ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಶಾಸಕರಿಗೆ ಅನುದಾನ ಬೇಕಾದರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬಳಿ ತಗ್ಗಿ-ಬಗ್ಗಿ ನಡೆಯಬೇಕು. ಇನ್ನುಳಿದ ಜಿಲ್ಲೆಗಳ ಶಾಸಕರಿಗೆ ಅನುದಾನ ಬೇಕಾದರೆ ಸಿಎಂ ಸಿದ್ದರಾಮಯ್ಯ ಅವರ ಕಾಲು ಹಿಡಿದುಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
135 ಸೀಟು ಗೆಲ್ಲಿಸಿ ಅಧಿಕಾರ ಕೊಟ್ಟ ಕರ್ನಾಟಕದ ಮತದಾದರಿಗೆ ಇದೇನಾ ಕರ್ನಾಟಕ ಕಾಂಗ್ರೆಸ್ ಪಕ್ಷ ಕೊಡುವ ಮರ್ಯಾದೆ?
ಅಧಿಕಾರದ ಮದದಿಂದ ಈ ರೀತಿ ದುರಹಂಕಾರ ಮೆರೆದ ಮೊಘಲರು, ಸುಲ್ತಾನರು, ನವಾಬರು, ನಿಜಾಮರು ಇತಿಹಾಸದಲ್ಲಿ ಅಡ್ರೆಸ್ ಇಲ್ಲದೆ ಕಣ್ಮರೆ ಆಗಿದ್ದಾರೆ. ಕನ್ನಡಿಗರು ಕೂಡ ಕರ್ನಾಟಕವನ್ನ ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದು ವಿಪಕ್ಷ ನಾಯಕ ಅಶೋಕ್ ಎಚ್ಚರಿಸಿದ್ದಾರೆ.


