ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಾಜದ ಕಟ್ಟಕಡೆಯ ಜನರೆಂದು ಪರಿಗಣಿಸಲ್ಪಡುವ ಸದಾ ಅನಾಥ ಪ್ರಜ್ಞೆಯಲ್ಲೇ ಬದುಕುತ್ತಿರುವ ಪರಿಶಿಷ್ಟ ಜಾತಿಯ ಅಸಂಘಟಿತ 59 ಸೂಕ್ಷ್ಮ, ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳು ಭಾರತೀಯ ಸಂಸ್ಕೃತಿಯ ರಾಯಭಾರಿಗಳು.
ಆದರೆ ಅವರಿಗೆ ಸಾಮಾಜಿಕ ನ್ಯಾಯ ಎನ್ನುವುದು ಮರೀಚಿಕೆಯಾಗಿದೆ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇವರ ಪಾಲಿನ ಬುತ್ತಿಯನ್ನು ಕಸಿದು ಸಂಪೂರ್ಣ ವಂಚನೆ ಎಸಗಿ ಮರಣ ಶಾಸನ ಬರೆದಿದೆ.
ಇವರ ಪರವಾಗಿ ಕರ್ನಾಟಕ ಬಿಜೆಪಿ ದನಿ ಎತ್ತಿ ಹೋರಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.


