ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಜವಾಜಿ ರಾಜೇಶ್ ಮಾತನಾಡಿ ಭಾರತ ಸ್ವಾತಂತ್ರ್ಯ ನಂತರ ರಾಷ್ಟ್ರದ ಮೊಟ್ಟ ಮೊದಲ ಪ್ರಧಾನಿಯಾಗಿ ಪಂಡಿತ್ ಜವಾಹರ್ ಲಾಲ್ ನೆಹರು ರವರು ರಾಷ್ಟ್ರದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಭಿವೃದ್ಧಿಯಿಂದ ವಂಚಿತವಾಗಿದ್ದ ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಅಪಾರ ಶ್ರಮ ವಹಿಸಿದ್ದರೆಂಬುದು ಜನಜನಿತ. ಬಹು ಮುಖ್ಯವಾಗಿ ನೆಹರು ರವರಿಗೆ ಮಕ್ಕಳೆಂದರೆ ಅತೀವ ವಾದ ಪ್ರೀತಿ. ಮಕ್ಕಳು ಸಹಾ ನೆಹರು ರವರನ್ನು ಚಾಚಾ ಎಂದು ಕರೆಯುತ್ತಿದ್ದರು.
ಹಾಗಾಗಿ ನೆಹರು ಜಯಂತಿಯಂದು ರಾಷ್ಟ್ರಡೆಲ್ಲೆಡೆ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಎಸ್ ಸಿ ಎಸ್ ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ನಿಗಮ ಮಂಡಳಿ ನೂತನ ನಿರ್ದೇಶಕರಾಗಿ ನೇಮಕ ಗೊಂಡ ರೇವತಿ ಅನಂತರಾಮ್, ತಾಲೂಕು ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ರೆಡ್ಡಿ ಮಹಿಳಾ ಕಾಂಗ್ರೆಸ್ನ ಮಮತ ಮಹಿಳಾ ಮುಖಂಡರಾದ ನಾಗರತ್ನಮ್ಮ ಮಮತ ಮುಂತಾದವರು ಹಾಜರಿದ್ದರು.




