Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕ ಆರ್ಟ್ಸ್ ಫೌಂಡೇಷನ್ ವತಿಯಿಂದ ಚಿತ್ರಕಲಾವಿದರ ಕಾಫಿ ಕೂಟ ಯಶಸ್ವಿ ಚರ್ಚೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಆರ್ಟ್ಸ್ ಫೌಂಡೇಷನ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಕಲಾ ಕೃತಿ ರಚನೆ ಮತ್ತು ಕಲಾವಿದನ ಬಗ್ಗೆ ಕಾಫಿ ಕೂಟದ ಚರ್ಚೆಯನ್ನು
ನಗರದ ಕೆಂಗೇರಿ ಹೋಬಳಿಯ ಭೀಮ ಆರ್ಟ್ ಗ್ಯಾಲರಿ, ಕೆಎಚ್ ಬಿ ಕಾಲೋನಿ, ನೇತಾಜಿ ಬಡಾವಣೆಯಲ್ಲಿ ನಡೆಯಿತು. 

ಇದರ ಅಂಗವಾಗಿ ರಾಜ್ಯದ ಖ್ಯಾತ ಚಿತ್ರಕಲಾವಿದರು ಹಾಗೂ ಸಮಾಜ ಸೇವಕರು, ಬಹುಮುಖ್ಯ ಪ್ರತಿಭೆ, ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯರಾದ ಶ್ರೀ ಆತ್ಮಾನಂದ ಅವರ ಇತ್ತೀಚಿಗೆ ಹಮ್ಮಿಕೊಂಡಿದ್ದ ನಗರದಲ್ಲಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಅತ್ಯಂತ ವಿಶಿಷ್ಟವಾದ ಚಿತ್ರಕಲಾ ಪ್ರದರ್ಶನವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ ಬಗ್ಗೆ ವಿಸ್ತೃತವಾಗಿ ಚರ್ಚಿಸುವ ಮೂಲಕ ಮುಂಬರುವ ದಿನಗಳಲ್ಲಿ ಚಿತ್ರಕಲಾವಿದರ ಹಲವಾರು ರೀತಿಯ ಸಮಸ್ಯೆಗಳು, ಸೌಲಭ್ಯಗಳು, ಕಾನೂನಾತ್ಮಕ ಮತ್ತಿತರರ ಎಲ್ಲಾ ಅಂಶಗಳನ್ನು ಸರ್ಕಾರಗಳು ಪರಿಗಣಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರಿಗೆ ತಿಳಿಸಲಾಯಿತು.

Advertisement

ಈ ಸಮಯದಲ್ಲಿ ಎಲ್ಲಾ ಗಣ್ಯ ಅತಿಥಿಗಳು ಹಾಗೂ ಕಲಾವಿದರು, ಕರ್ನಾಟಕ ಆರ್ಟ್ಸ್ ಫೌಂಡೇಷನ್ ಪದಾಧಿಕಾರಿಗಳು ಇನ್ನಿತರರು ಸೇರಿ ನಾಡು ಕಂಡ ಶೇಷ್ಠ ಚಿತ್ರಕಲಾವಿದ ಕೆ.ಬಿ. ಶಿವಪ್ರಸಾದ್ ರವರಿಗೆ ಕಲಾ ನಮನ ಸಲ್ಲಿಸಲಾಯಿತು.

ಇದೇ ವೇಳೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು, ಯಶವಂತಪುರ ವಿಧಾನಸಭಾ ಅಧ್ಯಕ್ಷ ಸುದೀಂದ್ರ ಕುಮಾರ್, ಸಂಸ್ಕಾರ ಭಾರತಿ, ಕರ್ನಾಟಕ ದಕ್ಷಿಣ ವಿಭಾಗ ಪ್ರಮುಖರು ರಾಮಸಂದ್ರ, ಕಲಾವಿದರಾದ ಕೆ.ಎಲ್. ಲಿಂಗದೇವರು, ಎಲ್. ಗೌತಮ್, ಅಶೋಕ್ ಕುಮಾರ್, ಆತ್ಮಾನಂದ ಎಚ್.ಎ, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ, ರಂಗಕರ್ಮಿ ಮಲ್ಲಿಕಾರ್ಜುನ್ ಮಹಾಮನೆ, ಬೆಂವಿವಿಯ ನೌಕರ ಗೌರಿಶಂಕರ್, ಸಾಹಿತಿ ಎ.ಪಿ. ಕುಮಾರ್ ಕೆಂಗೇರಿ ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗೌತಮ್ ಎಸ್, ಖಜಾಂಚಿ ದೀಪಕ್ ಎಚ್.ಎ, ಸದಸ್ಯ ಶಿವಣ್ಣ, ಅರುಣ್ ಕುಮಾ‌ರ್, ಸಂಶೋಧಕರು ಹಾಗೂ ಪತ್ರಕರ್ತ ಡಾ. ಈಶ್ವರ್ ಸಿರಿಗೇರಿ, ಕಲಾವಿದರು ಸೇರಿದಂತೆ ಅಭಿಮಾನಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ