LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ ಉಡುಪು ವಿತರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪುಟಾಣಿ ಮಕ್ಕಳೇ ದೇಶದ ಆಸ್ತಿ, ಉತ್ತಮ ಸಮಾಜದ ನಿರ್ಮಾಣ ವಿದ್ಯಾವಂತ ಮಕ್ಕಳಿಂದ ಮಾತ್ರ ಸಾಧ್ಯ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ಮುಂದೆಯೂ ಸಹ ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಕಲಿಕೆಗೆ ಅಗತ್ಯ ಸಹಾಯವನ್ನು ಮಾಡಲು ಸಿದ್ದರಿದ್ದೇವೆ ಎಂದು ಅನ್ವಿತ್ ಎಂಟರ್ಪ್ರೈಸಸ್ ನ ಮಾಲೀಕರು ಹಾಗೂ ರಾಜಘಟ್ಟ ಗ್ರಾಮ ಪಂಚಾಯತಿ ಸದಸ್ಯ ಎ ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ರಾಜಘಟ್ಟ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅನ್ವಿತ್ ಎಂಟರ್ಪ್ರೈಸಸ್ ನ ಮಾಲೀಕರು ಹಾಗೂ ರಾಜಘಟ್ಟ ಗ್ರಾಮ ಪಂಚಾಯತಿ ಸದಸ್ಯ ಎ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತರಬೇತಿ ಉಡುಪು (track suit) ವಿತರಣೆ ಮಾಡಲಾಯಿತು.ರಾಜಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ದೇಶದ ಇತಿಹಾಸ ತಿಳಿಯುವುದು ಅಗತ್ಯ ಜೊತೆಗೆ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುವುದರ ಮಹತ್ವ ತಿಳಿಯುವುದು ಅನಿವಾರ್ಯವಾಗಿದೆ. ಬ್ರಿಟಿಷರಿಂದ ನಮಗೆ ಸುಲಭವಾಗಿ ಸ್ವಾತಂತ್ರ್ಯ ದೊರೆತಿಲ್ಲ ನಾವು  ಈ ದಿನವನ್ನು ಅತ್ಯಂತ ಸಂತೋಷದಿಂದ ಆಚರಿಸುತ್ತಿದ್ದೇವೆ ಎಂದರೆ ಇದರ ಹಿಂದೆ ಲಕ್ಷಾಂತರ ವೀರ ದೇಶ ಭಕ್ತರ ಬಲಿದಾನ,ತ್ಯಾಗವಿದೆ.ಇಂದಿನ ಸ್ವಾತಂತ್ರ್ಯ ನಮ್ಮ ಹಿರಿಯರು ನಮ್ಮಗೆ ಕೊಟ್ಟ ಉಡುಗೊರೆ ನಾವು ಈ ಸ್ವಾತಂತ್ರ್ಯವನ್ನು  ಜವಾಬ್ದಾರಿಯಿಂದ ಬಳಸಬೇಕು ಎಂದರು.

ವಿವಿಧ ಶಾಲಾ  ವಿದ್ಯಾರ್ಥಿಗಳು ನಡೆಸಿದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಕಣ್ಮನ ಸೆಳೆಯಿತು.

ಈ ವೇಳೆ ಸ್ಥಳೀಯ ಮುಖಂಡರಾದ ರವೀಶ್, ಶಿವಕುಮಾರ್ ಆರ್ ಸಿ, ಗ್ರಾಮ ಪಂಚಾಯತಿ ಸದಸ್ಯರಾದ ಆರ್ ಎ, ಶಿವಕುಮಾರ್, ಯುವ ಮುಖಂಡ ಆರ್ ಎ ಸುನಿಲ್, ವಿನೋದ್, ಮಾಜಿ ಅಧ್ಯಕ್ಷ ರು ಆರ್ ಜಿ ಮುನಿರಾಜು, ಆಂಜನೇಯ, ಕಾಂತಮ್ಮ, ಪ್ರಭ, ಆಶಾ, ವೀಣಾ, ಪದ್ಮ, ಶ್ಯಾಮಲಾ, ಎಸ್ ಡಿ ಎಂ ಸಿ ಸದಸ್ಯರಾದ ನರಸಿಂಹ ರಾಜು, ಶಾಲೆಯ ಮುಖ್ಯಪಾಧ್ಯಾಯರು, ಭೋದಕ ಹಾಗೂ ಬೋಧಕೇತರ ಸಿಬ್ಬಂದಿವರ್ಗ ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಗಳ ಉಳಿವಿಗೆ ಜಾಗೃತಿ ಅಗತ್ಯ: ಕೆಜಿ ಹನುಮಂತರಾಯ‘ನಾನು ಸಚಿವನಾಗಿರುವುದು ಶ್ರೀರಾಮುಲುಗೆ ಸಹಿಸಲು ಆಗುತ್ತಿಲ್ಲ’: ಬಿ. ನಾಗೇಂದ್ರ‘ವಂದೇ ಮಾತರಂ’ ಗೀತೆ ಆಕ್ಷೇಪ ವಿವಾದ: ಬಿಜೆಪಿ ಆರೋಪಕ್ಕೆ ಸೋನಿಯಾ ಗಾಂಧಿ ಪರವಾಗಿ ಕಾಂಗ್ರೆಸ್ ಸ್ಪಷ್ಟನೆ!ಭದ್ರಾ ನೀರಿಗಾಗಿ ಆ.18ಕ್ಕೆ ಸಿಎಂ ಜೊತೆ ಸಭೆ: ರೈತರಿಂದ ಹೆದ್ದಾರಿ ತಡೆ ಹಿಂಪಡೆತ!ವರ್ಷದೊಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ ಘೋಷಣೆ!‘RSS ನೋಂದಣಿಯೂ ಇಲ್ಲ, ಆಗೋದೂ ಇಲ್ಲ’: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು!ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್2047ರ ‘ವಿಕಸಿತ ಭಾರತ’ಕ್ಕಾಗಿ ದೊಡ್ಡ ಕನಸು ಕಾಣಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ!80ನೇ ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಕ್ಕೆ ಪ್ರಧಾನಿ ಮೋದಿ ನೀಡಿದ ಸಂದೇಶಗಳಿವು!ಪೆಟ್ರೋಲ್, ಡೀಸೆಲ್ ಮೇಲಿನ ವಿಂಡ್‌ಫಾಲ್ ತೆರಿಗೆ ಕಡಿತಗೊಳಿಸಿದ ಕೇಂದ್ರ!