Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹಿರಿಯೂರಿನಲ್ಲಿ ವಿಜೃಂಭಣೆಯ ದಸರಾ ಅಂಬಿನೋತ್ಸವ: ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದ ಆಚರಣೆ

ಚಂದ್ರವಳ್ಳಿ ನ್ಯೂಸ್,  ಹಿರಿಯೂರು:
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಬನ್ನಿ ಮಂಟಪದ ಬಳಿ ಬುಧವಾರ ಸಂಜೆ ಭಕ್ತಾದಿಗಳ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ದಸರಾ ಹಬ್ಬದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ರಾಜಾ ದುರ್ಗಾಪರಮೇಶ್ವರಿ ದೇವಿ, ರೇವಣಸಿದ್ದೇಶ್ವರ ಸ್ವಾಮಿ, ಬನಶಂಕರಿ ದೇವಿ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಕಾಳಿಕಾಂಬ ದೇವಿ, ವೀರಭದ್ರ ಸ್ವಾಮಿ, ಗೌರಸಂದ್ರ ಮಾರಮ್ಮ, ಹುಲಿಗಮ್ಮ ಹಾಗೂ ಪೌದಿಯಮ್ಮ ಸೇರಿದಂತೆ ವಿವಿಧ ದೇವತೆಗಳ ಉತ್ಸವ ಮೂರ್ತಿಗಳನ್ನು ವಿವಿಧ ವಾದ್ಯಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬನ್ನಿ ಮಂಟಪಕ್ಕೆ ಕರೆತರಲಾಯಿತು.

ತಹಸೀಲ್ದಾರ್ ಎಂ. ಸಿದ್ದೇಶ್ ಅವರು ಸಾಂಪ್ರದಾಯಿಕ ಉಡುಗೆ ಧರಿಸಿ, ಅಲಂಕೃತ ಪಲ್ಲಕ್ಕಿಯಲ್ಲಿ ತರಲಾಗಿದ್ದ ಬಿಲ್ಲು-ಬಾಣಗಳನ್ನು ಹಿಡಿದು ಬಾಣ ಪ್ರಯೋಗಿಸುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು. ಬನ್ನಿ ಮರದಿಂದ ದೇವತೆಗಳನ್ನು ಪ್ರತಿಷ್ಠಾಪಿಸಿದ್ದ ಸ್ಥಳದವರೆಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಬಾಣ ಪ್ರಯೋಗ ನೆರವೇರಿತು.

ಅಂಬಿನೋತ್ಸವದ ನಂತರ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತಾದಿಗಳು ಬನ್ನಿ ಪತ್ರೆಯನ್ನು ಪರಸ್ಪರ ಹಂಚಿಕೊಂಡು ಪ್ರೀತಿ, ಸ್ನೇಹ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಈ ಸಮಾರಂಭದಲ್ಲಿ ಪೌರಾಯುಕ್ತರಾದ ಎ. ವಾಸೀಂ, ಬನ್ನಿ ಮಂಟಪ ಸಮಿತಿ ಅಧ್ಯಕ್ಷ ರಾಜಪ್ಪ, ಬಿಜೆಪಿ ಮುಖಂಡ ರಾಜಣ್ಣ, ಜೆಡಿಎಸ್ ಮುಖಂಡ ರವೀಂದ್ರಪ್ಪ, ಕಾಂಗ್ರೆಸ್ ಯುವ ಮುಖಂಡರಾದ ಸುಹಾಸ್ ಸುಧಾಕರ್, ನಾಗೇಂದ್ರ ನಾಯ್ಕ, ಪ್ರಮುಖರಾದ ಬೋಜಣ್ಣ, ಜಗದೀಶ್ ಬಂಡಾರಿ, ವೆಂಕಟೇಶ್, ಕಬ್ಬಡಿ ರವಿ, ಜ್ಞಾನೇಶ್, ಸತ್ಯನಾರಾಯಣಮೂರ್ತಿ, ಜಿ. ಎಲ್. ಮೂರ್ತಿ, ರಾಮಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳೆಯ ಸರಗಳವು ಮಾಡಲು ಯತ್ನಿಸಿದ ಆರೋಪಿ ಬಡಾವಣೆ ಪೊಲೀಸರ ಬಂಧನಕ್ಕೆಶಿವಾನಂದ ತಗಡೂರು ಅವರಿಗೆ ಸನ್ಮಾನ, ಮಡಿಕೇರಿ ದಸರಾಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ: ಶಿವಾನಂದ ತಗಡೂರುಕೊಡಿಗೇಹಳ್ಳಿ ಗ್ರಾಮದಲ್ಲಿ ಸಂಭ್ರಮದ ಬನ್ನಿ ಉತ್ಸವ ಆಚರಣೆರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥ ಸಂಚಲನಹಿರಿಯೂರಿನಲ್ಲಿ ವಿಜೃಂಭಣೆಯ ದಸರಾ ಅಂಬಿನೋತ್ಸವ: ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದ ಆಚರಣೆತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೀ ಮಧ್ವಾಚಾರ್ಯ ಜಯಂತಿ ಆಚರಣೆಭದ್ರಾ ಮೇಲ್ದಂಡೆ ಯೋಜನೆ: ಹಿರಿಯೂರು ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೆ ಮಹತ್ವದ ಹೆಜ್ಜೆSC/ST ಕುಂದುಕೊರತೆ ಸಭೆ - ಮಾದಕ ವಸ್ತು ತಡೆಗೆ ಕಟ್ಟುನಿಟ್ಟಿನ ಕ್ರಮದ ಭರವಸೆಜಂಭದ ಜಂಬೂಸವಾರಿಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ– ನ್ಯಾಯಾಧೀಶ ಹಡಪದ್