Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾಮಾಜಿಕ ಭದ್ರತಾ ಪಿಂಚಣಿ ಅಕ್ರಮಕ್ಕೆ ಬ್ರೇಕ್: 18.06 ಲಕ್ಷ ಫಲಾನುಭವಿಗಳ ಪಿಂಚಣಿ ಅಮಾನತು!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಸಂಧ್ಯಾ ಸುರಕ್ಷಾ’ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ನಡೆಯುತ್ತಿದ್ದ ನಕಲಿ ಹಾಗೂ ಅಕ್ರಮ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಭಾರಿ ಕಾರ್ಯಾಚರಣೆ ನಡೆಸಿದೆ.

ಅರ್ಹತೆ ಇಲ್ಲದಿದ್ದರೂ ಪಿಂಚಣಿ ಪಡೆಯುತ್ತಿದ್ದವರನ್ನು ಪತ್ತೆ ಹಚ್ಚಲಾಗಿದ್ದು, ರಾಜ್ಯಾದ್ಯಂತ ಒಟ್ಟು 18.06 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ನೀಡಿರುವ ಮಾಹಿತಿಯ ಪ್ರಮುಖ ಮುಖ್ಯಾಂಶಗಳು ಹೀಗಿವೆ.

ತಪಾಸಣೆಯ ಪ್ರಮುಖ ಅಂಕಿ-ಅಂಶಗಳು (2026ರ ಆಗಸ್ಟ್ 13ರವರೆಗೆ)ಒಟ್ಟು ನೋಂದಾಯಿತ ಫಲಾನುಭವಿಗಳು: 83,12,536, ಗುರುತಿಸಲಾದ ಶಂಕಾಸ್ಪದ ಪ್ರಕರಣಗಳು: 23,14,544, ತಾತ್ಕಾಲಿಕವಾಗಿ ಸ್ಥಗಿತಗೊಂಡ ಪಿಂಚಣಿಗಳು: 18,06,032, 2026ರ ಜುಲೈನಲ್ಲಿ ಪಿಂಚಣಿ ಪಡೆದವರು: 62,43,640.

ಅಕ್ರಮ ತಡೆಯಲು 'ಸಂಯೋಜನ' ಆ್ಯಪ್ ಬಳಕೆಕುಟುಂಬದ ದತ್ತಾಂಶ, ಆದಾಯ ತೆರಿಗೆ ಪಾವತಿದಾರರ ಮಾಹಿತಿ, APL ಕಾರ್ಡ್‌ಗಳು, ವಯಸ್ಸಿನ ವ್ಯತ್ಯಾಸ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (HRMS) ದಾಖಲೆಗಳನ್ನು ‘ಸಂಯೋಜನ’ ಮೊಬೈಲ್ ಆಪ್ ಮೂಲಕ ಪರಿಶೀಲಿಸಲಾಗಿದೆ. ತದನಂತರ ಗ್ರಾಮ ಲೆಕ್ಕಾಧಿಕಾರಿಗಳು ಭೌತಿಕ ತಪಾಸಣೆ ನಡೆಸಿ, ಶಂಕಾಸ್ಪದ ಪ್ರಕರಣಗಳ ಪಟ್ಟಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದ್ದಾರೆ.

ಯಾವ ಯೋಜನೆಯಲ್ಲಿ ಎಷ್ಟು ಶಂಕಾಸ್ಪದ ಪ್ರಕರಣಗಳಾದ ಸಂಧ್ಯಾ ಸುರಕ್ಷಾ ಯೋಜನೆ 12,61,610, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ 5,63,938, ವಿಧವಾ ಪಿಂಚಣಿ 3,36,746, ಅಂಗವಿಕಲರ ಪಿಂಚಣಿ 2,56,750, ಮನಸ್ವಿನಿ ಪಿಂಚಣಿ 17,360, ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ 883, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಪಿಂಚಣಿ 526, ಮೈತ್ರಿ ಪಿಂಚಣಿ 454, ಆ್ಯಸಿಡ್ ದಾಳಿ ಸಂತ್ರಸ್ತರ ಪಿಂಚಣಿ 08.

ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿಗಳ ವಿವರ ಬೆಳಗಾವಿ: 1,82,758, ಶಂಕಾಸ್ಪದ ಪ್ರಕರಣಗಳು (1,51,311 ಪಿಂಚಣಿ ಸ್ಥಗಿತ), ಬೆಂಗಳೂರು ನಗರ: 1,36,669 ಶಂಕಾಸ್ಪದ ಪ್ರಕರಣಗಳು (1,24,073 ಪಿಂಚಣಿ ಸ್ಥಗಿತ), ಮೈಸೂರು: 1,33,831 ಶಂಕಾಸ್ಪದ ಪ್ರಕರಣಗಳು (1,11,808 ಪಿಂಚಣಿ ಸ್ಥಗಿತ), ಕಲಬುರಗಿ: 1,18,387 ಶಂಕಾಸ್ಪದ ಪ್ರಕರಣಗಳು (98,984 ಪಿಂಚಣಿ ಸ್ಥಗಿತ), ತುಮಕೂರು: 1,18,217 ಶಂಕಾಸ್ಪದ ಪ್ರಕರಣಗಳು (71,111 ಪಿಂಚಣಿ ಸ್ಥಗಿತ), ದಾವಣಗೆರೆ: 1,04,805 ಶಂಕಾಸ್ಪದ ಪ್ರಕರಣಗಳು (94,012 ಪಿಂಚಣಿ ಸ್ಥಗಿತ), ರಾಯಚೂರು: 1,01,272 ಶಂಕಾಸ್ಪದ ಪ್ರಕರಣಗಳು (89,387 ಪಿಂಚಣಿ ಸ್ಥಗಿತ). ವಿಳಾಸ ಬದಲಾವಣೆ, ಆದಾಯ ಪ್ರಮಾಣಪತ್ರ ಸಲ್ಲಿಸದಿರುವುದು ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ಪಿಂಚಣಿ ತಡೆಹಿಡಿಯಲಾಗಿದೆ.

ನೈಜ ಹಾಗೂ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸಿದ ತಕ್ಷಣವೇ ಅವರ ಪಿಂಚಣಿಯನ್ನು ಪುನರಾರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ