ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಈ ಕೆಳಗಿನ ಕರ್ನಾಟಕ ಕಾಂಗ್ರೆಸ್ ಸರ್ಕಾರದಗ್ಯಾಂಗ್‌ಅನ್ನು ಸಂಪರ್ಕಿಸಿ ಎಂದು ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಧಮ್ಕಿಗೆ - ಡಿಕೆ ಶಿವಕುಮಾರ್, ಕೊಲೆಗೆ - ವಿನಯ್‌ಕುಲಕರ್ಣಿ, ಆತ್ಮಹತ್ಯೆಗೆ ಸುಪಾರಿ - ಪ್ರಿಯಾಂಕ್‌ಖರ್ಗೆ, ಶಾಸಕರ ಕೊಲೆಗೆ - ಲಕ್ಷ್ಮಿ ಹೆಬ್ಬಾಳ್ಕರ್, ರೈತರು, ಅಧಿಕಾರಿಗಳ ಹತ್ಯೆಗೆ – ಸಿದ್ದರಾಮಯ್ಯ, ಆಸ್ಪತ್ರೆಗಳಲ್ಲಿ ಕೊಲೆಗೆ - ದಿನೇಶ್‌ಗುಂಡೂರಾವ್,
ದಲಿತರ ಮೇಲಿನ ಹಲ್ಲೆಗೆ - ಹಿರಿಯೂರು ಡಿ. ಸುಧಾಕರ್, ಪೊಲೀಸರ ಮೇಲೆ ಹಲ್ಲೆಗೆ - ವಿಜಯಾನಂದ ಕಾಶಪ್ಪನವರ್, ಅವಾಚ್ಯ ಶಬ್ಧ ಬಳಸಿ ಬೈಯಲು - ಅರಸೀಕೆರೆ ಶಿವಲಿಂಗೇಗೌಡ.
ಅವಶ್ಯಕತೆ ಇರುವವರು ಸಂಪರ್ಕಿಸಬೇಕಾದ ವಿಳಾಸ ಕ್ವೀನ್ಸ್‌ರಸ್ತೆ ಕೆಪಿಸಿಸಿ ಕಚೇರಿ ಎಂದು ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.


