LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ 5 ರಂದು ಡಿ. ಬನುಮಯ್ಯನವರ ಜಯಂತಿ: ಬೀರೇನಹಳ್ಳಿ ಗ್ರಾಮದಲ್ಲಿ ಪೂರ್ವಭಾವಿ ಸಭೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮುಂಬರುವ ಜುಲೈ-5ರಂದು ಭಾನುವಾರ ಶ್ರೀ ಡಿ. ಬನುಮಯ್ಯನವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ಬೀರೇನಹಳ್ಳಿ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಘವು ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷರಾದ ಪ್ರೊ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಜಿ ಹನುಮಂತರಾಯಪ್ಪ ಇವರು ತಿಳಿಸಿದ್ದಾರೆ.

​ಈ ಕಾರ್ಯಕ್ರಮದ ಯಶಸ್ಸಿಗೆ ಸಂಬಂಧಿಸಿದಂತೆ, ಬೀರೇನಹಳ್ಳಿ ಗ್ರಾಮದ ಪ್ರಮುಖ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

​​ಈ ಪೂರ್ವಭಾವಿ ಸಭೆಯಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.

​ ಸಂಘದ ಅಧ್ಯಕ್ಷ ಪ್ರೊ.ಮೈಸೂರು ಶಿವಣ್ಣ, ​ಪ್ರಧಾನ ಕಾರ್ಯದರ್ಶಿ ಕೆ.ಜಿ. ಹನುಮಂತರಾಯ, ​ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ತಿಪ್ಪೇಸ್ವಾಮಿ, ವಿಜಯ ಕುಮಾರ್, ಜನಾರ್ಧನ, ಕುಮಾರ್, ನಿವೃತ್ತ ಶಿಕ್ಷಕ ಪುಟ್ಟರಂಗಪ್ಪ, ಪೂಜಾರ್ ಲಿಂಗಪ್ಪ, ಓ. ತಿಪ್ಪೇಸ್ವಾಮಿ, ರಂಗಸ್ವಾಮಿ, ಬಿ.ಆರ್. ಮಹೇಶ್ ಸೇರಿದಂತೆ ಗ್ರಾಮದ ಹಲವು ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಸಂಕಲ್ಪ ಮಾಡಿದರು.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಗಳ ಉಳಿವಿಗೆ ಜಾಗೃತಿ ಅಗತ್ಯ: ಕೆಜಿ ಹನುಮಂತರಾಯ‘ನಾನು ಸಚಿವನಾಗಿರುವುದು ಶ್ರೀರಾಮುಲುಗೆ ಸಹಿಸಲು ಆಗುತ್ತಿಲ್ಲ’: ಬಿ. ನಾಗೇಂದ್ರ‘ವಂದೇ ಮಾತರಂ’ ಗೀತೆ ಆಕ್ಷೇಪ ವಿವಾದ: ಬಿಜೆಪಿ ಆರೋಪಕ್ಕೆ ಸೋನಿಯಾ ಗಾಂಧಿ ಪರವಾಗಿ ಕಾಂಗ್ರೆಸ್ ಸ್ಪಷ್ಟನೆ!ಭದ್ರಾ ನೀರಿಗಾಗಿ ಆ.18ಕ್ಕೆ ಸಿಎಂ ಜೊತೆ ಸಭೆ: ರೈತರಿಂದ ಹೆದ್ದಾರಿ ತಡೆ ಹಿಂಪಡೆತ!ವರ್ಷದೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ ಘೋಷಣೆ!‘RSS ನೋಂದಣಿಯೂ ಇಲ್ಲ, ಆಗೋದೂ ಇಲ್ಲ’: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು!ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್2047ರ ‘ವಿಕಸಿತ ಭಾರತ’ಕ್ಕಾಗಿ ದೊಡ್ಡ ಕನಸು ಕಾಣಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ!80ನೇ ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಪ್ರಧಾನಿ ಮೋದಿ ನೀಡಿದ ಸಂದೇಶಗಳಿವು!ಪೆಟ್ರೋಲ್, ಡೀಸೆಲ್ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಕೇಂದ್ರ!