Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ರಾಜ್ಯಾದ್ಯಂತ 247 ಫ್ರ್ಯಾಂಚೈಸಿಗೆ  ಅರ್ಜಿ ಆಹ್ವಾನ

Advertisement
ಚಂದ್ರವಳ್ಳಿ ನ್ಯೂಸ್, ಮಂಗಳೂರು:
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ  ಕಾರ್ಯಕ್ಷೇತ್ರವನ್ನು  ರಾಜ್ಯಾದ್ಯಂತ ವಿಸ್ತರಿಸುವ ಭಾಗವಾಗಿ  247  ಫ್ರ್ಯಾಂಚೈಸಿಗಳನ್ನು ನೀಡಲು ತೀರ್ಮಾನಿಸಿದೆ. ಮೂಲಕ  ಉದ್ಯಮಶೀಲರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸ್ವ-ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ.

247  ಫ್ರ್ಯಾಂಚೈಸಿಗಳು ಸೇರಿದಂತೆ, ರಾಜ್ಯದ ಪ್ರತಿ ತಾಲೂಕಿನಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಸಂಸ್ಥೆ ಯೋಜಿಸಿದೆ. ಕೇಂದ್ರಗಳ ಮೂಲಕ ತೆಂಗಿನ ಐಸ್ಕ್ರೀಮ್, ತೆಂಗಿನ ಹಾಲಿನ ಜ್ಯೂಸ್, ತೆಂಗಿನ ಎಣ್ಣೆ, ಗೊಬ್ಬರಗಳು, ಟರ್ಪಾಲಿನ್ ಉತ್ಪನ್ನಗಳು, ಪೀಠೋಪಕರಣಗಳು ಸೇರಿದಂತೆ 32ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು  24 ವಿವಿಧ ತಳಿಯ ತೆಂಗಿನ ಸಸಿಗಳು ಕೇಂದ್ರದಲ್ಲಿ ದೊರೆಯಲಿವೆ.

ಫ್ರ್ಯಾಂಚೈಸಿ ಪಡೆಯಲು ಆಸಕ್ತರು ಸಂಸ್ಥೆಯ ವೆಬ್ಸೈಟ್  (w ww.coconutfarmers.in) ಮೂಲಕ ಆನ್ಲೈನ್  ಅರ್ಜಿಯನ್ನು ಸಲ್ಲಿಸಬಹುದು  ಅಥವಾ ಸಂಸ್ಥೆಯಿಂದ ಅರ್ಜಿಯನ್ನು ಪಡೆದು , ಭರ್ತಿ ಮಾಡಿ  ಕೆವೈಸಿ  ಜೊತೆಗೆ  65,000 ರೂ .ಗಳ  DD /CHEQUE / ಬ್ಯಾಂಕ್ ವರ್ಗಾವಣೆ ದಾಖಲೆ ಲಗತ್ತಿಸಿ , ಸಂಸ್ಥೆಯ ಪ್ರಾದೇಶಿಕ ಕಛೇರಿಗೆ ಕಳುಹಿಸತಕ್ಕದ್ದು. ಆಯ್ಕೆಯಾದ ಫ್ರ್ಯಾಂಚೈಸಿಗಳಿಗೆ ಉತ್ಪನ್ನಗಳ ಬಗ್ಗೆ ಮಾಹಿತಿ, ತರಬೇತಿ, ಮತ್ತು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು.

ರೈತರಿಂದಲೇ ಸ್ಥಾಪಿತವಾದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ರೈತರಿಂದ ತೆಂಗಿನಕಾಯಿಗಳನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸುವುದಲ್ಲದೇ , ತೆಂಗಿನ ಎಲ್ಲಾ ಭಾಗಗಳನ್ನು ಮೌಲ್ಯವರ್ಧಿಸಿ, ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ.

ಪ್ರತಿಷ್ಠಿತ CPCRI (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ಅನುಮೋದಿತ ತಂತ್ರಜ್ಞಾನ ಬಳಸಿಕೊಂಡು ಸಂಸ್ಥೆಯು ತೆಂಗು ಕೃಷಿಯ ಪ್ರಯೋಜನವನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಮೂಲಕ ದೇಶದಲ್ಲೇ ಮಾದರಿಯಾಗಬಲ್ಲ ರೈತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಪರ್ಕ ಮಾಹಿತಿಗಾಗಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ, ಸೂರ್ಯ ನಾರಾಯಣ ದೇವಸ್ಥಾನದ ಹತ್ತಿರ, ಮರೋಳಿ, ಮಂಗಳೂರು- 575005, ದೂರವಾಣಿ: 8105487763, ಟೋಲ್ ಫ್ರೀ: 1800-203-0129, ಇಮೇಲ್: [email protected] ವೆಬ್ಸೈಟ್: www.coconutfarmers.in ಇವರನ್ನು ಸಂಪರ್ಕಿಸಬಹುದಾಗಿದೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ