Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜಗಳ ನಡುವೆ ಅಪನಂಬಿಕೆ ಬಿತ್ತುವ ಕೆಲಸ ಮಾಡಬಾರದು

Advertisement
ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಮಾಜ-ಸಮಾಜಗಳ ನಡುವೆ ಅಪನಂಬಿಕೆ ಬಿತ್ತುವಂತಹ ವಾತಾವರಣ ಸೃಷ್ಟಿಯಾಗಿದೆ. ಪಂಚಮಸಾಲಿ ಸ್ವಾಮೀಜಿಗೆ ಇದೆಲ್ಲಾ ಬೇಕಿತ್ತಾ ಎಂದು ವಿಧಾನ ಪರಿಷತ್‌ಸದಸ್ಯ ಹೆಚ್.‌ವಿಶ್ವನಾಥ್‌ಖಾರವಾಗಿ ಪ್ರಶ್ನಿಸಿದರು.


ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2ಎ ಮೀಸಲಾತಿ ಪಟ್ಟಿ ಭರ್ತಿಯಾಗಿದೆ. ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದವರಿಗೂ ಈ ಬಗ್ಗೆ ಗೊತ್ತಿಲ್ಲ, ಅತ್ತಕಡೆ ಕುರುಬರಿಗೂ ಗೊತ್ತಿಲ್ಲ. 2A ವರ್ಗವನ್ನು ಈಗಾಗಲೇ ಅಕ್ರಮಿಸಿಕೊಂಡಾಗಿದೆ.

ಈಗಾಗಲೇ 45ಕ್ಕೂ ಹೆಚ್ಚು ಜಾತಿಗಳು 2ಎ ಮೀಸಲಾತಿಗೆ ಸೇರ್ಪಡೆಯಾಗಿವೆ. ಅವುಗಳನ್ನು ಪುನರ್‌ಸಮೀಕರಣ ಮಾಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನ ಕೊಡಬೇಕು. ಬರೀ ಭಾಷಣ ಮಾಡಿದರೆ ಸಾಲದು. ಪುನರ್‌ ಸಮೀಕರಣ ಬಳಿಕ 2ಎ ಪಟ್ಟಿಗೆ ಹೊಸದಾಗಿ ಸೇರಿಸಬಹುದು. ಅಲ್ಲಿಯವರೆಗೆ ಸೇರಿಸಲು ಸಾಧ್ಯವಿಲ್ಲ ಎಂದು ವಿಶ್ವನಾಥ್ ತಿಳಿಸಿದರು.

2A ಸರ್ಟಿಫಿಕೆಟ್​ ಯಾರ್ಯಾರೋ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವ ಮಾನದಂಡವೂ ಇಲ್ಲದಂತಾಗಿದೆ. 1989ರಲ್ಲಿ ಕೇವಲ 15 ಜಾತಿಗಳಿದ್ದ 2A ವರ್ಗದಲ್ಲಿ ಇದೀಗ 40-45 ಜಾತಿಗಳು ಬಂದು ಸೇರಿವೆ. ಬೊಮ್ಮಾಯಿ ಕಾಲದಲ್ಲೇ ಸಾದರ ಲಿಂಗಾಯತರು 2ಎ ವರ್ಗಕ್ಕೆ ಬಂದಿದ್ದಾರೆ.

ಸರ್ಕಾರ ಇದನ್ನು ಪುನರ್‌ಸಮೀಕರಣ ಮಾಡಬೇಕು ಎಂದು ಅವರು ತಾಕೀತು ಮಾಡಿದರು. ಶೋಷಿತ ಸಮುದಾಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್​ ಕಲ್ಪಿಸಿದ್ದ ಮೀಸಲಾತಿ ಧೂಳೀಪಟವಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​.ಸಿ.ಮಹದೇವಪ್ಪ ಈ ಕುರಿತು ಗಮನ ನೀಡಬೇಕು. ಕೇವಲ ಭಾಷಣ ಮಾಡಿದರೆ ಸಾಲದು. ತಾಕತ್ತಿದ್ದರೆ ಈಗಾಗಲೇ ಇದರಲ್ಲಿ ಯಾರಾರು ಮೀಸಲಾತಿ ಪಡೆದಿದ್ದಾರೋ ಅವರನ್ನು ತೆಗೆದುಹಾಕಿ ಎಂದು ವಿಶ್ವನಾಥ್‌ಸವಾಲು ಹಾಕಿದರು.

ನೀವು ತೆಗೆದುಹಾಕಿ ಅಂತಿರಾ, ಪಂಚಮಸಾಲಿಗಳು 2ಎ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ವೀರಶೈವ ಲಿಂಗಾಯಿತರು ಮಾತ್ರ ಬಸವಣ್ಣನವರ ಅನುಯಾಯಿಗಳು ಅಲ್ಲ. ನಾವೆಲ್ಲರೂ ಬಸವಣ್ಣನವರ ಅನುಯಾಯಿಗಳು. ಈಗ ದಿನನಿತ್ಯ ಬಸವಣ್ಣನವರನ್ನು ಕೊಲ್ಲುತ್ತಿದ್ದೇವೆ ಎಂದು ಟೀಕಿಸಿದರು.

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಿಜೆಪಿ ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ತತ್ವ ಮತ್ತು ಸಿದ್ಧಾಂತ ಇಲ್ಲದೇ ಇರುವ ಪಕ್ಷವೆಂದರೆ ಅದು ಬಿಜೆಪಿ. ಎಲ್ಲದಕ್ಕೂ ಟೀಕೆ ಮಾಡುವುದು, ಎಲ್ಲದಕ್ಕೂ ಬೆಂಬಲ ಕೊಡುವುದು ಸರಿಯಲ್ಲ ಎಂದು ಹೇಳಿದರು.

ಎಲ್ಲರಿಗೂ ತೊಂದರೆ ಕೊಡಬೇಡಿ. ಸಮಾಜ-ಸಮಾಜಗಳ ನಡುವೆ ಅಪನಂಬಿಕೆ ಹುಟ್ಟುಹಾಕಬೇಡಿ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಲ್ಲಿ ವಿಶ್ವನಾಥ್ ಮನವಿ ಮಾಡಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ