Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳೆ ವಿದ್ಯಾರ್ಥಿಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿಯೊಬ್ಬ ಶಾಲಾವಿದ್ಯಾರ್ಥಿಯೂ ತನಗೆ ವಿದ್ಯಾದಾನ ಮಾಡಿದ ಶಿಕ್ಷಕರು ಹಾಗೂ ಶಾಲೆಯನ್ನು ಸದಾಪೂಜ್ಯತಾ ಭಾವದಿಂದ ಕಾಣಬೇಕು. ಕಾರಣ
, ಅವರ ಭವಿಷ್ಯದ ಬದುಕಿಗೆ ಭದ್ರಬುನಾದಿ ಒದಗಿಸುವುದೇ ಶಿಕ್ಷಣ, ಶಿಕ್ಷಕ ಮತ್ತು ಶಾಲೆ. ಇಂದಿಗೂ ಸಹ ಅನೇಕ ವಿದ್ಯಾರ್ಥಿಗಳು ತಾವುಕಲಿತ ಶಾಲೆಗೆ ಕೊಡುಗೆ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ ಇಂತಹವರ ಸಂಖ್ಯೆ ಹೆಚ್ಚಬೇಕು. ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲು ಮುಂದಾಗಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.

ಅವರು, ಮಂಗಳವಾರ ನಗರದ ಬಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೯೮ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸುಮಾರು ೨.೫೦ ಲಕ್ಷ ಮೌಲ್ಯದ ಶುದ್ದಕುಡಿಯುವ ನೀರಿನ ಘಟಕವನ್ನು  ನಿರ್ಮಿಸಿದ್ದು ಅದನ್ನು ಉದ್ಘಾಟಿಸಿಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಋಣವನ್ನು ತೀರಿಸುವಲ್ಲಿ ಮುಂದಾಗಿದ್ಧಾರೆ. ೨೮ ವರ್ಷಗಳ ನಂತರ ಶಾಲೆಗೆ ಕೊಡುಗೆ ನೀಡಿದ್ಧಾರೆ. ಶಾಲೆ ಮತ್ತು ಶಿಕ್ಷಕ ಬಗ್ಗೆ ಅವರಲ್ಲಿರುವ ಶ್ರದ್ದೆ, ವಿನಯ ಮತ್ತು ಗೌರವವನ್ನು ನಾನು ಪ್ರಶಂಸುತ್ತೇನೆಂದರು.

ಶಾಲೆಯ ಶಿಕ್ಷಕರ ಪರವಾಗಿ ಮಾತನಾಡಿದ ನಿವೃತ್ತ ಬಿಇಒ ಪಿ.ರಾಮಯ್ಯ, ನಾನು ಇದೇ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿದೆ.ಇದೇ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ವಿಶೇಷವೆಂದರೆ ಸುಮಾರು ೭೫ವರ್ಷಗಳ ಇತಿಹಾಸದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿಯಾಡಿದೆ. ೧೯೯೮ನೇ ಸಾಲಿನ ವಿದ್ಯಾರ್ಥಿಗಳು ಸಹ ಶಾಲೆಗೆಕುಡಿಯುವ ನೀರಿನ ಘಟಕ ನೀಡಿ ತಮ್ಮ ಔದಾರ್ಯತೆ ಪ್ರದರ್ಶಿಸಿದ್ಧಾರೆ. ಶಿಕ್ಷಕರನ್ನು ಸಹ ಸನ್ಮಾನಿಸಿದ್ದಾರೆ, ಗುರುಶಿಷ್ಯರ ಬಾಂಧ್ಯವಕ್ಕೆ ಮೆರಗುನೀಡಿದ್ಧಾರೆಂದರು.

ನಿವೃತ್ತ ಶಿಕ್ಷಕರಾದ ಬಿ.ರೇಣುಕದೇವಿ, ಬಿ.ಎಂ.ಮಂಜುನಾಥ, ಜಿ.ಬಸವರಾಜು, ಶಾಲೆ ಮುಖ್ಯಶಿಕ್ಷಕ ಮಂಜುನಾಥ, ಹಳೇವಿದ್ಯಾರ್ಥಿಗಳಾದ ಚಂದ್ರು, ಬಸವರಾಜು, ಮೊಹಬೂಬ್, ದೇವರಾಜ್, ಪ್ರಶಾಂತ್‌ನಾಯಕ, ನವೀನ್, ಅಭಿಷೇಕ್, ಸಂತೋಷ್, ಕಾವ್ಯ, ಜಿ.ಟಿ.ಮಮತಯಾದವ್, ವಿನುತ, ರಾಧಿಕ, ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ