ ದಿನಸಿ ಸಾಮಾನುಗಳು ಸೇರಿದಂತೆ ಸಾಲ ಮಾಡಿದ ಗಾಡಿ ಕಳ್ಳರ ಪಾಲಾಗಿದೆ, ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇತನ್ ಕುಮಾರ್ ಡ್ರೈವರ್ ಕೆಲಸ ಮಾಡುತ್ತಿದ್ದರು, ಕಷ್ಟಪಟ್ಟು ದುಡಿದ ಹಣದಲ್ಲಿ ಅಶೋಕ್ ಲೈ ಲ್ಯಾಂಡ್ ಗಾಡಿಯನ್ನ ಖರೀದಿ ಮಾಡಿದ್ದರು, ಯಶವಂತಪುರ ಮತ್ತು ತುಮಕೂರು ಎಪಿಎಂಸಿ ಮಾರುಕಟ್ಟೆಯಿಂದ ದಿನಸಿ ಖರೀದಿ ಮಾಡಿ ದೊಡ್ಡಬಳ್ಳಾಪುರದ ಅಂಗಡಿಗಳಿಗೆ ಸರಬರಾಜು  ಮಾಡುತ್ತಿದ್ದರು.

ಆಕ್ಟೋಬರ್ 29ರಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಯಿಂದ ದಿನಸಿ ಖರೀದಿದ ಅವರು ದಿನಸಿ ತುಂಬಿದ ಗಾಡಿಯನ್ನ ರಾತ್ರಿ 9:30 ಸಮಯದಲ್ಲಿ ಕೋಡಿಗೆಹಳ್ಳಿಯ ಅರಸೇಗೌಡ ಕಾಂಪ್ಲೆಕ್ಸ್ ಮುಂದೆ ಪಾರ್ಕ್ ಮಾಡಿದ್ದರು. ರಾತ್ರಿ ಮನೆಯಲ್ಲಿ ಮಲಗಿ ಮರುದಿನ ಬೆಳಗ್ಗೆ 6:30 ರ ಸಮಯದಲ್ಲಿ  ಬಂದು ನೋಡಿದ್ದಾಗ ಪಾರ್ಕ್ ಮಾಡಿದ ಗಾಡಿ ನಾಪತ್ತೆಯಾಗಿದೆ. ದಿನಸಿ ಸಮೇತ ಗಾಡಿಯನ್ನ ಕಳ್ಳರು ಕದ್ದೊಯ್ದಿದ್ದಾರೆ.

ಚೇತನ್ ಕುಮಾರ್ ಸಾಲ ಮಾಡಿ ಗಾಡಿ ಖರೀದಿ ಮಾಡಿದ್ದರು. ದಿನಸಿ ಸಾಮಾನುಗಳನ್ನು ಅಂಗಡಿಗಳಿಗೆ ಸರಬರಾಜು ಮಾಡುವ ಮೂಲಕ ಜೀವನ ಮಾಡುತ್ತಿದ್ದರು. ಗಾಡಿಯನ್ನ ನಂಬಿ ಜೀವನ ಮಾಡುತ್ತಿದ್ದ ಅವರ ಬದುಕನ್ನೇ ಕಳ್ಳರು ಬರ್ಬಾದು ಮಾಡಿದ್ದಾರೆ. ಗಾಡಿಯ ಸಾಲ 5 ಲಕ್ಷ ಮೌಲ್ಯದ ದಿನಸಿ ಸಾಮಾನುಗಳ ವೆಚ್ಚ ನನ್ನ ಹೆಗಲಿಗೆ ಬಿದ್ದಿದೆ ಎಂದು ತಮ್ಮ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು: ಶಿವಾನಂದ ತಗಡೂರು 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ 10 ವರ್ಷ ಜೈಲು, ₹6.84 ಲಕ್ಷ ದಂಡಬಸ್ ಪ್ರಯಾಣ ಹಾಗೂ ಹಾಲು ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿಕೆಶಿ: ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ಬಸ್ ದರವೂ ಕಡಿತಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ: ಸಾರ್ವಜನಿಕ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹಕಾಂಗ್ರೆಸ್‌ನಿಂದ ಸಾಂವಿಧಾನಿಕ ಸಂಸ್ಥೆಗಳಿಗೆ ಅಪಮಾನ, ದೇಶಹಿತದ ಚಿಂತನೆ ಇಲ್ಲ: ಹರೀಶ್ ದ್ವಿವೇದಿ ಕಿಡಿ​ಪ್ರಿಯಕರನಿಂದಲೇ ಯುವತಿ ಭೀಕರ ಕೊಲೆ; ನಾಪತ್ತೆ ನಾಟಕವಾಡಿದ ಖಾಕಿ!​ ರಾಜ್ಯ ಸಾರಿಗೆ ಬಸ್ ದರ ಭಾರಿ ಏರಿಕೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಟಿಕೆಟ್ ಬೆಲೆ ಹೆಚ್ಚಳ, ಮಧ್ಯರಾತ್ರಿಯಿಂದಲೇ ಜಾರಿಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: ‘ಭಾರತದಲ್ಲೂ ಇದೇ ಬದಲಾವಣೆ ಶೀಘ್ರ’ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ವಿರುದ್ಧ ಕನ್ನಡಿಗರ ಆಕ್ರೋಶ: ಬೇಷರತ್ ಕ್ಷಮೆಗೆ ಆಗ್ರಹ