Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಬಂಪರ್ ಕೊಡುಗೆ, ಕೋಟ್ಯಂತರ ರೂ.ರೈತರಿಗೆ ಲಭ್ಯ-ಕಂದಿಕೆರೆ ಜಗದೀಶ್

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹಿರಿಯೂರು ತಾಲ್ಲೂಕಿನ
64 ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಸಹಕಾರಿ ಸಂಘಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆ.

ಪಶುಸಂಗೂಪನ ಇಲಾಖೆ ಇಲಾಖೆಯಿಂದ ದೂರೆಯುವ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಜಿಲ್ಲಾ ನಿರ್ದೇಶಕ ಕೃಷಿಕ ಸಮಾಜ ಚಿತ್ರದುರ್ಗ ಹಾಗೂ ಕರಾಪಸಸ.ನಿ ನಿರ್ದೇಶಕ ಕೆ.ಜಗದೀಶ ಕಂದಿಕರೆ, ಮಾತನಾಡಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್  ರವರು ರಾಷ್ಟೀಯ ಸುಸ್ಥಿರ ಅಭಿಯಾನ ಯೋಜನೆಯಲ್ಲಿ ಹಿರಿಯೂರು ತಾಲ್ಲೂಕಿನ 1000 ರೈತರಿಗೆ 2.50ಕೋಟಿ ಸಹಾಯ ಧನವನ್ನು ಮುಂಜೂರು ಮಾಡಿಸಿದ್ದಾರೆ ಎಂದು ತಿಳಿಸಿದರು.

ರೈತರು ಇದರ ಸದುಪಯೋಗಪಡಿಸಿಕೊಂಡು ಅರ್ಹ ಮತ್ತು ಆಸಕ್ತ ರೈತರಿಗೆ ನೈಜ ಫಲಾಭವಿಗಳಿಗೆ ತಲುಪಿಸಬೇಕು ಹಾಗೂ ಎಲ್ಲಾ ಸಹಕಾರಿ ಸಂಘಗಗಳ ಪದಾಧಿಕಾರಿಗಳು ಶ್ರಮಿಸಬೇಕು ಮತ್ತು ಆಸಕ್ತ ಸಹಕಾರಿಗಳು ಛಾಪಾಕಾಗದ ವಿತರಣೆ, ಆಹಾರ ಸಂಸ್ಕರಣ ಕೇಂದ್ರಗಳಿಗೆ, ಗೊಬ್ಬರ ಬೀಜ ಕೇ.ದ್ರಗಳನ್ನ ತೆರೆಯಲು ಅನುಮತಿಪಡೆದು ಸಹಾಯಧನ ಪಡೆಯಲು ಮತ್ತು ಸಹಕಾರಿ ರೈತರಿಗೆ ಹಾವು ಕಡಿತ ಆತ್ಮಹತ್ಯೆ ಆಕಸ್ಮಿಕ ಮರಣಗಳಿಗೆ ಸರ್ಕಾರದ ಸೌಲಭ್ಯ  ಪಡೆದು ಕೊಳ್ಳುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.


ಹಿರಿಯೂರು ತಾಲ್ಲೂಕಿನ ಸಹಕಾರಿಗಳ ಒಕ್ಕೂಟ ರಚನೆ ಬಗ್ಗೆ ಹಾಗೂ ಸೌಲಭ್ಯ ಪಡೆದುಕೊಳ್ಳಲು ಮತ್ತು ವ್ಯಾಪ್ತಿಯ ಎಲ್ಲಾ ರೈತರಿಗೆ ಕಂದಿಕೆರೆ ಜಗದೀಶ್ ತಿಳಿಸಿದರು.


ಉಪನಿರ್ದೇಶಕ ಕುಮಾರ್, ಉಪನಿರ್ದೇಶಕ ತಿಪ್ಪೇಸ್ವಾಮಿ, ವೈದ್ಯಾಧಿಕಾರಿ ನಾಗರಾಜ, ಕೃಷಿ ಅಧಿಕಾರಿ ಕಿರಣ್ ಮತ್ತು ಶಿಮುಲ್ ಒಕ್ಕೂಟದ ವಿಸ್ತರಣಾಧಿಕಾರಿ ಕೃಷ್ಣಕುಮಾರ್ ರವರುಗಳು ಭಾಗವಹಿಸಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ