LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

"ಯಾರೂ ಗೈರಾಗಬೇಡಿ, ಒಗ್ಗಟ್ಟಿನಿಂದ ವಿಪಕ್ಷಗಳನ್ನು ಎದುರಿಸಿ": ಸಿಎಂ ಡಿ.ಕೆ. ಶಿವಕುಮಾರ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ತಮ್ಮ ಚೊಚ್ಚಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದುಅಧಿವೇಶನದಲ್ಲಿ ಸಂಪೂರ್ಣ ಒಗ್ಗಟ್ಟು ಪ್ರದರ್ಶಿಸಿ ಪ್ರತಿಪಕ್ಷಗಳ ಆರೋಪಗಳನ್ನು ಬಲವಾಗಿ ಎದುರಿಸುವಂತೆ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಅಧಿವೇಶನದ ಕಾರ್ಯತಂತ್ರಗಳ ಕುರಿತು ದೀರ್ಘ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಸಿಎಂ ನೀಡಿದ ಪ್ರಮುಖ ನಿರ್ದೇಶನಗಳು ಹಾಗೂ ಮುಖ್ಯಾಂಶಗಳು: ನಾಗೇಂದ್ರ ಪರ ಒಗ್ಗಟ್ಟು ಹಾಗೂ ಕೌಂಟರ್ ಅಟ್ಯಾಕ್: ಸಚಿವ ಬಿ. ನಾಗೇಂದ್ರ ವಿಚಾರದಲ್ಲಿ ವಿಪಕ್ಷಗಳ ಹೋರಾಟಕ್ಕೆ ಮಣಿಯದೆ ಎಲ್ಲರೂ ಅವರ ಪರವಾಗಿ ಧ್ವನಿ ಎತ್ತಬೇಕು. ಬಿಜೆಪಿ ಸರ್ಕಾರದ ಅವಧಿಯ ಹಗರಣಗಳನ್ನು ಕೆದಕಿ ಕೌಂಟರ್ ನೀಡುವ ಮೂಲಕ ಪ್ರತಿಪಕ್ಷಗಳ ಕೈಮೇಲಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರಿಗೆ ಸೂಚಿಸಿದರು.

ಸಭೆಯಲ್ಲಿ ಸಿಎಂ ನೀಡಿದ ಪ್ರಮುಖ ನಿರ್ದೇಶನಗಳು ಹಾಗೂ ಮುಖ್ಯಾಂಶಗಳು: ನಾಗೇಂದ್ರ ಪರ ಒಗ್ಗಟ್ಟು ಹಾಗೂ ಕೌಂಟರ್ ಅಟ್ಯಾಕ್: ಸಚಿವ ಬಿ. ನಾಗೇಂದ್ರ ವಿಚಾರದಲ್ಲಿ ವಿಪಕ್ಷಗಳ ಹೋರಾಟಕ್ಕೆ ಮಣಿಯದೆ ಎಲ್ಲರೂ ಅವರ ಪರವಾಗಿ ಧ್ವನಿ ಎತ್ತಬೇಕು. ಬಿಜೆಪಿ ಸರ್ಕಾರದ ಅವಧಿಯ ಹಗರಣಗಳನ್ನು ಕೆದಕಿ ಕೌಂಟರ್ ನೀಡುವ ಮೂಲಕ ಪ್ರತಿಪಕ್ಷಗಳ ಕೈಮೇಲಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರಿಗೆ ಸೂಚಿಸಿದರು.

ಶಾಸಕರ ಭೇಟಿ ಹಾಗೂ ಅನುದಾನ: ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ ಸಿಎಂಶಾಸಕರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳು ಎರಡು ದಿನಗಳನ್ನು ಮೀಸಲಿಡುವುದಾಗಿ ತಿಳಿಸಿದರು. ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಬರ ಪರಿಸ್ಥಿತಿಕುಡಿಯುವ ನೀರು ಹಾಗೂ ಬೆಳೆ ವಿಮೆ ಕಡೆಗೆ ಹೆಚ್ಚಿನ ಗಮನ ಹರಿಸಲು ಸಲಹೆ ನೀಡಿದರು.

ಅಸಮಾಧಾನಿತರಲ್ಲಿ ಕ್ಷಮೆಯಾಚನೆ: ಸಂಪುಟ ವಿಸ್ತರಣೆ ವೇಳೆ ಎಲ್ಲ ಅರ್ಹ ಹಿರಿಯ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗದ್ದಕ್ಕೆ ಸಿಎಂ ವಿನಮ್ರವಾಗಿ ಕ್ಷಮೆ ಕೋರಿದರು. "ಹಿಂದೆ ನನಗೂ ಮಂತ್ರಿ ಪದವಿ ಸಿಗದಿದ್ದಾಗ ನಿಷ್ಠೆಯಿಂದ ಕೆಲಸ ಮಾಡಿದ್ದೆಈಗ ಹೈಕಮಾಂಡ್ ಸಿಎಂ ಮಾಡಿದೆ. ಸಚಿವ ಸ್ಥಾನ ಸಿಗದಿರುವ ಬೇಸರ ನನಗೂ ಇದೆ" ಎಂದರು.

ವಿಪಕ್ಷಗಳ ನಡೆಗೆ ತಿರುಗೇಟು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯ ಗೆಲುವನ್ನು ಅರಗಿಸಿಕೊಳ್ಳಲಾಗದೆ ಬಿಜೆಪಿ-ಜೆಡಿಎಸ್ ಸದನದಲ್ಲಿ ಗಲಾಟೆ ಮಾಡುತ್ತಿವೆ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಮೇಲೆಯೂ ಪ್ರಕರಣಗಳಿದ್ದುಬಿಡದಿ ಟೌನ್‌ಶಿಪ್ ಯೋಜನೆಯನ್ನು ಅವರೇ ಆರಂಭಿಸಿ ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಹಾಗೂ ಪ್ರಮುಖ ನಾಯಕರ ಗೈರುಹಾಜರಿ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದರೂ ಸಭೆಗೆ ಗೈರಾಗಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇವರ ಜೊತೆಗೆ ಸಚಿವ ಸ್ಥಾನ ವಂಚಿತರಾದ ಹಿರಿಯ ಶಾಸಕರಾದ ಹೆಚ್.ಸಿ. ಮಹದೇವಪ್ಪಶಿವಾನಂದ ಪಾಟೀಲ್ಎಂ. ಕೃಷ್ಣಪ್ಪಪ್ರಿಯಕೃಷ್ಣಎಂ.ಸಿ. ಸುಧಾಕರ್ಎಸ್.ಎನ್. ನಾರಾಯಣಸ್ವಾಮಿ ಹಾಗೂ ಕೊತ್ತನೂರು ಮಂಜುನಾಥ್ ಸಹ ಸಭೆಯಿಂದ ದೂರ ಉಳಿದಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಯಾರೂ ಗೈರಾಗಬೇಡಿ, ಒಗ್ಗಟ್ಟಿನಿಂದ ವಿಪಕ್ಷಗಳನ್ನು ಎದುರಿಸಿ": ಸಿಎಂ ಡಿ.ಕೆ. ಶಿವಕುಮಾರ್ಹಿನ್ನೀರಿಗೆ ಇಳಿದು ಯುವಕ ಸಾವು, ದಾವಣಗೆರೆಯಲ್ಲಿ ಭೀಕರ ಬೈಕ್ ಅಪಘಾತ: ಮೂವರ ದುರಂತ ಅಂತ್ಯ!ದಕ್ಷಿಣ ವಲಯ ಮಂಡಳಿ ಸಭೆ: ಅಮಿತ್ ಶಾಗೆ ಭವ್ಯ ಸ್ವಾಗತ1.07 ಕೋಟಿ ಮತದಾರರು ಪರಿಷ್ಕೃತ ಪಟ್ಟಿಯಿಂದ ಹೊರಕ್ಕೆ: ಮುಖ್ಯ ಚುನಾವಣಾಧಿಕಾರಿ ಮಾಹಿತಿಸಾಮಾಜಿಕ ಭದ್ರತಾ ಪಿಂಚಣಿ ಅಕ್ರಮಕ್ಕೆ ಬ್ರೇಕ್: 18.06 ಲಕ್ಷ ಫಲಾನುಭವಿಗಳ ಪಿಂಚಣಿ ಅಮಾನತು!ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ: ಸ್ವಕ್ಷೇತ್ರ ತಿಪಟೂರಿನಲ್ಲಿ ಇಂದು ಅಂತಿಮ ಸಂಸ್ಕಾರರಾಜ್ಯದ ಜೈಲುಗಳಲ್ಲಿ 'ವಿಐಪಿ' ಸಂಸ್ಕೃತಿ ಇಲ್ಲ, ಕಾನೂನು ಎಲ್ಲರಿಗೂ ಒಂದೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ"ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಸೇರಿಸಿ": ರಾಜ್ಯ ಸರ್ಕಾರಕ್ಕೆ ನೀರಾವರಿ ಹೋರಾಟ ಸಮಿತಿ ಉಗ್ರ ಆಗ್ರಹ!27.60 ಲಕ್ಷ ಲಾಭದಲ್ಲಿ ವಿಶ್ವ ಚೇತನ ಸಹಕಾರಿ ಸಂಘ : ಎ. ಲಕ್ಷ್ಮೀಶಚಿತ್ರದುರ್ಗ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ : ಕೆ ಮಂಜುನಾಥ್