ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯು ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಸೇವೆ ನಿಮಿತ್ತ ಆಯೋಜಿಸಲಾಗಿರುವ 'ಅಭಿಮಾನೋತ್ಸವ' ಕಾರ್ಯಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿ ಭಾಗವಹಿಸಲಿದ್ದು ಪೊಲೀಸರು ಬಂದೋಬಸ್ತ್ ಮಾಡಿ ಬೃಹತ್ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಅಧಿಕಾರಿಗಳು: 4 ಎಡಿಎಲ್ ಎಸ್‌ಪಿ, 17 ಡಿಎಸ್‌ಪಿ, 67 ಪಿಐ, ಮತ್ತು 117 ಪಿಎಸ್‌ಐ. ಇದರ ಜೊತೆಯಲ್ಲಿ 321 ಎಎಸ್‌ಐ, 1310 ಹೆಚ್‌ಸಿ/ಪಿಸಿ, 159 ಮಹಿಳಾ ಸಿಬ್ಬಂದಿ, ಮತ್ತು 755 ಗೃಹರಕ್ಷಕರು.
12 ಕೆಎಸ್‌ಆರ್‌ಪಿ ತುಕಡಿಗಳು, 14 ಡಿಎಆರ್ ತುಕಡಿಗಳು, 5 ಕ್ಯೂಆರ್‌ಟಿ ತಂಡಗಳು ಮತ್ತು 64 ಡಿಎಫ್‌ಎಂಡಿ ಗಳನ್ನು ನಿಯೋಜಿಸಲಾಗಿದೆ.
ನಿಷೇಧಿತ ವಸ್ತುಗಳು: ಬೀಡಿ, ಬೆಂಕಿಪೊಟ್ಟಣ, ಚೂಪಾದ ವಸ್ತುಗಳು, ಮೊಬೈಲ್ ಹೊರತುಪಡಿಸಿ ಇತರೆ ಎಲೆಕ್ಟ್ರಾನಿಕ್ ಸಾಧನಗಳು (ಚಾರ್ಜರ್, ಪವರ್ ಬ್ಯಾಂಕ್ ಇತ್ಯಾದಿ) ತರುವಂತಿಲ್ಲ. ಕಪ್ಪು ಬಣ್ಣದ ಶರ್ಟ್ ಮತ್ತು ಟವೆಲ್‌ಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಡ್ರೋನ್ ನಿಷೇಧ: ನಗರ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಸಣ್ಣ ಮಕ್ಕಳನ್ನು ಕರೆತರದಂತೆ ಸೂಚಿಸಲಾಗಿದೆ.
ವಾಹನ ಪಾರ್ಕಿಂಗ್ ಮತ್ತು ಸಂಚಾರ ಬದಲಾವಣೆ:
ವಾಹನಗಳ ಸುಗಮ ಸಂಚಾರಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಕಡೆಗಳಿಂದ ಬರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ನಿಗದಿಪಡಿಸಲಾಗಿದೆ.
ಶಿವಮೊಗ್ಗ-ಹೊಳಲ್ಕೆರೆ ಭಾಗ: ಮುರುಘಾಮಠದ ಹಿಂಭಾಗದ 'ತುಂಗಾ' ಪಾರ್ಕಿಂಗ್. ದಾವಣಗೆರೆ ಭಾಗ: ಮಡಿವಾಳ ಮಾಚಿದೇವ ಮಠದ ಮುಂಭಾಗದ 'ವೇದಾವತಿ' ಪಾರ್ಕಿಂಗ್. ಬೆಂಗಳೂರು-ಹಿರಿಯೂರು ಭಾಗ: ಎಸ್‌ಜೆಎಂ ಶಾಲೆ ಮೈದಾನ ಮತ್ತು ಹೆಲಿಪ್ಯಾಡ್ ಬಳಿ 'ಭದ್ರಾ' ಪಾರ್ಕಿಂಗ್.
ಮಾರ್ಗ ಬದಲಾವಣೆ: ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ ವಾಹನಗಳು ಜೆಎಂಐಟಿ ಸರ್ಕಲ್‌ನಿಂದ ಎನ್.ಹೆಚ್-50 ಮೂಲಕ ಸಂಚರಿಸಬೇಕು. ದಾವಣಗೆರೆಯಿಂದ ಬರುವವರು ಸೀಬಾರ ಅಂಡರ್ ಪಾಸ್ ಮೂಲಕ ನಗರ ಪ್ರವೇಶಿಸಬೇಕು. ಸಾರ್ವಜನಿಕರು ಮತ್ತು ವಾಹನ ಚಾಲಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.


