Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಕಿರುಕುಳದ ವಿರುದ್ಧ ಮೌನ ಮುರಿಯಿರಿ; ಮಗಳನ್ನು ಗೌರವದಿಂದ ಮನೆಗೆ ಬರಮಾಡಿಕೊಂಡ ತಂದೆ:

ಚಂದ್ರವಳ್ಳಿ ನ್ಯೂಸ್, ತೇಜ್‌ಗಢಿ:
"ಮದುವೆಯಾದ ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಿಂದ ಇಲ್ಲದಿದ್ದರೆ
, ಅವಳನ್ನು ಅಲ್ಲಿಯೇ ಇರುವಂತೆ ಬಲವಂತ ಮಾಡುವುದು ತಪ್ಪು. ಅವಳನ್ನು ಗೌರವದಿಂದ ತವರು ಮನೆಗೆ ಮರಳಿ ಕರೆತರುವುದು ಪ್ರತಿ ತಂದೆಯ ಕರ್ತವ್ಯ," ಎನ್ನುವ ಮೂಲಕ ಜ್ಞಾನೇಂದ್ರ ಶರ್ಮಾ ಅವರು ಸಮಾಜಕ್ಕೆ ಹೊಸ ಸಂದೇಶ ನೀಡಿದ್ದಾರೆ.

​ವೈವಾಹಿಕ ಜೀವನದಲ್ಲಿ ಎದುರಾದ ಕಹಿ ಘಟನೆಗಳಿಂದಾಗಿ ತಮ್ಮ ಮಗಳು ಪ್ರಣೀತಾ ಶರ್ಮಾ ಅವರನ್ನು ಜ್ಞಾನೇಂದ್ರ ಅವರು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. "ನಾವು ಯಾವುದೇ ಜೀವನಾಂಶ ಅಥವಾ ಆಸ್ತಿಯನ್ನು ಬಯಸಲಿಲ್ಲ, ನಮಗೆ ನಮ್ಮ ಮಗಳು ಮುಖ್ಯ," ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.

​ಮಹಿಳೆಯರಿಗೆ ಪ್ರಣೀತಾ ಕರೆ: ‘ಆರ್ಥಿಕ ಸ್ವತಂತ್ರರಾಗಿ’
​ತಮ್ಮ ಜೀವನದ ಕಠಿಣ ನಿರ್ಧಾರದ ಬಳಿಕ ಇತರ ಮಹಿಳೆಯರಿಗೆ ಧೈರ್ಯ ತುಂಬಿರುವ ಪ್ರಣೀತಾ ಶರ್ಮಾ
, "ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ. ಮೌನ ಮುರಿಯಿರಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ. ಮದುವೆಗೂ ಮುನ್ನ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಮತ್ತು ಸದೃಢರಾಗಿರುವುದು ಅತ್ಯಗತ್ಯ," ಎಂದು ಸಲಹೆ ನೀಡಿದ್ದಾರೆ.

​ಕುಟುಂಬವೇ ದೊಡ್ಡ ಶಕ್ತಿ-
​ಕಳೆದ ಕೆಲವು ವರ್ಷಗಳಿಂದ ಶರ್ಮಾ ಕುಟುಂಬ ಸರಣಿ ಸಂಕಷ್ಟಗಳನ್ನು ಎದುರಿಸುತ್ತಿದೆ.
2022ರಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಣೀತಾ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಈಗ ವಿಚ್ಛೇದನದಂತಹ ನೋವಿನ ಸಂದರ್ಭದಲ್ಲೂ ಕುಟುಂಬವು ಬೆನ್ನೆಲುಬಾಗಿ ನಿಂತಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

​ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರಣೀತಾ ಶರ್ಮಾ ಅವರು ಪ್ರಸ್ತುತ ತೇಜ್‌ಗಢಿಯ ಪ್ರಣವ್ ವಶಿಷ್ಠ ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

​ನೋವಿನ ನಡುವೆಯೂ ಈ ಕುಟುಂಬ ತೋರಿರುವ ಸ್ಥಿತಪ್ರಜ್ಞೆ ಮತ್ತು ಹೆಣ್ಣುಮಕ್ಕಳ ಘನತೆಯನ್ನು ಎತ್ತಿಹಿಡಿದ ರೀತಿ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಒಗ್ಗಟ್ಟಿನ ಹೋರಾಟ ಅನಿವಾರ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರಿಸಿದ ಅವರ ಕಿರು ಪರಿಚಯಕೆಪಿಎಸ್​ಸಿ ಅಕ್ರಮ ತನಿಖೆ: ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ದೂರುಖಾಸಗಿ ವಿವಿ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವುವಾಲ್ಮೀಕಿ ವೃತ್ತದ ಬಳಿ ಬಿದಿರಿನ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮಇಂಡಿ ಮಹತ್ವದ ಸಭೆ: ನವೆಂಬರ್ 5ರಂದು ಬೃಹತ್ ಪ್ರತಿಭಟನೆಗೆ ಕರೆಪಕ್ಷ ಬಿಟ್ಟವರೆಲ್ಲಾ ನಿಮ್ಮ ಗೆಳೆಯರೇ ಎಂದ ಖರ್ಗೆ; ಸಿಂಧಿಯಾ ನನ್ನವರಲ್ಲ ಎಂದ ರಾಹುಲ್!ನೂತನ ರಾಜ್ಯಪಾಲೆಯಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರಶ್ರೀ ಭೂತರಾಯಸ್ವಾಮಿ ದೇವಾಲಯದಲ್ಲಿ ನೂತನ ಬೆನವಗಳ ಪ್ರತಿಷ್ಠಾಪನೆ ಮಹೋತ್ಸವನೂತನ ರಾಜ್ಯಪಾಲರಿಗೆ ಸ್ವಾಗತ, ನಿರ್ಗಮಿತ ರಾಜ್ಯಪಾಲರಿಗೆ ಗೌರವ ನಮನ: ಡಿ.ಕೆ. ಶಿವಕುಮಾರ್