LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದಕ್ಷಿಣ ವಲಯ ಮಂಡಳಿ ಸಭೆ: ಅಮಿತ್ ಶಾಗೆ ಭವ್ಯ ಸ್ವಾಗತ

Advertisement
Advertisement

31ನೇ ದಕ್ಷಿಣ ವಲಯ ಮಂಡಳಿ ಸಭೆ: ಅಮಿತ್ ಶಾಗೆ ಭವ್ಯ ಸ್ವಾಗತ
ಚಂದ್ರವಳ್ಳಿ ನ್ಯೂಸ್, ಚೆನ್ನೈ:
ದಕ್ಷಿಣ ಭಾರತದ ಐದು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ 
'31ನೇ ದಕ್ಷಿಣ ವಲಯ ಮಂಡಳಿ ಸಭೆನಡೆಯಲಿದೆ.

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೊವಲಂನಲ್ಲಿರುವ ಖಾಸಗಿ ಐಷಾರಾಮಿ ಹೋಟೆಲ್‌ನಲ್ಲಿ ಈ ಮಹತ್ವದ ಸಭೆ ಆಯೋಜನೆಯಾಗಿದ್ದುಕಾರ್ಯಕ್ರಮದಲ್ಲಿ ಭಾಗವಹಿಸಲು ಚೆನ್ನೈಗೆ ಆಗಮಿಸುವ ಅಮಿತ್ ಶಾ ಅವರಿಗೆ ಹಿರಿಯ ಅಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಲಿದ್ದಾರೆ.

ಸಭೆಯಲ್ಲಿ ಭಾಗವಹಿಸಲಿರುವ ಪ್ರಮುಖ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು:
ಕರ್ನಾಟಕ: ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮಿಳುನಾಡು: ಮುಖ್ಯಮಂತ್ರಿ ಸಿಎಂ ವಿಜಯ್, ಆಂಧ್ರಪ್ರದೇಶ: ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ: ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಕೇರಳ:

ಮುಖ್ಯಮಂತ್ರಿ ವಿ.ಡಿ. ಸತೀಶನ್, ಪುದುಚೇರಿ: ಮುಖ್ಯಮಂತ್ರಿ ಎನ್. ರಂಗಸ್ವಾಮಿ ಇವರೊಂದಿಗೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳುಗೃಹ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಭೆಯ ಪ್ರಮುಖ ಚರ್ಚಾ ವಿಷಯಗಳು: 2022ರ ಬಳಿಕ ಈ ಸಭೆ ನಡೆಯುತ್ತಿರುವುದರಿಂದ ಈ ಬಾರಿಯ ಸಮ್ಮೇಳನ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಅಂತಾರಾಜ್ಯ ವಿಷಯಗಳು: ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪ್ರಮುಖ ಭಿನ್ನಾಭಿಪ್ರಾಯಗಳ ಕುರಿತು ಕೇಂದ್ರದ ಮೇಲ್ವಿಚಾರಣೆಯಲ್ಲಿ ಚರ್ಚೆ.

ಅಭಿವೃದ್ಧಿ ಯೋಜನೆಗಳು: ಆರ್ಥಿಕ ಅಭಿವೃದ್ಧಿಮೂಲಸೌಕರ್ಯ ವಿಸ್ತರಣೆಕೈಗಾರಿಕಾ ಹೂಡಿಕೆಮಾಹಿತಿ ತಂತ್ರಜ್ಞಾನಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ.

 

ಸುರಕ್ಷತೆ ಮತ್ತು ಗಡಿ ನಿರ್ವಹಣೆ: ಅಪರಾಧ ತಡೆಗಟ್ಟುವಿಕೆಕಾನೂನು ಜಾರಿ ಸಂಸ್ಥೆಗಳ ನಡುವೆ ಸಮನ್ವಯವಿಪತ್ತು ನಿರ್ವಹಣೆ ಹಾಗೂ ಗಡಿ ವಿವಾದಗಳ ಇತ್ಯರ್ಥ.

ದಕ್ಷಿಣ ಭಾರತದ ರಾಜ್ಯಗಳ ನಡುವೆ ಸೌಹಾರ್ದಯುತ ಬಾಂಧವ್ಯ ವೃದ್ಧಿಸಲು ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿರುವ ಅಂತಾರಾಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಭೆ ಉತ್ತಮ ವೇದಿಕೆಯಾಗಲಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಯಾರೂ ಗೈರಾಗಬೇಡಿ, ಒಗ್ಗಟ್ಟಿನಿಂದ ವಿಪಕ್ಷಗಳನ್ನು ಎದುರಿಸಿ": ಸಿಎಂ ಡಿ.ಕೆ. ಶಿವಕುಮಾರ್ಹಿನ್ನೀರಿಗೆ ಇಳಿದು ಯುವಕ ಸಾವು, ದಾವಣಗೆರೆಯಲ್ಲಿ ಭೀಕರ ಬೈಕ್ ಅಪಘಾತ: ಮೂವರ ದುರಂತ ಅಂತ್ಯ!ದಕ್ಷಿಣ ವಲಯ ಮಂಡಳಿ ಸಭೆ: ಅಮಿತ್ ಶಾಗೆ ಭವ್ಯ ಸ್ವಾಗತ1.07 ಕೋಟಿ ಮತದಾರರು ಪರಿಷ್ಕೃತ ಪಟ್ಟಿಯಿಂದ ಹೊರಕ್ಕೆ: ಮುಖ್ಯ ಚುನಾವಣಾಧಿಕಾರಿ ಮಾಹಿತಿಸಾಮಾಜಿಕ ಭದ್ರತಾ ಪಿಂಚಣಿ ಅಕ್ರಮಕ್ಕೆ ಬ್ರೇಕ್: 18.06 ಲಕ್ಷ ಫಲಾನುಭವಿಗಳ ಪಿಂಚಣಿ ಅಮಾನತು!ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ: ಸ್ವಕ್ಷೇತ್ರ ತಿಪಟೂರಿನಲ್ಲಿ ಇಂದು ಅಂತಿಮ ಸಂಸ್ಕಾರರಾಜ್ಯದ ಜೈಲುಗಳಲ್ಲಿ 'ವಿಐಪಿ' ಸಂಸ್ಕೃತಿ ಇಲ್ಲ, ಕಾನೂನು ಎಲ್ಲರಿಗೂ ಒಂದೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ"ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಸೇರಿಸಿ": ರಾಜ್ಯ ಸರ್ಕಾರಕ್ಕೆ ನೀರಾವರಿ ಹೋರಾಟ ಸಮಿತಿ ಉಗ್ರ ಆಗ್ರಹ!27.60 ಲಕ್ಷ ಲಾಭದಲ್ಲಿ ವಿಶ್ವ ಚೇತನ ಸಹಕಾರಿ ಸಂಘ : ಎ. ಲಕ್ಷ್ಮೀಶಚಿತ್ರದುರ್ಗ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ : ಕೆ ಮಂಜುನಾಥ್