Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೇವಾದಳದ ಸಂಸ್ಥಾಪಕ ಹರ್ಡಿಕರ್ ರವರ ಜನ್ಮ ದಿನಾಚರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತ ಸೇವಾದಳ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ವತಿಯಿಂದ ಭಾರತ ಸೇವಾದಳ ಸಂಸ್ಥಾಪಕ , ಸ್ವಾತಂತ್ರ್ಯ ಹೋರಾಟಗಾರ ಡಾ.ನಾ.ಸು. ಹರ್ಡೀಕರ್ ರವರ 137ನೇ ಜನ್ಮದಿನಾಚರಣೆಯನ್ನು ನಗರದ  ಬಸವೇಶ್ವರ ವೃತ್ತದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸೇವಾದಳದ ಜಿಲ್ಲಾಧ್ಯಕ್ಷ ಜಿ. ಲಕ್ಷ್ಮೀಪತಿ ಮಾತನಾಡಿ  ನಾ.ಸು.ಹರ್ಡಿಕರ್ ರವರು ತಮ್ಮ ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಮಾಡಿ ನಂತರ ಭಾರತಕ್ಕೆ ಮರಳಿ  ಭಾರತದ ಸ್ವಾತಂತ್ರ್ಯದ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಭಾರತ ಸೇವಾದಳ ಸ್ಥಾಪಿಸುವ ಮೂಲಕ ಶಿಸ್ತು ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವವನ್ನ ಬೆಳೆಸಿದರು. ಹಿಂದೂಸ್ತಾನಿ ಸೇವಾದಳವನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ಯುವಕರಲ್ಲಿ ಶಿಸ್ತು ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವವನ್ನು ಬೆಳೆಸಿದರು. ಸ್ವಾತಂತ್ರ್ಯದ ನಂತರ ಹಿಂದುಸ್ತಾನಿ ಸೇವಾದಳವನ್ನು ಭಾರತ ಸೇವಾದಳ ಎಂದು ಹೆಸರಿಸಿ ಅದನ್ನ ಶಿಕ್ಷಣ ಇಲಾಖೆಯೊಂದಿಗೆ ಸಂಯೋಜಿಸಿ ಇಂದಿನ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಶಿಸ್ತು ಹಾಗೂ ಸೇವಾ ಮನೋಭಾವವನ್ನು ಪ್ರೇರೇ ಪಿಸುವುದರಲ್ಲಿ ಭಾರತ ಸೇವಾದಳ ಉತ್ತಮವಾದ ಕೆಲಸವನ್ನು ನಿರ್ವಹಿಸುತ್ತಿದೆ.

ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾದ ರಾಷ್ಟ್ರಪ್ರೇಮ,ಶಿಸ್ತು,ಸೇವಾ ಮನೋಭಾವವನ್ನು  ಬೆಳೆಸುವಲ್ಲಿ ಬೆಂಗಳೂರು ಗ್ರಾಮಾಂತರ ಸೇವಾದಳದ ಜಿಲ್ಲಾ ಮತ್ತು ತಾಲೂಕು ಘಟಕಗಳು  ಪ್ರತಿಯೊಂದು ಶಾಲೆಯಲ್ಲೂ ಸೇವಾದಳದ  ಶಾಖೆಗಳನ್ನು ತೆರೆದು, ಸೇವಾದಳದ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತಿದೆ ಎಂದರು.

ಸೇವಾದಳದ ತಾಲೂಕು ಸಂಘಟಕ ಸುರೇಶ್ ಮಾತನಾಡಿ ಡಾ. ನಾ.ಸು. ಹರ್ಡೀಕರ್ ಅವರ ಜೀವನ ಚರಿತ್ರೆ ಅವರ ಸಂಘಟನೆಗಳ ಬಗ್ಗೆ ತಿಳಿಸಿದರು.

 ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಹಮಾಮ್  ವೆಂಕಟೇಶ್. ಪ್ರಧಾನ ಕಾರ್ಯದರ್ಶಿ ವಿ. ಸಿ.ಜ್ಯೋತಿ ಕುಮಾರ್. ನಗರಸಭೆಯ ನಾಮ ನಿರ್ದೇಶಕ ಸದಸ್ಯ ಕಾಂತರಾಜ್. ಜಿಲ್ಲಾ ಸಂಘಟಕ ರಾಜು,  ವಕೀಲರಾದ  ಆರ್.ವಿ.ಶಿವಕುಮಾರ್, ಆರ್.ವಿ.ಮನು. ನಿರ್ದೇಶಕ ಮಹೇಶ್ ಮುಂತಾದವರು ಇದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯುತ್ ಖಾಸಗಿಕಾರಣಕ್ಕೆ ನೇಕಾರ ಸಂಘಟನೆಗಳ ವಿರೋಧಜೂನ್ 27 ರಂದು ಕೆಂಪೇಗೌಡರ 517 ನೇ ಜಯಂತಿ ಆಚರಣೆಉದ್ಘಾಟನೆಗೆ ಮುನ್ನವೇ ಕುಸಿದ ರಸ್ತೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ"ದ್ವೇಷದ ಭಾಷಣ ಮುತ್ಸದ್ದಿತನಕ್ಕೆ ಕಪ್ಪು ಚುಕ್ಕೆ" :ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿಯಾವುದೇ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ; ರೈತರಿಗಾಗಿ ಹೋರಾಟಕ್ಕೆ ಸಿದ್ಧ: ನಿಖಿಲ್ಕೆಎಸ್‌ಐಐಡಿಸಿಯಿಂದ ಸಿಎಂ ಪರಿಹಾರ ನಿಧಿಗೆ ₹3 ಕೋಟಿ ದೇಣಿಗೆಪದವಿಪೂರ್ವ ವಿದ್ಯಾರ್ಥಿಗಳಿಗೆ 'SCOUT-2.0' ಕಾರ್ಯಕ್ರಮ: ಸಿಎಂ ಡಿಕೆಶಿ ಚಾಲನೆವಿಪ ಕ್ರಾಸ್ ವೋಟಿಂಗ್: ಹೈಕಮಾಂಡ್‌ಗೆ ವರದಿ ನೀಡಲು ದೆಹಲಿಗೆ ವಿಜಯೇಂದ್ರ, ಅಶೋಕ್!2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಸಚಿವನೂ ಆಗ್ತೀನಿ: ರಮೇಶ್ ಜಾರಕಿಹೊಳಿಮದುವೆಗೆ ಒಂದೇ ದಿನ ಬಾಕಿ: ಯುವಕನ ಕಿರುಕುಳಕ್ಕೆ ಬೇಸತ್ತು ಮಗಳು, ಹೆತ್ತವರು ಒಟ್ಟಿಗೆ ಆತ್ಮಹತ್ಯೆ!