ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮದೆಹಳ್ಳಿ ರಸ್ತೆ, ಚಿತ್ರದುರ್ಗದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮಾಲೆ ಧರಿಸಿದ ಅಯ್ಯಪ್ಪಸ್ವಾಮಿಗಳಿಗಾಗಿ ವಿಶೇಷ ಧಾರ್ಮಿಕ ಹಾಗೂ ಅನ್ನಪ್ರಸಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 16-11-2026 ರಿಂದ 13-01-2027 ರವರೆಗೆ ಪ್ರತಿದಿನ ಅನ್ನಪ್ರಸಾದ ಕಾರ್ಯಕ್ರಮವು ಜರುಗಲಿದೆ. ಪ್ರತಿದಿನ ಮಧ್ಯಾಹ್ನ 1:00 ಗಂಟೆಯಿಂದ 3:00 ರವರೆಗೆ ಹಾಗೂ ರಾತ್ರಿ 8:00 ಗಂಟೆಯಿಂದ 10:00 ರವರೆಗೆ ಅನ್ನಪ್ರಸಾದದ ಸಮಯ ನಿಗದಿಪಡಿಸಲಾಗಿದೆ.
ನವೆಂಬರ್ 16ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಶ್ರೀ ಮಹಾಗಣಪತಿ ಹೋಮ ಹಾಗೂ ನವಗ್ರಹ ಪುರಸ್ಸರ ಶ್ರೀ ರುದ್ರಹೋಮ, ಮಧ್ಯಾಹ್ನ 12:30 ಗಂಟೆಗೆ: ಪೂರ್ಣಾಹುತಿ, ಮಧ್ಯಾಹ್ನ 12:45 ಗಂಟೆಗೆ ಅನ್ನಪ್ರಸಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.
ಬಿಜೆಪಿ ಮುಖಂಡ ಬಿ.ಪಿ. ಹನುಮಂತೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಕಲ ಭಕ್ತಾದಿಗಳು ಮೇಲ್ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಟ್ರಸ್ಟ್ ವತಿಯಿಂದ ವಿನಂತಿಸಿಕೊಳ್ಳಲಾಗಿದೆ.




