ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಸಬಾ ಹೋಬಳಿ ಕೊಡಿಗೇಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ನಡೆದ "ಬಸವಣ್ಣ "ಮತ್ತು "ಆಂಜನೇಯ ಸ್ವಾಮಿ ದೇವರು ಗಳ."ಮೆರವಣಿಗೆ ಹಾಗೂ "ಬನ್ನೀ "ಆಚರಣೆಯನ್ನು ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಬನ್ನಿ ಉತ್ಸವದಲ್ಲಿ ಗ್ರಾಮದ ಹಿರಿಯರಾದ ಕೆ.ಎಂ. ಮುನಿರಾಮೇಗೌಡ, ಅರಸೇಗೌಡ, ಶಾಂತಕುಮಾರ್, ಟಿ.ಅಶ್ವಥ್, ಚನ್ನೇಗೌಡ ಸೇರಿದಂತೆ ಗ್ರಾಮದ ಎಲ್ಲರೂ ಸಡಗರ ಸಂಭ್ರಮ ದಿಂದ ಬಾಗವಹಿಸಿದ್ದರು.



