Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ಪದಾಧಿಕಾರಿಗಳ ಉಚ್ಚಾಟನೆ-ಭವಾನಿ ಪ್ರಸಾದ್

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಂಘಟನೆಯಲ್ಲಿ ಈ ಹಿಂದೆ ಇದ್ದ ಹಲವು ಸದಸ್ಯರುಗಳನ್ನು  ಉಚ್ಛಾಟಿಸಿ ಹುದ್ದೆಯಿಂದ ತೆರೆವುಗೊಳಿಸಲಾಗಿದೆ  ಇನ್ನು ಮುಂದೆ ಉಚ್ಚಾಟಿತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಸಂಘಟನೆಯ ಲೋಗೋ, ಹೆಸರು ಮತ್ತು ಲೆಟರ್ ಹೆಡ್‌ಗಳನ್ನು ಈ ಸಂಘಟನೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದೆಂದು ಪ್ರಜಾ ವಿಮೋಚನಾ ಚಳವಳಿ-ಸಮತಾವಾದ(PVC-S) ನ ರಾಜ್ಯಾಧ್ಯಕ್ಷ ಸಿ.ಭವಾನಿ ಪ್ರಸಾದ್ ತಿಳಿಸಿದರು. 

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ 1 ರಿಂದ 7 ಸದಸ್ಯರಾದ ಯಡವನಹಳ್ಳಿ ಕೃಷ್ಣಪ್ಪ,ಪಿ.ಎಂ. ಮಲ್ಲಿಕಾರ್ಜುನಸ್ವಾಮಿ, ಮದ್ದೂರಪ್ಪು ,ವೆಂಕಟೇಶ್ ಚಿನ್ನಪ್ಪ ಜೆ.ದೇವರಾಜು, ಶ್ರಿನಿವಾಸ್ ಇವರುಗಳಿಗೆ ಈ ಪ್ರಜಾ ವಿಮೋಚನಾಚಳುವಳಿ -ಸಮತಾವಾದ(ಪಿ.ವಿ.ಸಿ.ಎಸ್)ನ ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದ್ದು ಈ ಉಚ್ಚಾಟಿತ ವ್ಯಕ್ತಿಗಳು ಹಾಗೂ

ಇನ್ನಿತರೇ ಯಾರೇ ವ್ಯಕ್ತಿಗಳಾದರೂ ಯಾವುದೇ ಕಾರಣಕ್ಕೂ ಸಂಘಟನೆಯ ಲೋಗೋ, ಹೆಸರು ಮತ್ತು ಲೆಟರ್ ಹೆಡ್‌ಗಳನ್ನು ಈ ಸಂಘಟನೆಯ ಹೆಸರಿನಲ್ಲಿ ಬಳಸಬಾರದು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದೆಂದು ಒಂದು ವೇಳೆ ಕಾರ್ಯಕ್ರಮಗಳನ್ನು ಮಾಡಿದರೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ ಮಾತನಾಡಿ ಸ್ಥಳೀಯವಾಗಿ ನಮ್ಮ ಸಂಘಟನೆ ವತಿಯಿಂದ ಇಬ್ಬರು ರಾಜ್ಯ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದ್ದೇವೆ. ಇನ್ನು ಮುಂದೆ ಗ್ರಾಮಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಶಾಖೆಗಳನ್ನು  ಸದರಿ ಕಾರ್ಯದರ್ಶಿಗಳು ಸ್ಥಾಪಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ  ನೋಡಿಕೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೌರವಅಧ್ಯಕ್ಷ ಕೆ ಎಸ್ ಸ್ವಾಮಿ, ರಾಜ್ಯಾಧ್ಯಕ್ಷ ಸಿ.ಭವಾನಿ ಪ್ರಸಾದ್,ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ, ರಾಜ್ಯ ಉಪಾಧ್ಯಕ್ಷ ಕುದುರೆಗೆರೆ ತಿಮ್ಮರಾಜು, ರಾಜ್ಯ ಪ್ರಧಾನಕಾರ್ಯದರ್ಶಿ ಚನ್ನಕೇಶವ, ಕಾರ್ಯದರ್ಶಿ ಮುನಿಕೃಷ್ಣ, ಖಜಾಂಚಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಪಿ ಸುರೇಂದ್ರ, ನಾಗರಾಜ್, ಮೋಹನ್ ಕುಮಾರ್, ಶ್ರೀನಿವಾಸ್, ನಾಗವೇಣಿ, ಮುನಿರತ್ನಮ್ಮ ಸೇರಿದಂತೆ ಹಲವರು ಹಾಜರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ