Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿ.ವೈ ವಿಜಯೇಂದ್ರ ಪೇಮೆಂಟ್ ಸೀಟ್ ಅಧ್ಯಕ್ಷ

Advertisement
Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು 'ಜನಾಕ್ರೋಶ ಯಾತ್ರೆ'ಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಸದುದ್ದೇಶ ಈ ಯಾತ್ರೆಗಿಲ್ಲ. ವಿಜಯೇಂದ್ರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಪೇಮೆಂಟ್ ಸೀಟ್ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಪಕ್ಷದೊಳಗೆ ತಮ್ಮ ವಿರುದ್ಧ ಹುಟ್ಟಿಕೊಂಡಿರುವ ಅಪಸ್ವರಗಳನ್ನು ಹತ್ತಿಕ್ಕಲು ಜನಾಕ್ರೋಶ ಯಾತ್ರೆ ಎಂಬ ಬೀದಿನಾಟಕ ಆರಂಭಿಸಿದ್ದಾರೆ.

ಇದು ನಮ್ಮ ಸರ್ಕಾರದ ವಿರುದ್ಧದ ಹೋರಾಟವಲ್ಲ, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರಾಜ್ಯದ ಬಿಜೆಪಿ ನಾಯಕರು ಇತ್ತ ಜನಾಕ್ರೋಶ ಯಾತ್ರೆ ಎಂಬ ಬೀದಿ ನಾಟಕಕ್ಕೆ ಸಿದ್ಧಗೊಳ್ಳುವ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪೆಟ್ರೋಲ್, ಡೀಸೆಲ್‌ಮತ್ತು ಗ್ಯಾಸ್ ಬೆಲೆ ಹೆಚ್ಚಳ ಮಾಡಿ ತಪರಾಕಿ ಬಾರಿಸಿದ್ದಾರೆ.

ಒಂದು ವೇಳೆ ಈಗ ಬಿಜೆಪಿಯವರೇನಾದರೂ ಬೆಲೆಯೇರಿಕೆ ವಿಷಯ ಹಿಡಿದು ಜನರ ಮನೆಬಾಗಿಲಿಗೆ ಹೋದರೆ ಅವರ ಆಕ್ರೋಶಕ್ಕೆ ಗುರಿಯಾಗಿ ಪಾದಯಾತ್ರೆ ಅರ್ಧಕ್ಕೆ ಬಿಟ್ಟು ಓಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಫೂರ್ತಿ ಕನ್ನಡ ಕಲಾ ಟ್ರಸ್ಟ್ ವತಿಯಿಂದ 'ಕಣ್ಣು ತರೆಸಿದ ಹಣ್ಣು'ಕಾರ್ಯಕ್ರಮಹುಟ್ಟು ಹಬ್ಬಗಳನ್ನು ಸಮಾಜ ಮುಖಿ ಕಾರ್ಯಗಳೊಂದಿಗೆ ಆಚರಿಸಿ- ಮುನಿಕೃಷ್ಣಪ್ಪಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮಮುಂಗಾರು ಹಾನಿ ತಡೆಗೆ ಜಿಲ್ಲಾಡಳಿತ ಹೈ ಅಲರ್ಟ್; ಸಾರ್ವಜನಿಕರ ನೆರವಿಗಾಗಿ 5 ತುರ್ತು ಸ್ಪಂದನಾ ತಂಡಗಳ ರಚನೆಐಪಿಎಲ್ ಫೈನಲ್ ಸ್ಥಳಾಂತರ ವಿವಾದ: ಬೆಂಗಳೂರಿನ ಯುವಕರಿಗೆ ಅನ್ಯಾಯ ಎಂದ ಡಿ.ಕೆ ಶಿವಕುಮಾರ್ಭಾರಿ ಸಂಚಲನ ಸೃಷ್ಟಿಸಿದ ಜಮೀರ್ ಅವರ ಆಡಿಯೋಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ-ಜೈರಾಮ್ ರಮೇಶ್ನೂತನ ಸಿಎಂ ಶಿವಕುಮಾರ್-ನಿರ್ಗಮಿತ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿಕೇಸರಿ ಶಾಲು ಬೇಕೋ, ರಾಷ್ಟ್ರಧ್ವಜ ಬೇಕೋ ಆಮೇಲೆ ಚರ್ಚಿಸೋಣಹಿರಿಯೂರು ನಗರಸಭೆಯಲ್ಲಿ 'ಪಿಎಂ ಸ್ವನಿಧಿ' ಲೋಕ ಕಲ್ಯಾಣ ಮೇಳ: ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಅರ್ಜಿ ವಿತರಣೆ