Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಜಾಪ್ರಭುತ್ವದ ಕನಸುಗಳು ಸಾಯುತ್ತಿವೆ : ನಾಗತಿಹಳ್ಳಿ ರಮೇಶ್

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ "ಬುದ್ಧ  ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ- 2025"  ಸಮಾರಂಭದಲ್ಲಿ  "ಬುದ್ಧ  ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ- 2025"  ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿದ ನಾಗತಿಹಳ್ಳಿ ರಮೇಶ್  ರವರು ಸಭೆ ಉದ್ದೇಶಿಸಿ ಮಾತಾನಾಡಿ,

ಕರ್ನಾಟಕದ ರಾಜಕರಣದಲ್ಲಿದ್ದ  ಧೀಮಂತ ನಾಯಕರ ನಡೆನುಡಿಗಳ ಮರೆತ ಇಂದಿನ ಬಂಡವಾಳಶಾಹಿ ರಾಜಕಾರಣಿಗಳು ವಂಶಾವಳಿ ರಾಜಕಾರಣವನ್ನು ಮುನ್ನೆಲೆಗೆ ತಂದುಸ್ವಾರ್ಥದಲ್ಲಿ ಆಸ್ತಿ ಹಣ ಮಾಡುವುದರಲ್ಲಿ ಮುಳುಗಿ ಹೋಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.


ಅಂತಹ ಬಂಡವಾಳಶಾಹಿಗಳಿಗೆ ಕರ್ನಾಟಕ ಮತ್ತು ದಿಲ್ಲಿ ಸೇರಿದಂತೆ ಪಕ್ಷದ ಅಧ್ಯಕ್ಷಗಿರಿಯು ಕೊಟ್ಟಿರುವುದು ಏನನ್ನು ಸೂಚಿಸುತ್ತದೆ. ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಜಾಪ್ರಭುತ್ವದ ಆದರ್ಶದ ಕನಸುಗಳು ಸಾಯುತ್ತಿವೆ. ಕೆ.ಎಚ್.  ರಂಗನಾಥರವರು, ನಜೀರ್ ಸಾಬ್, ಲಕ್ಷ್ಮಿಸಾಗರ್, ಶಾಂತವೇರಿ ಗೋಪಾಲಗೌಡ ರಂತಹ ಆದರ್ಶ ರಾಜಕಾರಣಿಗಳು ಇಂದು ಯಾಕಿಲ್ಲ? ನಾನು ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು  ಒಬ್ಬ ಕರ್ತವ್ಯನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು  ಸಮಾಜವ್ಯಾದಿಯಾಗಿದ್ದಾರೆ ಎಂದು ತರಾಟೆ ತೆಗೆದುಕೊಂಡರು.


ಇಂದು ಬರೀ ಜಾತಿ ರಾಜಕಾರಣ ಮತ್ತು  ವ್ಯಕ್ತಿ ಪೂಜೆಯ ಗುಂಪುಗಾರಿಕೆ ರಾಜಕಾರಣ ಮುನ್ನೆಲೆಗೆ ಬಂದುಮೇಲ್ಜಾತಿ ರಾಜಕಾರಣಿಗಳು ದಲಿತ ಮತ್ತು ಹಿಂದುಳಿದವರ ಹೆಸರೇಳಿಕೊಂಡು ಮತ್ತು  ತಮ್ಮದೇ ಜಾತಿಯ  ತುಳಿತಕ್ಕೊಳಗಾದ ನಿರಾಶ್ರೀತರ ದಲಿತರ ಹೆಸರೇಳಿಕೊಂಡು  ತಾವು ಭದ್ರವಾದರೆ ಹೊರೆತು ತಮಗೆ ಸಹಾಯವಾಗಬಹುದೆಂದು ನಂಬಿ  ಕಾಯುತ್ತಲೇ ಕುಣಿತವರು ಅವರಲ್ಲೇ ಕುಳಿತಿದ್ದಾರೆ. ಊರುಕೇರಿಗಳೊಳಗೆ.

ಸಮಾಜದ ಕೊನೆಯ ಪೈರಿಗೆ ನೀರುಣಿಸುವ  ಕಾರ್ಯಕ್ರಮಗಳು ಕಮ್ಮಿಯಾಗಿ  ರಾಜಕಾರಣಿಗಳ ಹಿಂಬಾಲಕರು ಕಾಸು ಮಾಡುತ್ತಿದ್ದಾರೆ. ದೇಶದ ಬೆನ್ನೆಲುಬಾದ ರೈತ  ತಾವು ಬೆಳೆದ ಬೆಳೆಗಳಿಗೆ  ಒಂದು ನಿಶ್ಚಿತ ಬೆಲೆ ಇಲ್ಲದೆ ದಿನವೂ ಆತ್ಮಹತ್ಯೆ ಹಾದಿ ಹಿಡಿಯತ್ತಿದ್ದಾರೆ.  ನಾನು ಒಬ್ಬ  ಕೃಷಿಕನಾಗಿ ಇಂದು ಕೃಷಿಯಲ್ಲಿ ಜೂಜಾಡುತ್ತಿದ್ದೇನೆ.  ಈ ದೇಶದ ಕೊಳೆ ತೊಳೆವ ಪೌರಕಾರ್ಮಿಕರನ್ನು  ಸಾಮಾಜಿಕ  ಗೌರವ, ಸಮಾನತೆಯಲ್ಲಿ  ಕಾಣದೆ  ಅವರ ಬದುಕು  ಆರ್ಥಿಕವಾಗಿ ಮತ್ತು ಮಾನಸಿಕವಾಗಿ  ಕುಸಿಯುತ್ತಿದೆ.  ಯಾವಾಗ ರಾಜಕಾರಣದಲ್ಲಿ ಆದರ್ಶ ಮಾನವೀಯತೆ ಕಾಣೆಯಾಗುವವೊ   ಆಗ ರಾಜಕಾರಣ ಒಂದು  ಹಣ ಮಾಡುವ ದಂಧೆ ಆಗಿಬಿಡುತ್ತದೆ ಎಂದು ಹೇಳಿದರು.

ಸಚಿವ ಡಿ. ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ ಎಚ್ ರಂಗನಾಥ್ ಅವರ ಧೀಮಂತ ವ್ಯಕ್ತಿತ್ವ, ಅವರೊಂದಿಗೆ ಒಡನಾಡಿನ ದಿನಗಳನ್ನು, ನಾಗತಿಹಳ್ಳಿ ರಮೇಶ್ ರವರ  ಘನಸಾರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು.
ಮಾಜಿ ಸಚಿವೆ ಮೋಟಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ
, ಇಂದಿರಾ ಗಾಂಧಿಯವರು ನನ್ನಂತಹ ಬಡವಳ ಮದುವೆಗೆ   ಇಂದಿರಾ ಗಾಂಧಿಯವರು ಬಂದ ನೆನಪುಗಳನ್ನುಇಂದಿರಾ ಗಾಂಧಿಯವರ ಸರಳತೆಯನ್ನು ಕುರಿತು ಮಾತನಾಡಿದರು.

 ವಿಶೇಷವೆಂದರೆ, ಕರ್ನಾಟಕ ಸರ್ಕಾರದ ಹಾಲಿ ಸಚಿವರ ಎದಿರು ಎದೆಗಾರಿಕೆಯಿಂದ ನಾಗತಿಹಳ್ಳಿ ರಮೇಶ್ ರವರು ಸತ್ಯವನ್ನು ಕಾಣಿಸುವ ಭಾಷಣ ಶೈಲಿ ಸಭೆಯಲ್ಲಿ ನೆರೆದವರು ಸೇರಿದಂತೆ, ಹಾಲಿ ಸಚಿವರಾದ ಡಿ. ಸುಧಾಕರ್ಮಾಜಿ ಸಚಿವೆ ಮೋಟಮ್ಮನವರು  ಕಣ್ಣರಳಿಸಿ ನಾಗತಿಹಳ್ಳಿ ರಮೇಶ್ ರವರ ಇಡೀ ಭಾಷಣವನ್ನು  ತದೇಕಚಿತ್ತವಾಗಿ ಕೇಳುತ್ತಾ ಕುಳಿತ್ತಿದ್ದರು.  

 ಕಾರ್ಯಕ್ರಮದ ಭಾಗವಾಗಿ ನರಸಿಂಮೂರ್ತಿ ಬ್ಯಾಲೆನಹಳ್ಳಿ ದಂಪತಿಗಳ 25 ವರುಷದ ದಾಂಪತ್ಯ ಜೀವನದ ಸಂಭ್ರಮ ಆಚರಿಸಿಕೊಳ್ಳಲಾಯಿತು ಮತ್ತು  25 ಸಾಧಕರಿಗೆ 'ಜೀವನಾಡಿ ಪ್ರಶಸ್ತಿ' ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ  'ಪ್ರತಿಭಾ ಪುರಸ್ಕಾರ ' ನೀಡಿ ಗೌರವಿಸಲಾಯಿತು.

 ಮುಖ್ಯ ಅತಿಥಿಗಳಾಗಿ ಎಸ್. ವಿಜಯ ಕುಮಾರ್, ಎಂ ರೇವಣ ಸಿದ್ದಪ್ಪ, ಡಿ. ಹನುಮಂತರಾಯ, ಸರ್ಕಾರದ ವಿಶ್ರಾಂತ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ಕೆ ಹೆಚ್ ರಂಗನಾಥ್ ಅವರ ಆಪ್ತ ಕಾರ್ಯದರ್ಶಿ ಎನ್. ನರಸಿಂಹ ಮೂರ್ತಿ, ಕೆ ಹೆಚ್ ರಂಗನಾಥ್ ರವರ ದ್ವಿತೀಯ ಪುತ್ರಿ ಹೆಚ್ ಆರ್ ಗೋದಾವರಿ ಇದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ